ಪುತ್ತೂರು : ನ 29 : ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನ.29ರಿಂದ ಒಂದು ವಾರಗಳ ಕಾಲ ಅಷ್ಟಮಂಗಲ ಪ್ರಶ್ನೆ ಚಿಂತನೆ ನಡೆಯಲಿದೆ. ಪ್ರಸಿದ್ದ ಜೋತ್ಯಿರ್‌ವಿದ್ವಾನ್ ವಳಕುಂಜ ವೆಂಕಟರಮಣ ಭಟ್ ನೇತೃತ್ವದಲ್ಲಿ ಪ್ರಶ್ನೆ ಚಿಂತನೆಯೂ ನಡೆಯಲಿದೆ.
ಇದಕ್ಕೆ ಬೇಕಾದ ಸಕಲ ಸಿದ್ದತೆಯೂ ದೇವಸ್ಥಾನದ ಸಮೀಪದ ನಟರಾಜ ವೇದಿಕೆಯಲ್ಲಿ ವ್ಯವಸ್ಥಿತಗೊಳಿಸಲಾಗಿದೆ. ವಿದ್ವಾನ್ ವಳಕುಂಜ ವೆಂಕಟ್ರಮಣ ಭಟ್ ಮತ್ತು ಅವರ ತಂಡವೂ ಅಲ್ಲಿ ಮುಂದಿನ ಒಂದು ವಾರಗಳ ಕಾಲ ಪ್ರಶ್ನೆ ಚಿಂತನೆಯನ್ನು ನಡೆಸಲಿದೆ.
ಇಂದು ನಡೆಯುವ ಪ್ರಶ್ನೆ ಚಿಂತನೆಗೆ ಪೂರ್ವಭಾವಿಯಾಗಿ ನ. 21ರಂದು ಸ್ವರ್ಣ ತಾಂಬೂಲ ಪ್ರಶ್ನಾ ಚಿಂತನೆಯನ್ನು ಹಮ್ಮಿಕೊಳ್ಳಲಾಗಿತ್ತು. ಅದನ್ನು ವಳಕುಂಜ ವೆಂಕಟರಮಣ ಭಟ್ ರವರ ಪುತ್ರ ಪ್ರಶ್ನಾ ಜ್ಯೋತಿಷ್ಯ ಶಾಸ್ತ್ರದಲ್ಲಿ ಮಹಾಪ್ರಬಂಧ ಮಂಡಿಸಿರುವ ಡಾ. ವಳಕುಂಜ ಮುರಳೀಕೃಷ್ಣ ಭಟ್ ರವರು ನೆರವೇರಿಸಿಕೊಟ್ಟಿದ್ದರು.
ಈ ವೇಳೆ ದ್ವಾದಶಿ ರಾಶಿ ಮಂಡಲದಲ್ಲಿ ಸ್ವರ್ಣಾರೂಢರಾಶಿಯಾಗಿ ಧನು ರಾಶಿ ಕಂಡು ಬಂದಿದ್ದು ಅದರಂತೆ ಪ್ರಶ್ನೆ ಚಿಂತನೆಯೂ ಮುಂದುವರಿಯಲಿದೆ.

