Ad Widget

ಪೆರ್ಡೂರು ಮೇಳಕ್ಕೆ ಜನ್ಸಾಲೆ ಬದಲು ಧಾರೇಶ್ವರ – ಪರ ವಿರೋಧ ಚರ್ಚೆ ತಾರಕಕ್ಕೆ | ́ನನ್ನನ್ನು ನಾನು ಮಾರಿಕೊಳ್ಳಲು ತಯಾರಿಲ್ಲʼ : ಜನ್ಸಾಲೆ |ಪಟ್ಲರ ನೆನಪಿಸದ ಘಟನೆ

perdoor
Ad Widget

Ad Widget

Ad Widget

ಕುಂದಾಪುರ, ನ. 23:  ಬಡಗುತಿಟ್ಟಿನ ಪ್ರಖ್ಯಾತ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯ ತಾನು ಹಲವು ವರ್ಷಗಳಿಂದ ಯಕ್ಷಗಾನ ಕೃಷಿ ಮಾಡಿದ ಪೆರ್ಡೂರು ಮೇಳದ ತಿರುಗಾಟಕ್ಕೆ ತಿಲಾಂಜಲಿ ಹಾಡಿದ್ದಾರೆ. ಪೆರ್ಡೂರು ಮೇಳದ ಪ್ರಧಾನ ಭಾಗವತರಾಗಿದ್ದ ಅವರು ಈ ಸಾಲಿನಿಂದ ಆ ಮೇಳದ ಭಾಗವಾಗಿರುವುದಿಲ್ಲ.

Ad Widget

Ad Widget

Ad Widget

Ad Widget

ಈ ವರ್ಷದ ತಿರುಗಾಟಕ್ಕೆ  ತಯಾರಿ ನಡೆಸಿರುವ ಪೆರ್ಡೂರು ಮೇಳವೂ ಕೆಲವೊಂದು ಮುಮ್ಮೇಳ ಕಲಾವಿದರ ಬದಲಾವಣೆ ನಡೆಸಿತ್ತು. ಆದರೆ, ‘ತಿರುಗಾಟ ಪ್ರಾರಂಭಕ್ಕೆ ಕೆಲವೇ ದಿನ ಇದೆ ಎನ್ನುವಾಗ ಕಳೆದ 9 ವರ್ಷಗಳಿಂದ ಮೇಳದ ಪ್ರಧಾನ ಭಾಗವತರಾಗಿದ್ದ ಜನ್ಸಾಲೆ ರಾಘವೇಂದ್ರ ಆಚಾರ್ಯ ಅವರು ಮೇಳದಿಂದ ನಿರ್ಗಮಿಸಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ

Ad Widget

Ad Widget

Ad Widget

Ad Widget

ಜನ್ಸಾಲೆ ಸ್ಥಾನಕ್ಕೆ  ಪೆರ್ಡೂರು ಅನಂತಪದ್ಮನಾಭ ಯಕ್ಷಗಾನ ಮಂಡಳಿಯೂ ಹಲವು ವರ್ಷಗಳ ಹಿಂದೆ ಇದೇ ಮೇಳದ ನೊಗ ಹೊತ್ತಿದ್ದ ಮತ್ತೊರ್ವ ಹಿರಿಯ ಹಾಗೂ ಪ್ರಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರರವರನ್ನು ತಂದಿದೆ. 9 ವರ್ಷಗಳ ತರುವಾಯ ಮತ್ತೆ  ಅವರು ಈ ವರ್ಷದ ತಿರುಗಾಟದ ಮೂಲಕ ಪೆರ್ಡೂರು ಮೇಳದ ಪ್ರಧಾನ ಭಾಗವತರ ನೆಲೆಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.

9 ವರ್ಷಗಳ ಹಿಂದೆ ಧಾರೇಶ್ವರರು ಬಡಗುತಿಟ್ಟಿನ ಪ್ರಸಿದ್ದ ಮೇಳಗಳಲ್ಲಿ ಒಂದಾದ ಪೆರ್ಡೂರು ಮೇಳದ ಸಾರಥ್ಯವಹಿಸಿಕೊಂಡಿದ್ದರು. ಎರಡೂವರೆ ದಶಕಕ್ಕೂ ಅಧಿಕ ಕಾಲ ಅವರು ಈ ಮೇಳದಲ್ಲಿ ಯಕ್ಷ ಕೃಷಿ ಮಾಡಿದ್ದಾರೆ. ಶಿವಾನಿ-ಭವಾನಿ, ನಾಗವಲ್ಲಿ, ದಾಮಿನಿ-ಭಾಮಿನಿ, ಸಾವನಿ-ಪಾವನಿ,  ಹೀಗೆ ಅನೇಕ ಯಶಸ್ವಿ ಸಾಮಾಜಿಕ ಹಾಗೂ ಪೌರಾಣಿಕ ಪ್ರಸಂಗಗಳು ಇವರ ದಕ್ಷ ನಿರ್ದೇಶನ ಹಾಗೂ ಪ್ರಧಾನ ಭಾಗವತಿಕೆಯಲಿ ಮೂಡಿಬಂದು ಜನಪ್ರಿಯ ಕಲಾ ಪ್ರಸಂಗಗಳು ಎನಿಸಿಕೊಂಡಿದ್ದವು. 9 ವರ್ಷಗಳ ಹಿಂದೆ ಪೆರ್ಡೂರು ಮೇಳದಿಂದ ನಿರ್ಗಮಿಸಿದ ಇವರು  ಕೇವಲ ಅತಿಥಿ ಕಲಾವಿದರಾಗಿ ಹಾಗೂ ಧಾರೇಶ್ವರ ಯಕ್ಷಬಳಗದಲ್ಲಿ ಮಾತ್ರ ಭಾಗವಹಿಸುತ್ತಿದ್ದರು.

Ad Widget

Ad Widget
ಸುಬ್ರಹ್ಮಣ್ಯ ಧಾರೇಶ್ವರ

 64 ಹರೆಯದ ಧಾರೇಶ್ವರರು ಯಕ್ಷಗಾನದ ಸಾಂಪ್ರದಾಯಿಕ ರಾಗಗಳೊಂದಿಗೆ ಹೊಸ ರಾಗಗಳನ್ನು ಪರಿಚಯಿಸಿದ ಸ್ವರ ಸಂಯೋಜಕ. ಪೆರ್ಡೂರು ಮೇಳವೂ ಪೌರಣಿಕ ಪ್ರಸಂಗಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಸಾಮಾಜಿಕ ಪ್ರಸಂಗಳನ್ನು ಆಡಿಸುವ ಮೇಳ. ಧಾರೇಶ್ವರರು ಈ ಎರಡು ಮಾದರಿಯ ಪ್ರಸಂಗದಲ್ಲೂ ನಿಷ್ಣಾತರು.

 ನ. 30ರಿಂದ ಮೇಳ ಈ ಸಾಲಿನ  ತಿರುಗಾಟ ಆರಂಭಿಸಲಿದ್ದು ಪ್ರೊ. ಪವನ್ ಕಿರಣ್‌ಕರೆ ಅವರ ‘ಕೃಷ್ಣಕಾದಂಬಿನಿ’ ಪ್ರಸಂಗ ಈ ವರ್ಷದ ಕಥಾನಕವಾಗಿ ಪ್ರದರ್ಶನವಾಗಲಿದೆ. ಮತ್ತೆ ಮೇಳದ ಸಾರಥ್ಯವಹಿಸುವದನ್ನುಖಚಿತಪಡಿಸರುವ  ಧಾರೇಶ್ವರರು ““ಪೆರ್ಡೂರು ಬಿಟ್ಟ ಬಳಿಕ ಯಾವುದೇ ಮೇಳದಲ್ಲಿ  ತಿರುಗಾಟ ಮಾಡಿರಲಿಲ್ಲ. ಈಗ ಕರುಣಾಕರ ಶೆಟ್ಟಿ ಅವರು ಮತ್ತೆ ಮೇಳಕ್ಕೆ ಸೇರುವಂತೆ ಆಹ್ವಾನಿಸಿದ್ದಾರೆ” ಎಂದಿದ್ದಾರೆ.

ಏನಿದು ಬೆಳವಣಿಗೆ ?

ಜನ್ಸಾಲೆ ಹಾಗೂ  ಪೆರ್ಡೂರು ಮೇಳದ ಯಜಮಾನರ ನಡುವೆ ಕಳೆದೆರಡು ವರ್ಷಗಳಿಂದ ಶೀತಲ ಸಮರ ನಡೆಯುತ್ತಿರುವ ಬಗ್ಗೆ ಅಲ್ಲಲ್ಲಿ ವದಂತಿಗಳು ಹುಟ್ಟುತಿದ್ದವು. ಕೆಲವು ತಿಂಗಳ ಹಿಂದೆ ಇಂತಹ ಸುದ್ದಿ ಜಾಲತಾಣದಲ್ಲಿ ಪ್ರಸಾರವಾದ ಬಳಿಕ ಜನ್ಸಾಲೆಯವರೇ ಸ್ಪಷ್ಟನೆ ನೀಡಿ ಮೇಳದಲ್ಲಿ ಮುಂದುವರಿಯುವ ಬಗ್ಗೆ ತಿಳಿಸಿದ್ದರು.

ಆ ಬಳಿಕ ಮೇಳದ ನೂತನ ಪ್ರಸಂಗ ‘ಕೃಷ್ಣಕಾದಂಬಿನಿʼಯ  ಕರಪತ್ರಗಳಲ್ಲಿ ಜನ್ಸಾಲೆಯವರ ಭಾವಚಿತ್ರ ಹಾಗೂ ಹೆಸರು ನಮೂದಿಸಲಾಗಿತ್ತು. ಅದರೇ ಇದೀಗ ನಡೆದಿರುವ ಅಚ್ಚರಿಯ ಬೆಳವಣಿಗೆಯಲ್ಲಿ ಈ ಪ್ರಸಂಗದ ಕರಪತ್ರದಲ್ಲಿ ಧಾರೇಶ್ವರ ಅವರ ಭಾವಚಿತ್ರ ಹಾಗೂ ಹೆಸರನ್ನು ನಮೂದಿಸಲಾಗಿದೆ.

ರಾಘವೇಂದ್ರ ಆಚಾರ್ಯ ಅವರು ಮುನಿಸಿಕೊಂಡು ಮೇಳ ಬಿಟ್ಟಿರುವುದೆ ಈ ಬೆಳವಣಿಗೆಗೆ ಕಾರಣ ಎನ್ನಲಾಗುತ್ತಿದೆ. ಮೇಳವೂ ವಿಧಿಸಿರುವ ನೂತನ ಕಟ್ಟುಪಾಡುಗಳನ್ನು ದಿಕ್ಕರಿಸಿ ಜನ್ಸಾಲೆಯವರು ಈ ನಿರ್ಧಾರಕ್ಕೆ ಬಂದಿದ್ದಾರೆ . ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು  “ಹಗಲು ಹೊತ್ತಿನಲ್ಲಿ ಕೂಡ ಗಾನವೈಭವ, ತಾಳಮದ್ದಳೆಯಂತಹ ಕಾರ್ಯಕ್ರಮಗಳಿಗೆ ತೆರಳಲು ನಿರ್ಬಂಧ ವಿಧಿಸಲಾಗಿದೆ. ನನ್ನನ್ನು ನಾನು ಮಾರಿಕೊಳ್ಳಲು ತಯಾರಿಲ್ಲ. ಆದ್ದರಿಂದ ಪೆರ್ಡೂರು ಮೇಳದ ತಿರುಗಾಟಕ್ಕೆ ವಿದಾಯ ಹೇಳಿದ್ದೇನೆ ಎಂದಿದ್ದಾರೆ.

ರಾಘವೇಂದ್ರ ಜನ್ಸಾಲೆ

ಇನ್ನೂ ಈ ಬೆಳವಣಿಗೆಗಳ ಬಗ್ಗೆ ಪೆರ್ಡೂರು ಮೇಳದ ಯಜಮಾನರಾದ ವೈ. ಕರುಣಾಕರ ಶೆಟ್ಟಿಯವರು ಪ್ರತಿಕ್ರಿಯಿಸಿದ್ದು “ ಮೇಳದ ವ್ಯವಸ್ಥೆಗಳಿಗೆ ಜನ್ಸಾಲೆ ಅವರು ಒಪ್ಪದೇ ಇರುವುದರಿಂದ ಬದಲಾವಣೆ ಅನಿವಾರ್ಯವಾಯಿತು. ಧಾರೇಶ್ವರ ಅವರು ಮೇಳದಲ್ಲಿ ಮುಂದುವರಿಯಲಿದ್ದಾರೆ. ಪ್ರದರ್ಶನ ಪೂರ್ವ ತಯಾರಿಗಳು ಅವರ ನಿರ್ದೇಶನದಲ್ಲಿ ಆರಂಭವಾಗಿವೆ  ಎಂದಿದ್ದಾರೆ

 ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವಮೇಳದ ಹಿರಿಯ ಕಲಾವಿದರಾದ ವಿದ್ಯಾಧರ ರಾವ್ ಜಲವಳ್ಳಿ ಹಾಗೂ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪರವರು  “ ತಿರುಗಾಟದ ಅವಧಿಯಲ್ಲಿ ಬೇರೆ ಖಾಸಗಿ ಪ್ರದರ್ಶನಗಳಿಗೆ ಹೋಗುವುದಿಲ್ಲ ಎನ್ನುವ ತೀರ್ಮಾನಕ್ಕೆ ಕಲಾವಿದರು ಹಾಗೂ ಯಜಮಾನರ ನಡುವೆ ನಡೆದ ಸಭೆಯಲ್ಲಿ ನಾವೆಲ್ಲ ಬಂದಿದ್ದೇವು ಎಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ

ಜನ್ಸಾಲೆಯವರು ಯಕ್ಷಗಾನದ ಸ್ಟಾರ್‌ ಭಾಗವತರಾಗಿರುವುದರಿಂದ ಪೆರ್ಡೂರು ಮೇಳದ ಈ ಬೆಳವಣಿಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ, ಒಂದಷ್ಟು ಮಂದಿ ಜನ್ಸಾಲೆ ಪರ ಬ್ಯಾಟಿಂಗ್‌ ಮಾಡಿದರೆ ಉಳಿದವರು ಮೇಳದ ಯಜಮಾನರ ಪರ ವಾದ ಮಂಡಿಸುತ್ತಿದ್ದಾರೆ.

ಅಸಂಖ್ಯಾತ ಅಭಿಮಾನಿಗಳನ್ನು ಅದರಲ್ಲೂ ವಿಶೇಷವಾಗಿ ಯುವ ಯಕ್ಷಗಾನ ಅಭಿಮಾನಿಗಳ ನೆಚ್ಚಿನ ಭಾಗವತರಾಗಿರುವ ಜನ್ಸಾಲೆ ಮೇಳದ ಯಶಸ್ಸಿಗೆ ಕಾರಣರಾಗಿದ್ದರು. ಇವರ ನಿರ್ಗಮನದಿಂದ ಮೇಳದ ಅಕರ್ಷಣೆಯಲ್ಲಿ ಕುಂಠಿತವಾಗಲಿದೆ ಎನ್ನುವ ವಾದ ಕೆಲವರದು. ಕಟೀಲು ಮೇಳದಿಂದ ತೆಂಕುತಿಟ್ಟಿನ ಪ್ರಸಿದ್ದ ಬಾಗವತರಾದ ಸತೀಶ ಶೆಟ್ಟಿ ಪಟ್ಲ ರವರ ನಿರ್ಗಮನವೂ ಇದೇ ರೀತಿಯಾಗಿತ್ತು ನೆನಪಿಸಿಕೊಂಡಿರುವ ಕೆಲವರು ಮೇಳದ ಕಲಾವಿದರೂ ಮೇಳಕ್ಕಿಂತ ಹೆಚ್ಚಿನ ಗೌರವವನ್ನು ಪಡೆಯುವುದು ಮೇಳ ನಡೆಸುವವರಿಗೆ ರುಚಿಸುವುದಿಲ್ಲ ಎಂದು ಆರೋಪಿಸಿದ್ದಾರೆ.

ಸತೀಶ್‌ ಶೆಟ್ಟಿ ಪಟ್ಲ

ಪ್ರಸ್ತುತ ಸನ್ನಿವೇಶದಲ್ಲಿ ಮೇಳ ನಡೆಸುವುದು ಸುಲಭದ ಕೆಲಸವಲ್ಲ. ಅದನ್ನು ಕಲೆಯ ಮೇಲಿನ ಪ್ರೀತಿಯಿಂದ ನಡೆಸಲಾಗುತ್ತಿದೆಯೆ ಹೊರತು ಅರ್ಥಿಕ ಲಾಭದ ಉದ್ದೇಶದಿಂದ ಅಲ್ಲ . ಹಾಗಾಗಿ ಕಲಾವಿದರೂ ಮೇಳದ ಯಜಮಾನರು ರೂಪಿಸಿವ ನಿಯಮಗಳಿಗೆ ಬದ್ದರಾಗಿರಬೇಕು . ಯಾವೂದೋ ಒಬ್ಬ ಕಲಾವಿದನಿಗಾಗಿ ಮೇಳದ ನಿಯಮಗಳನ್ನು ಬದಲಿಸುವುದು ಸರಿಯಲ್ಲ ಎನ್ನುವ ವಾದವನ್ನು ಕೆಲವರು ಮಾಡುತ್ತಿದ್ದಾರೆ .

ಜನ್ಸಾಲೆ ಮುಂದೇನು ?

9 ವರ್ಷದಿಂದ ಪೆರ್ಡೂರು ಮೇಳದಲ್ಲಿ ಮಾಡಿರುವ ಕೆಲಸದಲ್ಲಿ ತೃಪ್ತಿ ಇದೆ. ಬೇರೆ ಮೇಳಗಳಿಂದ ಕರೆ ಬಂದಿದ್ದರೂ, ಈಗಾಗಲೇ ಕಲಾವಿದರ ಆಯ್ಕೆ ನಡೆದಿರುವುದರಿಂದ, ನನ್ನಿಂದಾಗಿ ಬೇರೆಯವರಿಗೆ ತೊಂದರೆ ಆಗಬಾರದು ಎನ್ನುವುದಕ್ಕಾಗಿ ಈ ವರ್ಷ ತಿರುಗಾಟ ಮಾಡುವುದಿಲ್ಲ. ಆದರೆ ಯಾವುದೇ ಪ್ರದರ್ಶನಕ್ಕೆ ಪ್ರೀತಿಯಿಂದ ಕರೆ ಬಂದರೂ ಅತಿಥಿಯಾಗಿ ಭಾಗವತಿಕೆಗೆ ಹೋಗುತ್ತೇನೆ’ ಎಂದು ಜನ್ಸಾಲೆ ರಾಘವೇಂದ್ರ ಆಚಾರ್ಯ ಪ್ರತಿಕ್ರಿಯಿಸಿದರು.

Ad Widget

Leave a Reply

Recent Posts

Belthangady | ಕುತಂತ್ರಿ ಬುದ್ದಿ ಬಿಟ್ಟು ಚುನಾವಣೆಯನ್ನು ಚುನಾವಣೆಯ ರೀತಿ ಎದುರಿಸಿ – ಜನಾರ್ಧನ ಪೂಜಾರಿಗೆ ಹಿಂದೂ ವಿರೋಧಿಯೆಂದು ಅಪಪ್ರಚಾರ ಮಾಡಿದ ತಂಡವೇ ಬೆಳ್ತಂಗಡಿಯ ರಕ್ಷಿತ್ ಶಿವರಾಂ ಗೂ ಮಾಡುತ್ತಿದೆ : ಖಡಕ್ ಎಚ್ಚರಿಕೆ ಕೊಟ್ಟ ‘ನಮ ಬಿಲ್ಲವೆರ್’

error: Content is protected !!
%d bloggers like this: