ಮಂಗಳೂರು: ಶಿವಮೊಗ್ಗದಿಂದ ಮಂಗಳೂರಿಗೆ ಕಾರ್ಕಳ ಮಾರ್ಗವಾಗಿ ಬರುವ ಖಾಸಗಿ ಬಸ್ಸನ್ನು ಪೊಲೀಸರು ಬಿಕರ್ನಕಟ್ಟೆ ಬಳಿ ನಿಲ್ಲಿಸಿ 500₹ ದಂಡ ಹಾಕಿದ್ದಾರೆ.
ಕರ್ಕಶ ಹಾರ್ನ್ ಹಾಕಿದ್ದಾರೆ ಎಂದು ದಂಡ ಹಾಕಿದ ಪೊಲೀಸರು ರಶೀದಿ ಕೇಳಿದಾಗ ತಡಕಾಡಿದ್ದಾರೆ. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಘಟನೆ ಎಂದು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ವಿಡಿಯೋ
ಚಾಲಕ ಹಣ ನೀಡಿ ರಶೀದಿ ಕೊಡುವಂತೆ ವಾಗ್ವಾದ ಮಾಡಿದ್ದಾನೆ . ಇದನ್ನು ಬಸ್ ನಲ್ಲಿದ್ದ ಪ್ರಯಾಣಿಕರು ವಿಡಿಯೋ ಮಾಡಿದ್ದಾರೆ.
ವಿಡಿಯೋ ಮಾಡುತ್ತಿದ್ದೇವೆ ಎಂದು ಪೊಲೀಸರಿಗೆ ತಿಳಿಸಿದ ಕೂಡಲೇ ವಾಗ್ವಾದಕ್ಕೆ ಇಳಿದಿದ್ದರೆ. ರಿಸಿಪ್ಟ್ ಬರುತ್ತಿಲ್ಲ ಎಂದು 500 ರೂಪಾಯಿ ಹಣವನ್ನು ಚಾಲಕನಿಗೆ ತೆಗೆದುಕೊಳ್ಳಲು ಹೇಳುವ ದೃಶ್ಯಗಳು ಆ ವಿಡಿಯೋದಲ್ಲಿವೆ.
ರಿಸಿಪ್ಟ್ ಬೇಕೆ ಬೇಕು ಎಂದು ಹಠ ಹಿಡಿದ ಚಾಲಕ ಕದ್ರಿ ಪೋಲಿಸ್ ಠಾಣೆಗೆ ಬಂದು ಹಣ ಕೊಡುತ್ತೇನೆ ಎನ್ನುವ ಮಾತುಗಳು ಈ ವಿಡಿಯೋದಲ್ಲಿ ಕೇಳಿಬರುತ್ತಿವೆ.
ವಾಗ್ವಾದ ಜಾಸ್ತಿಯಾದಗ ತಮ್ಮ ಇಲಾಖಾ ವಾಹನದಲ್ಲಿ ಸ್ಥಳದಿಂದ ಒಮ್ಮೆಲೇ ಕಾಲ್ಕಿತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯರು.
ವೈರಲ್ ವಿಡಿಯೋ