ವರದಿಗಳು
ಮಂಗಳೂರು : ಸಹದ್ಯೋಗಿ ಯುವತಿಯರ ಜತೆ ವೈದ್ಯಾಧಿಕಾರಿ ಚೆಲ್ಲಾಟ ಪ್ರಕರಣ: ಅನಾಮಧೇಯ ಕರೆಗಳು ಬರುತ್ತಿತ್ತು – ಪ್ರಕರಣ ಮೆಲ್ನೋಟಕ್ಕೆ ಸಾಬೀತಾದ ಹಿನ್ನಲೆ ಡಾ.ರತ್ನಾಕರ್ ಅಮಾನತು : ಡಿಸಿ

ಮಂಗಳೂರು : ದ.ಕ ಜಿಲ್ಲಾ ಕುಷ್ಠ ರೋಗ ನಿವಾರಣಾ ಅಧಿಕಾರಿಯ ಕಾಮಪುರಾಣ ಪ್ರಕರಣದ ಬಗ್ಗೆ ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ ವಿ ಹೇಳಿಕೆ ಮಾಧ್ಯಮಗಳಿಗೆ ನೀಡಿದ್ದಾರೆ.
ಡಾ.ರತ್ನಾಕರ್ ವಿರುದ್ಧ ಪೋಟೋ ದೂರುಗಳು ಬಂದಿತ್ತು , ಇಲಾಖೆ ಆಂತರಿಕ ದೂರು ಸಮಿತಿ ಮೂಲಕ ತನಿಖೆ ಮಾಡಿಲಾಗಿತ್ತು. ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯಿಂದ ಈಗಾಗಲೇ ತನಿಖೆಯಾಗಿದೆ ಎಂದರು.
ಇಲಾಖಾ ತನಿಖೆಯ ವೇಳೆ ಡಾ.ರತ್ನಾಕರ್ ಅನುಚಿತ ವರ್ತನೆ ಮಾಡಿರೋದು ಸಾಬೀತಾಗಿದೆ. ಡಾ.ರತ್ನಾಕರ್ ವಿರುದ್ಧ ಕ್ರಮಕ್ಕೆ ಆರೋಗ್ಯ ಇಲಾಖೆಗೆ ಶಿಫರಸ್ಸು ಮಾಡಿದ್ದೆವು ಎಂದು ಜಿಲ್ಲಾಧಿಕಾರಿ ಹೇಳಿದರು.
ನ.8 ರಂದು ಆರೋಗ್ಯ ಇಲಾಖೆ ಡಾ.ರತ್ನಾಕರ್ ನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.
ಜಿಲ್ಲಾಧಿಕಾರಿ ಹೇಳಿಕೆ:
ರತ್ನಾಕರ್ ನಿಂದ ಅನುಚಿತ ವರ್ತನೆಗೆ ಒಳಗಾದ ಮಹಿಳೆಯರ ನೇರ ದೂರು ಇಂದಿನವರೆಗೂ ಬಂದಿಲ್ಲ.
ಕಛೇರಿಯಲ್ಲಿರುವ ಬೇರೆ ಮಹಿಳಾ ಸಿಬ್ಬಂದಿ ದೂರು ನೀಡಿದ್ದಾರೆ. ಬೇರೆ ಅನಾಮಧೇಯ ಕರೆಗಳ ಮೂಲಕ ದೂರು ನೀಡಿದ್ದರು ಎಂದರು.
ಈ ಹಿನ್ನಲೆಯಲ್ಲಿ ಅಧಿಕಾರಿಯ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ತಡವಾಗಿದೆ ಎಂದು ಮಂಗಳೂರಿನಲ್ಲಿ ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಹೇಳಿದರು.
ಈಗಾಗಲೇ ವರ್ಗಾವಣೆಗೊಂಡ ರತ್ನಾಕರ ಪ್ರಭಾವಿ ವ್ಯಕ್ತಿಯಾಗಿದ್ದು, ರಾಜಕೀಯ ನಾಯಕರ ಬೆಂಬಲದಿಂದ ಮತ್ತೇ ಮಂಗಳೂರಿಗೆ ವರ್ಗಾವಣೆ ಮಾಡಿಕೊಂಡು ಮುಂದಿನ ವಾರ ಬರುವವನಿದ್ದ ಎನ್ನುವ ಮಾಹಿತಿ ತಿಳಿಯುತ್ತಲೇ ಹಳೆಯ ಪೋಟೋ ವಿಡಿಯೋಗಳು ಮಾಧ್ಯಮಗಳಿಗೆ ಸಿಗುವಂತೆ ಹೊರಗೆ ಬಿಟ್ಟಿದ್ದಾರೆ.
ರಾಜ್ಯ
FRUITS ID ರೈತರಿಗೆ ಕಂದಾಯ ಸಚಿವರಿಂದ ಮಹತ್ವದ ಸೂಚನೆ : 15 ದಿನದೊಳಗೆ ಫ್ರೂಟ್ಸ್ ದತ್ತಾಂಶದಲ್ಲಿ ಜಮೀನಿನ ಮಾಹಿತಿಯನ್ನು ದಾಖಲಿಸುವಂತೆ ಸಚಿವ ಕೃಷ್ಣ ಬೈರೇಗೌಡ ಹೇಳಿದ್ಯಾಕೆ ?

ಸರ್ಕಾರಿ ಸೌಲಭ್ಯ ಪಡೆಯಲು ರೈತರು ಇನ್ನು ಮುಂದೆ ಪ್ರತಿ ಬಾರಿ ಜಮೀನಿನ ಪಹಣಿ, ಆಧಾರ್, ಬ್ಯಾಂಕ್ ಖಾತೆ ವಿವರಗಳನ್ನು ಒದಗಿ ಸುವ ಅಗತ್ಯವಿಲ್ಲ. ಕೃಷಿ ಇಲಾಖೆಯೇ ಈಗ ರೈತರ ವಿವರಗಳನ್ನು ಸಂಗ್ರಹಿಸಿ, ‘ಫ‌್ರೂಟ್ಸ್’ ತಂತ್ರಾಂಶದಲ್ಲಿ ದಾಖಲೀಕರಣ ಮಾಡಿಕೊಳ್ಳುತ್ತದೆ,
ಫ್ರೂಟ್ ಐಡಿಯಲ್ಲಿ (FRUITS ID) ದಾಖಲಾಗಿರುವ ಜಮೀನಿನ ಮಾಹಿತಿ ಆಧಾರದ ಮೇಲೆ ಪರಿಹಾರ ಪಾವತಿ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ರೈತರು ತಮ್ಮ ಜಮೀನಿನ ನಿಖರ ಮಾಹಿತಿಯನ್ನು ಮುಂದಿನ 15 ದಿನಗಳ ಒಳಗೆ ಫ್ರೂಟ್ಸ್ ದತ್ತಾಂಶದಲ್ಲಿ ಭರ್ತಿ ಮಾಡಿಸಬೇಕು. ಇದರಿಂದ ಅಕ್ರಮಗಳು ತಪ್ಪುವುದಲ್ಲದೆ, ನೈಜ ಫಲಾನುಭವಿಗಳಿಗೆ ಪರಿಹಾರದ ಹಣ ಬಿಡುಗಡೆಯಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
236 ತಾಲೂಕುಗಳ ಪೈಕಿ 223 ತಾಲೂಕುಗಳು ಸಂಪೂರ್ಣ ಬರಪೀಡಿತವಾಗಿವೆ. ಇನ್ನು ಬಾಕಿ ಕೇವಲ 13 ತಾಲೂಕುಗಳು ಮಾತ್ರವೇ ಬರಪೀಡಿತ ಪಟ್ಟಿಯಿಂದ ಹೊರಗುಳಿದಂತೆ ಆಗಿದೆ. ಈಗಾಗಲೇ ರಾಜ್ಯ ಸರ್ಕಾರ ಸಹ 324 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದೆ. ಈಗ ರೈತರು ಬರ ಪರಿಹಾರವನ್ನು ಪಡೆಯಬೇಕೆಂದರೆ 15 ದಿನಗಳ ಒಳಗೆ ರಾಜ್ಯದ ಫ್ರೂಟ್ಸ್ ಪೋರ್ಟಲ್‌ನಲ್ಲಿ ಕೆಲವು ಮಾಹಿತಿಯನ್ನು ಭರ್ತಿ ಮಾಡಬೇಕಿದೆ. ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ಜಮೀನಿನ ಮಾಹಿತಿಯನ್ನು ಮುಂದಿನ 15 ದಿನಗಳೊಳಗೆ ದಾಖಲಿಸುವಂತೆ ಸರ್ಕಾರ ನಿರ್ದೇಶಿಸಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಎಲ್ಲ ಇಲಾಖೆಗಳಲ್ಲಿ ರೈತರಿಗಾಗಿ ಜಾರಿಯಲ್ಲಿರುವ ಯೋಜನೆಗಳ ಸೌಲಭ್ಯ ಪಡೆಯಲು ರೈತರು ಎಫ್.ಐ.ಡಿ (FID number) ಕಡ್ಡಾಯವಾಗಿದೆ. ಇದನ್ನು ಕೃಷಿ ಇಲಾಖೆಯಿಂದ ಮಾಡಿಸಿಕೊಳ್ಳಬೇಕು. ಬರ ಪರಿಹಾರ, ಬೆಳೆ ವಿಮೆ, ವಿವಿಧ ಯೋಜನೆಯಡಿ ಯಂತ್ರೋಪಕರಣಗಳ ಸಹಾಯಧನ ಪಡೆಯಲು ಹೀಗೆ ಅನೇಕ ಯೋಜನೆಯಡಿ ರೈತರು ಸೌಲಭ್ಯ ಪಡೆಯಲು ಈ ನಂಬರ್ ಅತಿ ಅವಶ್ಯಕವಾಗಿದೆ.
ಅಂತರ ರಾಜ್ಯ
K Surendran | ಮಂಜೇಶ್ವರ ಚುನಾವಣ ಲಂಚ ಪ್ರಕರಣ – ಕೋರ್ಟ್ ಗೆ ಹಾಜರಾಗಿ ಜಾಮೀನು ಪಡೆದ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್

ಮಂಜೇಶ್ವರ ಚುನಾವಣಾ ಲಂಚ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇರಳ ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ (K Surendran) ಸೇರಿದಂತೆ ಎಲ್ಲಾ ಆರೋಪಿಗಳು ಬುಧವಾರ ಕಾಸರಗೋಡು ಪ್ರಿನ್ಸಿಪಲ್ ಸೆಶನ್ಸ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಆರೋಪಿಗಳಿಗೆ ಜಾಮೀನು ನೀಡಲಾಗಿದ್ದು, ಮುಂದಿನ ವಿಚಾರಣೆಯನ್ನು ನ.15ಕ್ಕೆ ಮುಂದೂಡಲಾಗಿದೆ.
ಯುವ ಮೋರ್ಚಾ ರಾಜ್ಯ ಕೋಶಾಧಿಕಾರಿ ಸುನಿಲ್ ನಾಯ್ಕ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕೆ. ಸುರೇಶ್ ನಾಯ್ಕ್ , ಮಣಿಕಂಠ ರೈ, ಲೋಕೇಶ್ ನೋಂಡಾ ಇತರರು ಈ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ.
ಈ ಹಿಂದೆ ಮೂರು ಬಾರಿ ನ್ಯಾಯಾಲಯ ಹಾಜರಾಗಲು ನೋಟಿಸ್ ನೀಡಿತ್ತು. ಆದರೆ ಆರೋಪಿಗಳು ಹಾಜರಾಗಿರಲಿಲ್ಲ.
ಬುಧವಾರ ನಡೆದ ವಿಚಾರಣೆ ವೇಳೆ ಎಲ್ಲಾ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದರು. 2021 ರ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ. ಸುರೇಂದ್ರ ನ್ ಬಿಎಸ್ಪಿ ಅಭ್ಯರ್ಥಿಯಾಗಿದ್ದ ಕೆ. ಸುಂದರರಿಂದ ನಾಮಪತ್ರ ಹಿಂತೆಗೆಯಲು ಎರಡೂವರೆ ಲಕ್ಷ ರೂ. ಹಾಗೂ ಮೊಬೈಲ್ ಫೋನ್ ನೀಡಿ ನಾಮಪತ್ರ ಹಿಂಪಡೆಯಲಾಗಿತ್ತು. ಚುನಾವಣೆ ಬಳಿಕ ಪ್ರಕರಣ ಬಳಿಕ ಬೆಳಕಿಗೆ ಬಂದಿತ್ತು. ಈ ಬಗ್ಗೆ ನ್ಯಾಯಾಲಯದ ಆದೇಶದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ವರದಿಗಳು
ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ನವರಾತ್ರಿ ಪ್ರಯುಕ್ತ ‘ಜಿ.ಎಲ್ ಸ್ವರ್ಣ ಹಬ್ಬ’ – ಆಭರಣಗಳ ಖರೀದಿಗೆ ಆಕರ್ಷಕ ಕೊಡುಗೆ : 9 ಚಿನ್ನದ ನಾಣ್ಯ ಗೆಲ್ಲುವ ಸುವರ್ಣವಕಾಶ

ಪುತ್ತೂರಿನ ಮುಖ್ಯರಸ್ತೆಯ ಕಾಂಪ್ಲೆಕ್ಸ್ ನಲ್ಲಿರುವ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ನವರಾತ್ರಿ ಪ್ರಯುಕ್ತ ಜಿ.ಎಲ್ ಸ್ವರ್ಣ ಹಬ್ಬ ತಾ.15.10.2023 ರಿಂದ 24.10.2023ರ ವರೆಗೆ ನಡೆಯಲಿರುವುದು.

ಈ ಸ್ವರ್ಣ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಆಕರ್ಷಕ ಕೊಡುಗೆಗಳನ್ನು ಸಂಸ್ಥೆಯು ಪ್ರಕಟಿಸಿದೆ. ಬಂಗಾರದ ಚೈನ್ ಖರೀದಿಗೆ VA 6%ನಿಂದ ಆರಂಭ, ‘ಜಂಟ್ಸ್ ಕಡ ಖರೀದಿಗೆ VA 6%ನಿಂದ ಆರಂಭ, ಆ್ಯಂಟಿಕ್ ಟ್ಯುವಲ್ಲರ್ಸ್ ಖರೀದಿಗೆ VA 15%ನಿಂದ ಆರಂಭ, ಬ್ಯಾಂಗಲ್ಸ್ ಖರೀದಿಗೆ VA 8%ನಿಂದ ಆರಂಭ, ಗ್ರಾಹಕರಿಗೆ ನವರಾತ್ರಿಯ ಈ ಹಬ್ಬದ ಋತುವಿನಲ್ಲಿ ಚಿನ್ನಾಭರಣಗಳನ್ನು ಖರೀದಿಸಿ 9 ಚಿನ್ನದ ನಾಣ್ಯಗಳನ್ನು ಗೆಲ್ಲುವ ಅಮೂಲ್ಯ ಅವಕಾಶವಿದೆ.
ಸ್ವರ್ಣ ಹಬ್ಬದ ಪ್ರತಿ ಖರೀದಿಯ ಮೇಲೆ ವಿಶೇಷ ರಿಯಾಯಿತಿ ಪಡೆಯವ ಸುವರ್ಣಾವಕಾಶವಿದೆ.
ವಿಶ್ವಾಸ, ಪರಿಶುದ್ಧತೆ, ಪರಂಪರೆ, ನವನವೀನ ವಿನ್ಯಾಸ ಹಾಗೂ ಗ್ರಾಹಕ ಸೇವೆಗಳಿಗೆ ಸದಾ ಸಂಸ್ಥೆ ಬದ್ದವಾಗಿದ್ದು, ಗ್ರಾಹಕರ ಮನಸೂರೆಗೊಳ್ಳುವ ವಿನೂತನ ವಿನ್ಯಾಸದ ಚಿನ್ನದ ಆಭರಣಗಳು, ವಜ್ರಾಭರಣಗಳು, ಬೆಳ್ಳಿಯ ಆಭರಣಗಳು, ಆ್ಯಂಟಿಕ್ ಆಭರಣಗಳು, ಅನ್ ಕಟ್ ಡೈಮಂಡ್ಸ್ ಹಾಗೂ ಅಮೂಲ್ಯ ಹರಳುಗಳ ವಿಪುಲ ಸಂಗ್ರಹವಿದ್ದು ಗ್ರಾಹಕರು ಆರಾಮದಾಯಕವಾಗಿ ಶಾಪಿಂಗ್ ಮಾಡಲು ಉತ್ತಮ ಪಾರ್ಕಿಂಗ್ ವ್ಯವಸ್ಥೆ ಕೂಡಾ ಲಭ್ಯವಿದೆ.
ಆಧುನಿಕ ಮತ್ತು ಪಾರಂಪರಿಕ ಚಿನ್ನದ ಆಭರಣಗಳು, ವಜ್ರಾಭರಣಗಳಿಗೆ ಹಾಗೂ ಗುಣಮಟ್ಟದ ಚಿನ್ನಾಭರಣಗಳ ಮಾರಾಟದಲ್ಲಿ ಹೆಸರುವಾಸಿಯಾಗಿರುವ ಸಂಸ್ಥೆಯು ಸುಳ್ಯ, ಹಾಸನ ಹಾಗೂ ಕುಶಾಲನಗರದಲ್ಲಿ ತಮ್ಮ ಮಳಿಗೆಗಳನ್ನು ಹೊಂದಿದೆ. ಈ ಜಿ.ಎಲ್. ಸ್ವರ್ಣ ಹಬ್ಬ ಎಲ್ಲ ಮಳಿಗೆಗಳಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
-
ರಾಷ್ಟ್ರೀಯ2 days ago
Divorce under Hindu Marriage Act : ಹಿಂದು ವಿವಾಹ ಕಾಯ್ದೆಯಡಿ ವಿಚ್ಛೇದನ ಪಡೆಯಲು ʼಈʼ ನಿಯಮ ಪಾಲನೆ ಕಡ್ಡಾಯ – ಕೊರ್ಟು ಮಹತ್ವದ ಆದೇಶ ; ಏನದು ನಿಯಮ ?
-
ಅಪರಾಧ2 days ago
Dowry Harasment: ʼಪ್ರತಿಯೊಬ್ಬರಿಗೂ ಹಣ ಬೇಕು ಮತ್ತು ಹಣ ಎಲ್ಲಕ್ಕಿಂತ ಪರಮೊಚ್ಚʼ ಡೆತ್ ನೋಟ್ ಬರೆದಿಟ್ಟು ವರದಕ್ಷಿಣೆ ಕಿರುಕುಳಕ್ಕೆ ಒಳಗಾದ ಯುವ ವೈದ್ಯೆ ಆತ್ಮಹತ್ಯೆ – ಅಷ್ಟಕ್ಕೂ ವರನ ಮನೆಯವರು ಇಟ್ಟ ಡಿಮ್ಯಾಂಡ್ ಎಷ್ಟು ಗೊತ್ತೆ ?
-
ಸುಳ್ಯ2 days ago
Arecanut Yellow leaf diseases ಅಡಿಕೆ ಹಳದಿ ಎಲೆ ರೋಗಕ್ಕೆ ಶಾಶ್ವತ ಪರಿಹಾರದತ್ತ ಮಹತ್ವದ ಹೆಜ್ಜೆ – ಸಂಪಾಜೆಯಲ್ಲಿ ಇಂದೋರ್ ಕಂಪೆನಿಯ ಔಷಧಿ ಪ್ರಯೋಗಕ್ಕೆ ಆರಂಭಿಕ ಗೆಲುವು – ರೋಗವಿದ್ದ ಪ್ರದೇಶದಲ್ಲಿ ನಳನಳಿಸುತ್ತಿದೆ ಫಸಲು
-
ಮಂಗಳೂರು2 days ago
ಕುಡುಪು ಷಷ್ಟಿ ಮಹೋತ್ಸವ ಜಾತ್ರೆ – ಸಂತೆ ವ್ಯಾಪಾರದಲ್ಲಿ ಹಿಂದೂಯೇತರರಿಗಿಲ್ಲ ಅವಕಾಶ: ವ್ಯಾಪಾರಿಗಳ ಸಮನ್ವಯ ಸಮಿತಿ ಆಕ್ರೋಶ – ದೇವಸ್ಥಾನದ EOರಿಂದ ತಿರುಗೇಟು – ಕರಾವಳಿಯಲ್ಲಿ ನಿಲ್ಲೋದಿಲ್ವಾ ಧರ್ಮ ದಂಗಲ್ ?
-
ರಾಷ್ಟ್ರೀಯ2 days ago
Pancard latest update : ಪ್ಯಾನ್ ಕಾರ್ಡ್ ಕುರಿತು ಮಹತ್ವದ ಮಾಹಿತಿ – ಈ ತಪ್ಪು ಮಾಡಿದರೆ 10,000 ರೂ ದಂಡ ಗ್ಯಾರಂಟಿ
-
ಮಂಗಳೂರು1 day ago
Interfaith Marriage ಮಂಗಳೂರು : ಭಿನ್ನಕೋಮಿನ ಜೋಡಿ ವಿವಾಹ?
-
ಬಿಗ್ ನ್ಯೂಸ್1 day ago
Bride refuses Marriage in hall ತಾಳಿ ಕಟ್ಟುವ ವೇಳೆ ವರನ ಕೈಗೆ ಅಡ್ಡ ಹಿಡಿದು ಸಿನಿಮೀಯ ಶೈಲಿಯಲ್ಲಿ ಮದುವೆ ನಿರಾಕರಿಸಿದ ವಧು
-
ಸಿನೆಮಾ2 days ago
Pooja gandhi : ಕುವೆಂಪು ಪರಿಕಲ್ಪನೆಯ ’ಮಂತ್ರ ಮಾಂಗಲ್ಯ’ ಪದ್ದತಿಯಲ್ಲಿ ವಿವಾಹವಾದ ಪೂಜಾ ಗಾಂದಿ ದಂಪತಿಯಿಂದ ಕವಿ ಶೈಲ ಭೇಟಿ – ಹುಟ್ಟಿದ್ದು ಪಂಜಾಬಿನಲ್ಲಾದರೂ ಕನ್ನಡದ ಬಗೆಗಿನ ನಟಿಯ ಪ್ರೀತಿಗೆ ವ್ಯಾಪಕ ಮೆಚ್ಚುಗೆ