ಪ್ರಶ್ನೆ ಚಿಂತನೆಯ ಉದ್ದೇಶ
- 2 ವರ್ಷಗಳ ಹಿಂದೆ ಬ್ರಹ್ಮವಾಹಕರ ಶಿರದಿಂದ ಉತ್ಸವಮೂರ್ತಿ ಯ ಪುಷ್ಪಕನ್ನಡಿ ಯ ಮೇಲ್ಭಾಗ ಭೂಸ್ಪರ್ಶ ಮಾಡಿದ್ದರ ಕಾರಣ ಮತ್ತು ಅದಕ್ಕೆ ನಿವೃತ್ತಿ ಪರಿಹಾರ
- ಶಾಸಕರ ನೇತೃತ್ವದಲ್ಲಿ ಈಗಿನ ವ್ಯವಸ್ಥಾಪನಾ ಸಮಿತಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಮಹಾ ಅಭಿವೃದ್ಧಿ ಯೋಜನೆಯ ಪ್ರತಿಯೊಂದು ಕಾಮಗಾರಿಗೂ ದೈವಾನುಕೂಲ ಇದೆಯೇ ಎಂದು ತಿಳಿದುಕೊಂಡು ಮುಂದಡಿ ಇಡಲು ಚಿಂತನೆ
- ಇದು ದೇವರು – ಭಕ್ತರ ದೂತರ ಸಂಭಾಷಣೆ
- ದೇವರ ಸಾನ್ನಿಧ್ಯ ವೃದ್ಧಿಗೆ ಮಾಡವೇಕಾದ ನಿತ್ಯಕೈಂಕರ್ಯಗಳಲ್ಲಿ ಲೋಪದೋಷಗಳಿದ್ದಲ್ಲಿ ಅವುಗಳ ಬಗ್ಗೆ ಗಮನ ಸೆಳೆಯುವುದು ಮತ್ತು ಪರಿಹಾರ ಪಡೆದುಕೊಳ್ಳುವುದು
- ಲೋಪದೋಷಗಳಿದ್ದಲ್ಲಿ ಅವುಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ಸರಿಪಡಿಸಿಕೊಳ್ಳಲು ಮಾರ್ಗದರ್ಶನ ಪಡಕೊಳ್ಳಲು
ಸ್ವರ್ಣ ತಾಂಬೂಲ ಪ್ರಶ್ನೆ ಚಿಂತನೆಯ ವಿಡಿಯೋ :
ಶುಭ ಶಕುನ :
ಸ್ವರ್ಣ ತಾಂಬೂಲ ಪ್ರಶ್ನೆ ಚಿಂತನೆಯ ಸಂದರ್ಭ ಅದರ ಆರಂಭಿಕ ಭಾಗವಾಗಿ ಬಾಲಕಿ ಗರಿಮಾ ಅವರು ತುಂಬೆ ಹೂವು, ಭತ್ತ ಹಾಗೂ ಸ್ವರ್ಣ ನಾಣ್ಯವನ್ನು ಕೈಯಲ್ಲಿ ಹಿಡಿದು ದ್ವಾದಶ ರಾಶಿ ಮಂಡಲಕ್ಕೆ ಮೂರು ಸುತ್ತು ಬಂದು ಪದ್ದತಿಯಂತೆ ಜ್ಯೋತಿಷ್ಯ ಶಾಸ್ತ್ರಜ್ಣರು ,ಬಿಡಿಸಿದ ಚೌಕಕಾರದ ಮಂಡಲದ ಒಂದು ಚೌಕದಲ್ಲಿ ಇರಿಸಿದ್ದಾಳೆ. ಬಾಲಕಿಯೂ ಸ್ವರ್ಣ ಇರಿಸಿದ ಅದೇ ಸಮಯದಲ್ಲಿ ದೇವರ ಉತ್ಸವ ಮೂರ್ತಿಯ ನಿತ್ಯ ಬಲಿಯೂ ದೇವಸ್ಥಾನದ ಗೋಪುರವನ್ನು ತಲುಪಿದೆ. ಇದೊಂದು ವಿಶೇಷ ಘಟನೆಯಾಗಿದ್ದೂ ಸ್ವತಃ ದೇವರ ಇಷ್ಟಾನುಸಾರವೇ ಸ್ವರ್ಣಪ್ರಶ್ನೆ ಇಡಲಾಗಿದೆ ಎಂಬುದರ ಸೂಚಕ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಅಭಿಪ್ರಾಯಿಸಿದ್ದಾರೆ.
ವಿಡಿಯೋ ನೋಡಿ : ಸುರತ್ಕಲ್ ನಲ್ಲಿ ನಡೆದ ಹಿಂದು ಯುವ ಸಮ್ಮಿಲನದಲ್ಲಿ ಬಾಲವಾಗ್ಮಿ ಕು| ಹಾರಿಕಾ ಮಂಜುನಾಥರವರಿಂದ ದಿಕ್ಸೂಚಿ ಭಾಷಣ