ಮಂಗಳೂರು : ನಾಗನಕಲ್ಲು ದ್ವಂಸ ಪ್ರಕರಣದ ಆರೋಪಿಗಳ ಬಂಧಿಸಿದ ಪೊಲೀಸರನ್ನು ಹಾಗೂ ಕಮಿಷನರ್ ಎನ್. ಶಶಿಕುಮಾರ್ ಅವರನ್ನು ವಜ್ರದೇಹಿ ಸ್ವಾಮೀಜಿ ಅಭಿನಂದಿಸಿದ್ದಾರೆ.
ಆರೋಪಿಗಳನ್ನು ಬಂಧಿಸಿದರೆ ಚಿನ್ನದ ಪದಕ ನೀಡುತ್ತೇವೆ ಎಂದು ನಾಗನಕಲ್ಲು ದ್ವಂಸ ಪ್ರಕರಣವನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಸ್ವಾಮೀಜಿ ಹೇಳಿಕೆ ನೀಡಿದ್ದರು.
ಈ ಬಗ್ಗೆ ನಿಖರ ನ್ಯೂಸ್ ಗೆ ಮಾಹಿತಿ ನೀಡಿದ ವಜ್ರದೇಹಿ ಸ್ವಾಮೀಜಿ, ಚಿನ್ನದ ಪದಕ ಬೇಡ ಎಂದು ಕಮಿಷನರ್ ತಿರಸ್ಕರಿಸಿದರು ಎಂದರು. ನಾವು ಜನರ ತೆರಿಗೆ ಹಣದಲ್ಲಿ ದುಡಿಯುವವರು ನಿಮ್ಮ ಸಹಕಾರ ಬೇಕಷ್ಟೇ ಎಂದರು ಎಂದು ಸ್ವಾಮಿಜಿ ತಿಳಿಸಿದರು.
ದೇವಸ್ಥಾನದ ಸಮಿತಿಯವರು ಸಿಸಿಟಿವಿ ಹಾಕಿ ಇಂತಹ ದುರ್ಘಟನೆಗಳು ನಡೆಯದಂತೆ ತಡೆಯಬೇಕು ಪೊಲೀಸ್ ಇಲಾಖೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಸ್ವಾಮಿಜೀ ತಿಳಿಸಿದ್ದಾರೆ.
ಮಂಗಳೂರು ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಡುಕೋಡಿ ಗ್ರಾಮದ ಬಂಗ್ರ ಕೂಳೂರು ಕೋಟ್ಯಾನ್ ಕುಟುಂಬದ ನಾಗಬನ ಅಕ್ಟೋಬರ್ 21ರಂದು ಒಂದು ಕಲ್ಲನ್ನು ಧ್ವಂಸಗೊಳಿಸಿ ಉಳಿದ 5 ಕಲ್ಲುಗಳನ್ನುಅಪವಿತ್ರಗೊಳಿಸಿದ್ದರು.
ನಾಗಬನ ಧ್ವಂಸಗೊಳಿಸಿದವರನ್ನು ಬಂಧಿಸಿದರೆ ಚಿನ್ನದ ಪದಕ ಹೇಳಿಕೆ – ಅಭಿನಂದನೆ ಸ್ವೀಕರಿಸಿದ ಮಂಗಳೂರು ಪೊಲೀಸ್ ಕಮಿಷನರ್ ಏನಂದರು ಗೊತ್ತೇ? – ವಜ್ರದೇಹಿ ಶ್ರೀಗಳ Exclusive ಸಂದರ್ಶನ
ಇದಾದ ಬಳಿಕ ನವೆಂಬರ್ 12 ರಂದು ಮಂಗಳೂರು ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕಲ್ ನಾಗಬನದ ಮೂರ್ತಿಗಳನ್ನು ಕಿತ್ತೆಸೆದು ಹಾನಿಗೊಳಿಸಿ ಅಪವಿತ್ರಗೊಳಿಸಿದ್ದರು.
ಇನ್ನು ನಾಗನ ಕಲ್ಲುಗಳನ್ನು ಭಗ್ನಗೊಳಿಸಿ, ಅಪವಿತ್ರಗೊಳಿಸಿ ಕೋಮು ಸೌಹಾರ್ದತೆ ಕದಡಲು ಸಂಚು ಹೂಡಿರುವ 8 ಜನ ಆರೋಪಿಗಳನ್ನು ಬಂಧಿಸಲಾಗಿದೆ.