ಮಂಗಳೂರಿನ ಆಯುಷ್ಮಾನ್ ನೋಡೆಲ್ ಆಫೀಸರ್ ಹಾಗೂ ಕುಷ್ಠರೋಗ ವಿಭಾಗದ ಆರೋಗ್ಯಾಧಿಕಾರಿ ಡಾ.ರತ್ನಾಕರ್ ತನ್ನ ಕಚೇರಿಯ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ದೂರುದಾರರು ಹಾಗೂ ಕಿರುಕುಳಕ್ಕೆ ಒಳಗಾದವರು ಸೇರಿದಂತೆ ಒಟ್ಟು 10 ಮಂದಿ ಮಹಿಳೆಯರನ್ನು ಮಂಗಳೂರು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಆರೋಪಿಯನ್ನು ಶುಕ್ರವಾರ ರಾತ್ರಿ ಪೊಲೀಸರು ಬಂಧಿಸಿದ ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ಈ ವೇಳೆ ಹೆಚ್ಚಿನ ವಿಚಾರಣೆಗಾಗಿ ಎರಡು ದಿನಗಳ ಕಾಲ ಆತನನ್ನು ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ನೀಡಿತ್ತು . ಸದ್ಯ ಕಸ್ಟಡಿಯಲ್ಲಿ ಪೊಲೀಸರು ಆತನನ್ನು ತೀವ್ರವಾಗಿ ವಿಚಾರಣೆ ನಡೆಸಿದ್ದು, ಈ ವೆಳೆ ಬಗೆದಷ್ಟು ರತ್ನನ ಕಾಮ ಪ್ರಪಂಚ ಹೊರ ಬರುತ್ತಿದೆ ಎಂದು ಮೂಲಗಳು ತಿಳಿಸಿವೆ.
ಟೂರು ಕರೆದುಕೊಂಡು ಹೋಗಿ ಕಿರುಕುಳ
ರತ್ನಾಕರ್ ಈ ಹಿಂದೆ ತನ್ನ ಸಹದ್ಯೋಗಿ ಮಹಿಳೆಯರನ್ನು ಕರೆದುಕೊಂಡು ಮುರುಡೇಶ್ವರ, ಕುಂದಾಪುರ, ಮಡಿಕೇರಿ, ಪಿರಿಯಾಪಟ್ಟಣ ಮಾತ್ರವಲ್ಲದೆ ಹೊರ ಜಿಲ್ಲೆಗಳಿಗೂ ತೆರಳಿದ್ದು ಅಲ್ಲಿಯೂ ಲೈಂಗಿಕ ದೌರ್ಜನ್ಯವೆಸಗಿ ಕಿರುಕುಳ ನೀಡಿದ್ದು ತಿಳಿದುಬಂದಿದೆ. ಆರೋಗ್ಯ ಇಲಾಖೆಯಾ ಅಧಿಕಾರಿಯಾಗಿದ್ದ ಆರೋಪಿ ಡಾ| ರತ್ನಾಕರ್ ಮತ್ತು ಆತನ ಮೊಬೈಲ್ ವಶಪಡಿಸಿಕೊಂಡಿದ ಪೊಲೀಸರು ಅಳವಾದ ತನಿಖೆ ಕೈಗೊಂಡಿದ್ದರು.
Watch Video : ಹಿಂದು ಯುವ ಸಮ್ಮಿಲನ
ಎಂಟು ಜನ ಹೆಣ್ಣುಮಕ್ಕಳ ಜೊತೆ ವೈದ್ಯ ರತ್ನಾಕರ್ ಅನುಚಿತ ವರ್ತನೆ ತೋರಿರೋದು ವಿಡಿಯೋ, ಫೋಟೋಗಳಲ್ಲಿ ಕಂಡುಬಂದಿತ್ತು. ಈ ಹಿನ್ನಲೆಯಲ್ಲಿ ಆ ಮಹಿಳೆಯರಿಗೆ ವಿಚಾರಣೆಗೆ ಹಾಜರಾಗಲು ಪೊಲೀಸರು ನೋಟೀಸ್ ಜಾರಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಶನಿವಾರ ಮೂವರು ಹಾಗೂ ಆದಿತ್ಯವಾರ ಕೆಲವರು ಸೇರಿ ಒಟ್ಟು ಮಂದಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಬಹಿರಂಗವಾದ ಬಳಿಕವೂ ಕಿರುಕುಳಕ್ಕೆ ಒಳಗಾಗಿದ್ದಾರೆ ಎನ್ನಲಾದ ಮಹಿಳೆಯರು ದೂರು ನೀಡಲು ಮುಂದೆ ನೀಡಿರಲಿಲ್ಲ. ಹೀಗಾಗಿ ಸ್ಥಳೀಯ ಮಹಿಳಾ ಸಂಘಟನೆಯ ಸದಸ್ಯೆಯೊಬ್ಬರು ದೂರು ದಾಖಲಿಸಿದ್ದರು. ಪೊಲೀಸರು ದೂರು ದಾಖಲಿಸಿದ ಬಳಿಕ ಆಕೆಯ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ ̤

ರತ್ನಾಕರನ ಎರಡು ದಿನಗಳ ಪೊಲೀಸ್ ಕಸ್ಟಡಿ ಅವಧಿ ಸೋಮವಾರ ಪೂರ್ಣಗೊಳ್ಳುವ ಹಿನ್ನಲೆಯಲ್ಲಿ ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
