Ad Widget

ರಾಜ್ಯದಲ್ಲಿ ಲಾಕ್ ಡೌನ್ ಇಲ್ಲ – ಈ ಬಗ್ಗೆ ವದಂತಿ ಹಬ್ಬಿಸಿದರೆ ಕಠಿನ ಕ್ರಮ : ಆರೋಗ್ಯ ಸಚಿವ ಕೆ ಸುಧಾಕರ್

dr-sudhakar
Ad Widget

Ad Widget

Ad Widget

ಬೆಂಗಳೂರು : ನ 29 :  ವಿದೇಶದಲ್ಲಿ ಕೊರೊನಾ ವೈರಸ್‌ ನ ಹೊಸ ರೂಪಾಂತರ ತಳಿ ಪತ್ತೆಯಾದ ಬಳಿಕ  ಕೆಲವೊಂದು ಮಾಧ್ಯಮಗಳು  ರಾಜ್ಯದಲ್ಲಿ  ಮುಂದಿನ ದಿನಗಳಲ್ಲಿ ಮತ್ತೊಂದು ಹಂತದ ಲಾಕ್‌ ಡೌನ್‌ಮಾಡಲಾಗುತ್ತದೆ ಎಂದು ವದಂತಿ ಹಬ್ಬಿಸಿದ್ದು ಈ ಬಗ್ಗೆ ಆರೋಗ್ಯ ಸಚಿವ ಕೆ ಸುಧಾಕರ್‌ ಸ್ಪಷ್ಟನೆ ನೀಡಿದ್ದು “  ಲಾಕ್‌ಡೌನ್‌‌ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ. ಈ ಬಗ್ಗೆ ವದಂತಿ ಹಬ್ಬಿಸಿದರೆ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ

Ad Widget

Ad Widget

Ad Widget

Ad Widget

Ad Widget

  ಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಜ್ಯದಲ್ಲಿ ಲಾಕ್‌ಡೌನ್‌ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ. ಲಾಕ್‌ಡೌನ್‌ ಬಗ್ಗೆ ಯಾರೂ ಸುಳ್ಳು ಸುದ್ದಿ ಹಬ್ಬಿಸಬಾರದು ಎಂದು ಅವರು ಮನವಿ ಮಾಡಿದ್ದಾರೆ

Ad Widget

Ad Widget

Ad Widget

Ad Widget

Ad Widget

“ಸರ್ಕಾರ ಹೇಳುವ ತನಕ ಜನತೆ ಗೊಂದಲಕ್ಕೊಳಗಾಗಬಾರದು. ಲಾಕ್‌ಡೌನ್‌ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದರೆ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಹೇಳಿದ್ದಾರೆ.

“ಲಾಕ್‌ಡೌನ್‌ ಬಗ್ಗೆ ಕೆಲವು ಮಾಧ್ಯಮಗಳು ವರದಿ ಮಾಡುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿತ್ತು. ಲಾಕ್‌ಡೌನ್‌ ಬಗ್ಗೆ ಸರ್ಕಾರದಿಂದ ಅಧಿಕೃತ ಮಾಹಿತಿ ಬಂದ ಬಳಿಕ ಜನರು ನಂಬಬೇಕು. ಸದ್ಯಕ್ಕೆ ಲಾಕ್‌ಡೌನ್‌ ಬಗ್ಗೆ ರಾಜ್ಯ ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ” ಎಂದಿದ್ದಾರೆ̤

Ad Widget

Ad Widget

Ad Widget

Ad Widget

“ನಾಳೆ ಬೆಳಗ್ಗೆ 10 ಗಂಟೆಗೆ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ತಾಂತ್ರಿಕಾ ಸಲಹಾ ಸಮಿತಿಯನ್ನೂ ಸಭೆಗೆ ಆಹ್ವಾನಿಸಲಾಗಿದೆ. ಓಮ್ರಿಕಾನ್‌, ಜಿನೋಮಿಕ್‌‌ ಸೀಕ್ವೇನ್‌ ಪತ್ತೆಯಾದ ಮೇಲೆ ಸರಿಯಾದ ಮಾಹಿತಿ ಸಿಗಲಿದೆ” ಎಂದು ತಿಳಿಸಿದ್ದಾರೆ.

“12 ದೇಶಗಳಲ್ಲಿ ಓಮ್ರಿಕಾನ್‌‌ ವೈರಸ್‌ ಪತ್ತೆಯಾಗಿದ್ದು, 12 ದೇಶಗಳಿಂದ ಬಂದವರ ಮೇಲೆ ನಿಗಾ ವಹಿಸಲಾಗಿದೆ. ಆಫ್ರಿಕನ್‌ ದೇಶಗಳಲ್ಲಿ ರಾಜ್ಯಕ್ಕೆ ಬಂದವರ ಮೇಲೆ ನಿಗಾವಹಿಸಲಾಗಿದೆ. ಓಮ್ರಿಕಾನ್‌ ವೈರಸ್‌‌‌ ಬಹಳ ವೇಗವಾಗಿ ಹರಡುತ್ತಿದೆ. ಆದರೆ, ಇದು ಅಷ್ಟೊಂದು ಅಪಾಯಕಾರಿ ಅಲ್ಲ ಎಂದಿದ್ದಾರೆ

Ad Widget

Leave a Reply

Recent Posts

5 guarantee | ಖಚಿತವಾದ ಪಂಚ ಯೋಜನೆಗಳು: ಬಡವರ-ಮಧ್ಯಮ ವರ್ಗದವರ ಕಲ್ಯಾಣಕ್ಕೆ ಕ್ರಾಂತಿಕಾರಕ ಮುನ್ನುಡಿ ಬರೆದ ಕಾಂಗ್ರೆಸ್ ಸರ್ಕಾರ – ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯರಿಂದ ಘೋಷಣೆ : 5 ಯೋಜನೆಗಳ ಪೂರ್ತಿ ವಿವರ ಇಲ್ಲಿದೆ : ನಳಿನ್, ಸಿ.ಟಿ.ರವಿ, ಬಜರಂಗದಳದ ಪದವಿದರರಿಗೂ ನಮ್ಮ ಯೋಜನೆ ಫ್ರೀ ಎಂದು ಕಾಲೆಳೆದ ಕಾಂಗ್ರೇಸ್..!

error: Content is protected !!
%d bloggers like this: