Ad Widget

ಸುಳ್ಯ: ಗಾಂಧಿ ವಿಚಾರ ವೇದಿಕೆ ವತಿಯಿಂದ ಮಾಸದ ಸಂವಾದ: ಸಮಾಜದಲ್ಲಿನ ಅಸಮಾನತೆಗಳ ನಿವಾರಣೆಗೆ ಸಂಪ್ರದಾಯಗಳನ್ನು ನೂತನವಾಗಿಸಬೇಕು – ವಿಶ್ವೇಶ್ವರ ಭಟ್‌ ಬಂಗಾರಡ್ಕ

Ad Widget

Ad Widget

Ad Widget

ಸುಳ್ಯ, ನ.29: ಸಮಾಜದಲ್ಲಿ ಶೋಷಣೆಗಳು ಇರುವುದು ಸತ್ಯ ಸಂಗತಿ. ಅದು ಎಲ್ಲಾ ಜಾತಿಯ ಒಳಗೆ, ಧರ್ಮದ ಒಳಗೂ ಇದೆ. ಆದರೆ ಈ ಸಮಸ್ಯೆಯ ನಿವಾರಣೆಗೆ ಎಲ್ಲಾ ಸಂಪ್ರದಾಯಗಳೂ ನಿರಂತರವಾಗಿ ನೂತನವಾಗಿಸಬೇಕು ಎಂದು ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್‌ ಬಂಗಾರಡ್ಕ ಹೇಳಿದರು. ಅವರು ಗಾಂಧಿ ವಿಚಾರ ವೇದಿಕೆಯ ಸುಳ್ಯ ತಾಲೂಕು ಘಟಕದ ಆಶ್ರಯದಲ್ಲಿ ಅಜ್ಜಾವರ ಪಲ್ಲತ್ತಡ್ಕದ ರಾಮ ಅವರ ಮನೆಯಲ್ಲಿ ನಡೆದ ಮಾಸದ ಸಂವಾದ ಕಾರ್ಯಕ್ರಮದಲ್ಲಿ ಅಂಬೇಡ್ಕರ್‌ ಚಿಂತನೆಗಳು ನಿತ್ಯ ಜೀವನದಲ್ಲಿ ಅಳವಡಿಕೆಯ ಬಗ್ಗೆ ವಿಚಾರ ಮಂಡನೆ ಮಾಡಿದರು.

Ad Widget

Ad Widget

Ad Widget

Ad Widget

ಅಂಬೇಡ್ಕರ್‌ ಅವರ ಚಿಂತನೆಗಳು ಸಾರ್ವಕಾಲಿಕವಾಗಿದೆ. ಆ ಚಿಂತನೆಗಳ ಮೂಲಕ ಸಮಾಜದ ಸುಧಾರಣೆ ಆಗಬೇಕಾದ್ದೂ ನಿಜವೇ ಆಗಿದೆ. ಆದರೆ ಸುಧಾರಣೆ ಹೇಗೆ ಎನ್ನುವುದು ಪ್ರಶ್ನೆಯಾಗಿದೆ. ಅದರಲ್ಲೂ ನಿತ್ಯ ಜೀವನದಲ್ಲಿ ಅಳವಡಿಕೆಗೆ ಪಪ್ರತಿಯೊಂದು ಹಂತದಲ್ಲೂ ಹೆಜ್ಜೆ ಇಡಬೇಕಾಗಿದೆ. ಸ್ವತ: ಶೋಷಣೆಗೆ ಒಳಗಾಗಿ ಅವರು ಹೋರಾಟ ಹೆಜ್ಜೆ ಇರಿಸಿದ್ದರು. ಅಂಬೇಡ್ಕರ್‌ ಅವರಿಗೂ ಪ್ರಧಾನಿಯಾಗುವ ಎಲ್ಲಾ ಅರ್ಹತೆಗಳೂ ಇದ್ದರೂ ಅವರಿಗೆ ಸಾಧ್ಯವಾಗಲಿಲ್ಲ. ಎಲ್ಲಾ ಅರ್ಹತೆಗಳಿದ್ದರೂ ದಲಿತರಿಗೆ ಸಮಾಜದ ಇತರೆಲ್ಲರ ಮಾದರಿಯಲ್ಲಿಯೇ ಸಮಾಜದಲ್ಲಿ ಸ್ಥಾನಮಾನ ಸಿಗುತ್ತದೆ ಎಂದೇನಿಲ್ಲ ಎಂದು ಅಂದೇ ಅಂಬೇಡ್ಕರ್‌ ಅವರೂ ಹೇಳಿದ್ದರು ಎಂದ ವಿಶ್ವೇಶ್ವರ ಭಟ್‌, ಶೋಷಣೆ ಎನ್ನುವುದು ಜಾತೀಯ ಶೋಷಣೆ ಮಾತ್ರಾ ಅಲ್ಲ. ಅದು ಎಲ್ಲೆಡೆಯೂ ಇರುತ್ತದೆ. ಆದರೆ ದುರ್ಬಲ ವರ್ಗದ ಜನರಿಗೆ ಶೋಷಣೆ ನಡೆದರೆ ಎದುರಿಸುವ ಶಕ್ತಿ ಕಡಿಮೆ ಇರುತ್ತದೆ. ಹೀಗಾಗಿ ಗಟ್ಟಿಯಾಗಬೇಕಾದ ಅಗತ್ಯ ಇರುತ್ತದೆ. ಮೀಸಲಾತಿಗಳ ಅವಶ್ಯಕತೆ ಇರುತ್ತದೆ. ಇದರ ಜೊತೆಗೆ ಶಿಕ್ಷಣ, ಆರ್ಥಿಕ ಸುದೃಢತೆ ಅಗತ್ಯವಿದೆ ಎಂದರು.

Ad Widget

Ad Widget

Ad Widget

Ad Widget

ಇಂದಿನ ಬಹುತೇಕ ಶೋಷಣೆಗಳ ಹೆಸರಿನಲ್ಲಿ ಬರುವಂತಹವುಗಳು ಆಚರಣೆ, ಸಂಪ್ರದಾಯದ ಹೆಸರಿನವು. ಇದಕ್ಕಾಗಿ ಸಂಪ್ರದಾಯಗಳನ್ನು ಬದಲಾವಣೆ ಮಾಡಬೇಕಾಗುತ್ತದೆ. ಈ ಬದಲಾವಣೆಯನ್ನೂ ಒಪ್ಪುವ ಮನಸ್ಥಿತಿ ಇರಬೇಕು. ಸಂಪ್ರದಾಯಗಳು ನಿರಂತರವಾಗಿ ನೂತನವಾಗಿಸಬೇಕು. ದಲಿತರೂ ದೇವಸ್ಥಾನದ ಆಡಳಿತದಲ್ಲಿ ಸೇರಿಕೊಳ್ಳಬೇಕು. ಇದು ಸಾಧ್ಯವಾದರೆ ಅಂಬೇಡ್ಕರ್‌ ಚಿಂತನೆಗಳೂ ಸಾಕಾರವಾಗುತ್ತದೆ ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಗಾಂಧಿ ವಿಚಾರ ವೇದಿಕೆಯ ಮಾತೃ ಸಮಿತಿ ಉಪಾಧ್ಯಕ್ಷ, ಮಾಜಿ ಎಂಎಲ್‌ಸಿ ಅಣ್ಣಾ ವಿನಯಚಂದ್ರ, ಪ್ರತೀ ವ್ಯಕ್ತಿಯು ಶಿಕ್ಷಣ ಪಡೆದಾಗ ಸಮಾಜದಲ್ಲಿ ಸುಧಾರಣೆ ಸಾಧ್ಯವಾಗುತ್ತದೆ. ಹೀಗಾಗಿ ಶಿಕ್ಷಣ ಮತ್ತು ಆರೋಗ್ಯದ ಕಡೆಗೆ ಹೆಚ್ಚು ಆದ್ಯತೆ ಇರಬೇಕು. ಆಗ ಅಂಬೇಡ್ಕರ್‌ ಚಿಂತನೆಗಳೂ ಸಾಕಾರವಾಗುತ್ತದೆ ಎಂದರು.

Ad Widget

Ad Widget

ಅತಿಥಿಗಳಾಗಿ ನಿವೃತ್ತ ಗ್ರಾಮಕರಣಿಕ ಪೊಡಿಯ ಭಾಗವಹಿಸಿದರು. ಮನೆಯರಾದ ರಾಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭ ಸುಂದರ ಹಾಗೂ ಬಾಬು ಅವರನ್ನು ಕೃಷಿ ಸಾಧನೆಗಾಗಿ ಗುರುತಿಸಿ ಗೌರವಿಸಲಾಯಿತು. ಸಂವಾದದಲ್ಲಿ ನಿವೃತ್ತ ಪ್ರೊಫೆಸರ್‌ ಬಾಲಚಂದ್ರ ಗೌಡ, ಸುಬ್ರಾಯ ಓಣಿಯಡ್ಕ, ಪೂವಪ್ಪ ಕಣಿಯೂರು, ನಂದರಾಜ ಸಂಕೇಸ, ಶಶಿಧರ್‌ , ರಾಮಚಂದ್ರ , ಪ್ರಕಾಶ್‌ ಮೊದಲಾದವರು ಭಾಗವಹಿಸಿದರು.
ಗಾಂಧಿವಿಚಾರ ವೇದಿಕೆಯ ಕೋಶಾಧಿಕಾರಿ ಕರುಣಾಕರ ಪಲ್ಲತ್ತಡ್ಕ ಸ್ವಾಗತಿಸಿ, ಗಾಂಧಿವಿಚಾರ ವೇದಿಕೆಯ ಅಧ್ಯಕ್ಷ ಲಕ್ಷ್ಮೀಶ ಗಬ್ಲಡ್ಕ ಪ್ರಸ್ತಾವನೆಗೈದರು. ಗಾಂಧಿವಿಚಾರ ವೇದಿಕೆಯ ಜಿಲ್ಲಾಸಮಿತಿ ಉಪಾಧ್ಯಕ್ಷ ಅಚ್ಚುತ ಮಲ್ಕಜೆ ವಂದಿಸಿದರು.ಗಾಂಧಿ ವಿಚಾರ ವೇದಿಕೆಯ ಕಾರ್ಯದರ್ಶಿ ಮಹೇಶ್‌ ಪುಚ್ಚಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.

Ad Widget

Leave a Reply

Recent Posts

error: Content is protected !!
%d bloggers like this: