ಮಂಗಳೂರು, ನ 26 : ವೆನ್ಲಾಕ್ ಆಸ್ಪತ್ರೆಯ ಕುಷ್ಟ ರೋಗ ವೈದ್ಯಾಧಿಕಾರಿ ಡಾ. ರತ್ನಾಕರ್ ಕಾಮ ಪುರಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ವಿರುದ್ಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.
ಮಹಿಳಾ ಸಂಘಟನೆಯೊಂದರ ಸದಸ್ಯೆ ಶ್ವೇತಾ ಎಂಬವರ ದೂರು ನೀಡಿದ್ದಾರೆ.
ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ, ದೌರ್ಜನ್ಯ ನೀಡಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಹೇಳಿಕೆ ನೀಡಿದ್ದಾರೆ.
ಸಂತ್ರಸ್ಥ ಯುವತಿಯರು, ಮಹಿಳೆಯರನ್ನು ಮಹಿಳಾ ಠಾಣೆ ಇನ್ಸ್ಪೆಕ್ಟರ್ ಸಂಪರ್ಕ ಮಾಡಿದ್ದರು. ದೌರ್ಜನ್ಯ ಕ್ಕೆ ಒಳಗಾದವರು ದೂರು ನೀಡುವುದಕ್ಕೆ ಹಿಂಜರಿದಿದ್ದಾರೆ ಎಂದರು.
ಇದನ್ನೂ ಓದಿ:
ಮಂಗಳೂರು : ವೆನ್ಲಾಕ್ ಆಸ್ಪತ್ರೆಯ ಕುಷ್ಟ ರೋಗ ವಿಭಾಗದ ವೈದ್ಯನ ʼದುಷ್ಟʼ ಕೃತ್ಯ – ಒಂಬತ್ತು ಮಂದಿ ಸಹೋದ್ಯೋಗಿ ಯುವತಿಯರ ಜತೆ ರೋಮಾನ್ಸ್ | ಸಿಬಂದಿಗಳ ಮೊಬೈಲ್ ನಲ್ಲಿ ಸಲ್ಲಾಪದ ವಿಡಿಯೋ ಸೆರೆ – ಸದ್ಯ ಸಸ್ಪೆಂಡ್ ನ ಬರೆ | ಇಲ್ಲಿದೆ ಡಾ| ರತ್ನಾಕರನ ಡಿಸೈನ್ ಡಿಸೈನ್ ರಸಿ’ಕತೆ’..!!! https://nikharanews.in/2021/11/26/mangalore-doctor-romance-with-collegue-staff/
ಮಹಿಳೆಯರು ತನಿಖೆ ಸಂದರ್ಭ ಮಾಹಿತಿ ನೀಡುವುದಾಗಿ ಹೇಳಿದ್ದಾರೆ. ದೂರು ನೀಡಿದರೆ ನಮಗೆ ತೊಂದರೆಯಾಗಬಹುದೆಂದು ಎಂದು ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮಹಿಳಾ ಸಂಘಟನೆ ಸದಸ್ಯೆ ದೂರನ್ನು ನೀಡಿದ್ದಾರೆ. ಆ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ್ದೇವೆ ಎಂದು ಕಮಿಷನರ್ ಹೇಳಿದರು.
ಕಮಿಷನರ್ ಮಾಹಿತಿ:
ಇದೀಗ ವೈದ್ಯಾಧಿಕಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ದೌರ್ಜನ್ಯ ಕ್ಕೆ ಒಳಗಾದವರಿಂದ ಹೇಳಿಕೆ ಪಡೆದು ಬಳಿಕ ಅಗತ್ಯ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿದರು.
ಜಿಲ್ಲಾಧಿಕಾರಿ ಮಾಹಿತಿ :