ಪುತ್ತೂರು: ಬಂಟ್ವಾಳದ ಸಚ್ಚಿದಾನಂದ ಶೆಟ್ಟಿ ಮುನ್ನಾಲಾಯಿಗುತ್ತು ಮಹಾರಾಷ್ಟ್ರದ ಮೀರ್ ಭಾಯಂದರ್ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಮಾರ್ಗದರ್ಶನದಲ್ಲಿ ಜಿಲ್ಲಾ ಅಧ್ಯಕ್ಷ ರವಿ ವ್ಯಾಸ್ ಸಚ್ಚಿದಾನಂದ ಶೆಟ್ಟಿ ಹೆಸರು ಘೋಷಣೆ ಮಾಡಿದರು.
ಚಿಕ್ಕ ಪ್ರಾಯದಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಭಾವಕ್ಕೆ ಒಳಗಾದ ಬಂಟ್ವಾಳದ ಮುನ್ನಲಾಯಿಯ ಸಚ್ಚಿದಾನಂದ ಶೆಟ್ಟಿ ನಂತರ ಮುಂಬೈ ಮಹಾನಗರಿಯಲ್ಲಿ ವ್ಯವಹಾರ ಪ್ರಾರಂಭಿಸಿದರು.
ಬಿಜೆಪಿಯಲ್ಲಿ ಹಂತ ಹಂತವಾಗಿ ವಿವಿಧ ಜವಾಬ್ದಾರಿ ನಿರ್ವಹಿಸಿ ಇಂದು ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರೆ.

ಬಂಟ್ವಾಳದ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪದಾಧಿಕಾರಿಗಳಲ್ಲಿ ಓರ್ವರಾದ ಸಚ್ಚಿದಾನಂದ ಶೆಟ್ಟಿ ಬಂಟ್ವಾಳ ಚುನಾವಣೆಯಲ್ಲಿ ರಾಜೇಶ್ ನಾಯ್ಕ್ ಪರ ಹಾಗೂ ಲೋಕಸಭಾ ಚುನಾವಣೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು.
ನಳಿನ್ ಕುಮಾರ್ ಕಟೀಲ್ 2009ರಲ್ಲಿ ಮೊದಲ ಬಾರಿ ಸಂಸದ ಅಭ್ಯರ್ಥಿ ಆದಾಗ ಮೊಟ್ಟಮೊದಲು ಸನ್ಮಾನಿಸಿದವರು ಸಚ್ಚಿದಾನಂದ ಶೆಟ್ಟಿ.
ಖ್ಯಾತ ಯಕ್ಷಗಾನ ಕಲಾವಿದ ರಾಜ್ಯೋತ್ಸವ ಫ್ರಶಸ್ತಿ ಪುರಸ್ಕೃತ ಪುತ್ತೂರಿನ ದಿ. ಶ್ರೀಧರ್ ಭಂಡಾರಿರವರ ಮಗಳು ಶಾಂತಲಾ ಶೆಟ್ಟಿಯನ್ನು ಸಚ್ಚಿದಾನಂದ ಶೆಟ್ಟಿಯವರು ವಿವಾಹವಾಗಿದ್ದು ಸದ್ಯ ಮಹಾರಾಷ್ಟ್ರದ ಮುಂಬಾಯಿಯಲ್ಲಿ ನೆಲೆಸಿದ್ದಾರೆ