Ad Widget

Breaking : ಜ್ಯೂ.‌ಕಾಲೇಜಿನಲ್ಲಿ ಹೊಡೆದಾಟ ಪ್ರಕರಣ Update : ಅಪ್ರಾಪ್ತರ ಕೌನ್ಸಿಲಿಂಗ್ ಕರೆಸಿದ್ದೇವೆ – ಪೊಲೀಸರು | ಅರೋಪಿತರಲ್ಲ ನಮ್ಮ ವಿದ್ಯಾರ್ಥಿಗಳನ್ನು ಬಿಡಿ – ಹಿಂಜಾವೇ ಠಾಣೆ ಮುಂದೆ ಧರಣಿ | ಡಿವೈಎಸ್ಪಿ ಮತ್ತು ಕಾರ್ಯಕರ್ತರ ಮಾತಿನ ನಡುವೆ ಚಕಮಕಿ | ಕೊನೆಗೂ ಅಂತ್ಯ ಕಂಡ ಪ್ರತಿಭಟನೆ – Video ನೋಡಿ

WhatsApp-Image-2021-11-26-at-19.11.41
Ad Widget

Ad Widget

Ad Widget

ಪುತ್ತೂರು: ಕೊಂಬೆಟ್ಟು ಜ್ಯೂನಿಯರ್‌ ಕಾಲೇಜ್‌  ವಿದ್ಯಾರ್ಥಿಗಳ  ಹೊಡೆದಾಟ ಚೂರಿ ಇರಿತ  ಪ್ರಕರಣಕ್ಕೆ ಸಂಬಂಧಿಸಿದಂತೆ  ನಾಲ್ವರು ಹಿಂದು ಧರ್ಮದ  ವಿದ್ಯಾರ್ಥಿಗಳನ್ನು ಮಹಿಳಾ ಪೊಲೀಸ್ ಠಾಣೆಗೆ ಕರೆ ತರಲಾಗಿದೆ ಎಂದು ಆರೋಪಿಸಿ    ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಪುತ್ತೂರು‌ ಮಹಿಳಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಘಟನೆ ನ .26 ರಂದು  ಸಂಜೆ ನಡೆದಿದೆ.

Ad Widget

Ad Widget

Ad Widget

Ad Widget

Ad Widget

ಈ ವೇಳೆ ಪುತ್ತೂರು ಡಿವೈಎಸ್ಪಿ ಗಾನಾ ಪಿ ಹಾಗೂ ಹಿಂಜಾವೇ ಮುಖಂಡ ಅಜೀತ್‌ ರೈ ಹೊಸಮನೆ ಮತ್ತು ಇತರ ಮುಖಂಡರ  ಮಧ್ಯೆ  ಮಾತಿನ ಚಕಮಕಿ ನಡೆಯಿತು. ವಾಗ್ವಾದವನ್ನು ವಿಡಿಯೋದಲ್ಲಿ ನೋಡಿ :

Ad Widget

Ad Widget

Ad Widget

Ad Widget

Ad Widget

ಬಿಜೆಪಿ ಪುತ್ತೂರು  ನಗರ ಅಧ್ಯಕ್ಷ ಪಿಜಿ. ಜಗನ್ನಿವಾಸ ರಾವ್‌ ಕೂಡ ಹಿಂಜಾವೇ ಕಾರ್ಯಕರ್ತರನ್ನು ಸಮಧಾನಿಸಲು ಪ್ರಯತ್ನಿಸಿದರು. ಆದರೆ ಅವರ ಸಮಾಜಾಯಿಷಿಗೂ ಕೂಡ ಒಪ್ಪದ ಕಾರ್ಯಕರ್ತರು ಠಾಣೆಗೆ ಮುತ್ತಿಗೆ ಹಾಕಿದ ಮುಸ್ಲಿಂ ಪರ ಸಂಘಟನೆಗಳ ಕಾರ್ಯಕರ್ತರನ್ನು ಇನ್ನೂ ಯಾಕೇ ಬಂಧಿಸಿಲ್ಲ  ಎಂದು ಪ್ರಶ್ನಿಸಿದರು. ಈ ವೇಳೆ ಅವರು ಮುಸ್ಲಿಂ ಪರ ಸಂಘಟನೆಗಳ ಕಾರ್ಯಕರ್ತರ ವಿರುದ್ದ ಹೆಸರು ನೀಡಿ ದೂರು ಕೊಟ್ಟಿಲ್ಲ , ಹಾಗಾಗಿ ಅವರ ವಿರುದ್ದ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದರು. ಸಿಸಿಟಿವಿ , ವಿಡಿಯೋ ನೋಡಿ ದೂರು ನೀಡಬೇಕಿತ್ತು ಎಂದು ಕಾರ್ಯಕರ್ತರು ಮರು ಉತ್ತರಿಸಿದ್ದಾರೆ . ( ವಿಡಿಯೋ ನೋಡಿ)

ಮಹಿಳಾ ಠಾಣೆಯಲ್ಲಿ ಆಪ್ತ ಸಮಾಲೋಚನೆ:

ಹೊಡೆದಾಡಿಕೊಂಡ  ವಿದ್ಯಾರ್ಥಿಗಳು ಅಪ್ರಾಪ್ತರಾದ ಹಿನ್ನಲೆಯಲ್ಲಿ ಅವರನ್ನು ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುವುದು    ಸಮಂಜಸವಲ್ಲವೆಂದು ಮಹಿಳಾ ಪೊಲೀಸ್ ಠಾಣೆಯಲ್ಲಿರುವ ಅಪ್ರಾಪ್ತರ ಕೌನ್ಸಿಲಿಂಗ್ ವಿಭಾಗಕ್ಕೆ ನಾಲ್ವರು ಹಿಂದು ಮತ್ತು ಇಬ್ಬರು ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳನ್ನು ಘಟನೆಯ ಮಾಹಿತಿ ಪಡೆಯಲು ಪೊಲೀಸರು  ಕರೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ವಿಚಾರವೇ ಈ ಕ್ಷಿಪ್ರ ಬೆಳವಣಿಗೆಗೆ ಕಾರಣವಾಗಿದೆ

Ad Widget

Ad Widget

Ad Widget

Ad Widget

 ಪೊಲೀಸರು ವಿದ್ಯಾರ್ಥಿಗಳನ್ನು ಕರೆಸಿದ್ದಾರೆ ಎನ್ನುವ ವಿಚಾರ  ಸುದ್ದಿಯಾಗುತ್ತಲೆ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಅಪರಾಧ ಎಸಗದ ಹಿಂದು ವಿದ್ಯಾರ್ಥಿಗಳನ್ನು ನೀವು ಠಾಣೆಗೆ ಕರೆದೊಯ್ಯುವುದು ತಪ್ಪು. ಅವರನ್ನು ಬಿಡಬೇಕೆಂದು ಠಾಣೆಯ ಮುಂದೆ ಜಮಾಯಿಸಿ ಒತ್ತಾಯಿಸಿದರು.

ಸದ್ಯ ಹಿಂದೂ ಜಾಗರಣೆ ಕಾರ್ಯಕರ್ತರು ಠಾಣೆ ಮುಂಭಾಗ ದರಣಿ ಕೂತಿದ್ದು , ಬಿಜೆಪಿ ಹಾಗೂ ಹಿಂಜಾವೇ ಮುಖಂಡರು ಠಾಣೆಯ ಒಳಗಡೆ ಮಾತುಕತೆ ನಡೆಸುತ್ತಿದ್ದಾರೆ. ರಾತ್ರಿ 8 ಗಂಟೆ ಸುಮಾರಿಗೆ ಹಿಂಜಾವೇ ಮುಖಂಡರು ಹಾಗೂ ಡಿವೈಎಸ್‌ ಪಿ ಮಧ್ಯೆ ನಡೆದ ಮಾತುಕತೆ ಫಲಪ್ರದವಾಗಿದ್ದು , ಸಂಘಟನೆಯ ಮುಖಂಡರನ್ನು ಮನವೊಲಿಸುವಲ್ಲಿ ಡಿವೈಎಸ್‌ ಪಿ ಸಫಲರಾಗಿದ್ದಾರೆ.

ಮಾತುಕತೆ ನಡೆಸಿ ಹೊರ ಬಂದ ಹಿಂಜಾವೇ ಮುಖಂಡ ಅಜೀತ್‌ ರೈ ಹೊಸಮನೆ ” ಇನ್ನು ಮುಂದೆ ಕಾಲೇಜು ವಿಚಾರವಾಗಿ ಯಾವುದೇ ಹೊರಗಿನ ಸಂಘಟನೆ ಹಸ್ತಕ್ಷೇಪ ನಡೆಸದಂತೆ ನೋಡಿಕೊಳ್ಳುವುದಾಗಿ ಡಿವೈಎಸ್‌ ಪಿಯವರು ಭರವಸೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಪ್ರತಿಭಟನೆಯನ್ನು ಕೈ ಬಿಡುವುದಾಗಿ ತಿಳಿಸಿದರು

ಹೊಡೆದಾಟಕ್ಕೆ  ಸಂಬಂಧಿಸಿ ಮುಸ್ಲಿಂ ಸಮುದಾಯದ ಇಬ್ಬರನ್ನು ಠಾಣೆಗೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : Big breaking: ಪುತ್ತೂರು ಸರ್ಕಾರಿ ಕಾಲೇಜು ಗಲಾಟೆ ಪ್ರಕರಣ ಐವರು ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ- ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಠಾಣೆಯೆದುರು ಜಮಾವಣೆ

Ad Widget

Leave a Reply

Recent Posts

5 guarantee | ಖಚಿತವಾದ ಪಂಚ ಯೋಜನೆಗಳು: ಬಡವರ-ಮಧ್ಯಮ ವರ್ಗದವರ ಕಲ್ಯಾಣಕ್ಕೆ ಕ್ರಾಂತಿಕಾರಕ ಮುನ್ನುಡಿ ಬರೆದ ಕಾಂಗ್ರೆಸ್ ಸರ್ಕಾರ – ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯರಿಂದ ಘೋಷಣೆ : 5 ಯೋಜನೆಗಳ ಪೂರ್ತಿ ವಿವರ ಇಲ್ಲಿದೆ : ನಳಿನ್, ಸಿ.ಟಿ.ರವಿ, ಬಜರಂಗದಳದ ಪದವಿದರರಿಗೂ ನಮ್ಮ ಯೋಜನೆ ಫ್ರೀ ಎಂದು ಕಾಲೆಳೆದ ಕಾಂಗ್ರೇಸ್..!

error: Content is protected !!
%d bloggers like this: