ಪುತ್ತೂರು: ಐವರು ಕೊಂಬೆಟ್ಟು ಕಾಲೇಜು ವಿದ್ಯಾರ್ಥಿಗಳನ್ನು ಠಾಣೆಗೆ ಕರೆದೊಯ್ದಿದ್ದಾರೆ ಎಂಬ ವಿಚಾರದಲ್ಲಿ ಹಿಂದೂ ಸಂಘಟನೆಗಳು ಜಮಾಯಿಸಿ ನಂತರ ಪೊಲೀಸ್ ಅಧಿಕಾರಿಗಳು ಮಾತುಕತೆ ನಡೆಸಿ ಶಾಂತಗೊಂಡ ಬೆನ್ನಲ್ಲೇ SDPI ಯ ಕಾರ್ಯಕರ್ತರು ಸೇರಿದರು.
ಹಿಂದೂ ಜಾಗರಣ ಕಾರ್ಯಕರ್ತರು ಠಾಣೆಯಲ್ಲಿ ಜಮಾಯಿಸಿ ಡಿವೈಎಸ್ಪಿ ಜೊತೆ ಮಾತುಕತೆ ನಡೆಸಿ ತೆರಳಿದ ಬಳಿಕ ಮುಸ್ಲಿಂ ವಿದ್ಯಾರ್ಥಿಗಳನ್ನೂ ಠಾಣೆಗೆ ಕರೆದೊಯ್ದಿದ್ದಾರೆ ಎಂದು ಆರೋಪಿಸಿ ಸಿಎಫ್ಐ, ಪಿಎಫ್ ಐ ಮತ್ತು ಮುಸ್ಲಿಂ ಸಂಘಟನೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಜಮಾಯಿಸಿದರು.
ಮುಸ್ಲಿಂ ಪರ ಸಂಘಟನೆಗಳಿಂದ ಧರಣಿ:
ಬಳಿಕ ಡಿವೈಎಸ್ಪಿ ಜೊತೆ ಮಾತುಕತೆ ನಡೆಸಿದ ಮುಸ್ಲಿಂ ಮುಖಂಡರು ಮುಂದೆ ನ್ಯಾಯ ಸಿಗದಿದ್ದರೆ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಪಿಎಫ್ಐ ಜಿಲ್ಲಾಧ್ಯಾಕ್ಷ ಜಾಬೀರ್ ಅರಿಯಡ್ಕ, ಸಿಎಫ್ಐ ಜಿಲ್ಲಾ ಕೋಶಾಧಿಕಾರಿ ಸವಾದ್ ಕಲ್ಲರ್ಪೆ ಸೇರಿದಂತೆ SDPI ಕಾರ್ಯಕರ್ತರು ಉಪಸ್ಥಿತರಿದ್ದರು.
ಹಿಂದೂ ಸಂಘಟನೆಗಳಿಂದ ಧರಣಿ