ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ತಂಡವು ಇಂದು ಇತ್ತೀಚೆಗೆ ಅತ್ಯಾಚಾರಕ್ಕೀಡಾಗಿ ಅಮಾನುಷವಾಗಿ ಕೊಲ್ಲಲ್ಪಟ್ಟ ಉಳಾಯಿಬೆಟ್ಟು ಪರಾರಿ ನಿವಾಸಿ 8 ರ ಹರೆಯದ ಬಾಲಕಿಯ ಮನೆಗೆ ಭೇಟಿ ಕೊಟ್ಟಿತು.
ಹಂಚಿನ ಕಾರ್ಖಾನೆ ಯಲ್ಲಿ ಅತ್ಯಾಚಾರ ನಡೆಸಿ ನಾಲ್ವರು ದುರುಳರು ಬಾಲಕಿಯನ್ನು ಕೊಂದು ಹಾಕಿದರು. ಈ ಘಟನೆಯಿಂದ ಜಿಲ್ಲೆಯೇ ಬೆಚ್ಚಿ ಬಿದ್ದಿತ್ತು
ಘಟನೆ ನಡೆದ ಸ್ಥಳಕ್ಕೆ ತೆರಳಿದ ಮಹಿಳಾ ಕಾಂಗ್ರೇಸ್ ತಂಡ ಸ್ಥಳ ಪರಿಶೀಲನೆ ನಡೆಸಿತು.
ಈ ವರದಿ ಓದಿ:
ಮಂಗಳೂರು : ಟೈಲ್ಸ್ ಪ್ಯಾಕ್ಟರಿಯ ಮೋರಿಯಲ್ಲಿ ಎಂಟರ ಹರೆಯದ ಬಾಲಕಿಯ ಶವ ಪತ್ತೆ ಪ್ರಕರಣ – ಕಾಮಾಂಧ ರಾಕ್ಷಸರ ಪೈಶಾಚಿಕ ಕೃತ್ಯ ಬಯಲು | ಸಾಮೂಹಿಕ ಅತ್ಯಾಚಾರಗೈದು ಕತ್ತು ಹಿಸುಕಿ ಕೊಲೆ –ಪುತ್ತೂರಿನ ಆರೋಪಿಯೂ ಸೇರಿ ನಾಲ್ವರ ಬಂಧನ | 8ರ ಬಾಲಕಿಯ ಮೇಲೆ ಮೂವರು ಕಾಮುಕರು ಎರಗಿ ಕೊಂದರು – ದ.ಕ ಜಿಲ್ಲೆ ಕಂಡು ಕೇಳರಿಯದ ಕೃತ್ಯ – ಪ್ರಕರಣದ ಇಂಚಿಂಚು ವಿವರ ಇಲ್ಲಿದೆ
https://nikharanews.in/2021/11/24/four-arrested-connection-with-minor-girl-brutual-rape/
ವಾಮಂಜೂರು ಪೋಲಿಸ್ ಠಾಣೆ ಗೆ ಭೇಟಿಕೊಟ್ಟು ಅಲ್ಲಿ ಜಾರ್ಖಂಡ್ ಮೂಲದ ಕೂಲಿ ಕಾರ್ಮಿಕ ಕುಟುಂಬದ ಬಾಲಕಿಯ ಹೆತ್ತವರನ್ನು ಭೇಟಿ ಮಾಡಿ ಸಾಂತ್ವನ ಮಾಡಿದರು. ಪೊಲೀಸ್ ಅಧಿಕಾರಿಗಳೊಂದಿಗೆ ಘಟನೆಯ ಬಗ್ಗೆ ಚರ್ಚಿಸಿದರು.
ನಂತರ ನಂದಿಗುಡ್ಡೆ ಶ್ಮಶಾನ ಕ್ಕೆ ಭೇಟಿಕೊಟ್ಟು ಬಾಲಕಿಯ ಸಮಾಧಿಗೆ ಪುಷ್ಪ ನಮನ ಅರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ನ ಅಧ್ಯಕ್ಷೆಯಾದ ಶ್ರೀಮತಿ ಶಾಲೆಟ್ ಪಿಂಟೋ,ಸುರತ್ಕಲ್ ಮಹಿಳಾ ಬ್ಲಾಕ್ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ಪದ್ಮನಾಭ್ , ಗುರುಪುರ ಮಹಿಳಾಕಾಂಗ್ರೆಸ್ ಧ್ಯಕ್ಷೆ ಶ್ರೀಮತಿ ಸೆಲಿನ್, ಮಂಗಳೂರು ದಕ್ಷಿಣ ಬ್ಲಾಕ್ ಅಧ್ಯಕ್ಷರಾದ ಶ್ರೀಮತಿ ಚಂದ್ರಕಲಾ ನಿಕಟಪೂರ್ವ ಅಧ್ಯಕ್ಷೆ ಶ್ರೀಮತಿ ನಮಿತಾ ಡಿ ರಾವ್ ಜಿಲ್ಲಾ ಮಹಿಳಾ ಕಾಂಗ್ರೆಸ್ ನ ಪದಾಧಿಕಾರಿಗಳು ಶ್ರೀಮತಿ ಮಲ್ಲಿಕಾ ಪಕ್ಕಳ ,ಗೀತಾ ಅತ್ತಾವರ್, ಚಂದ್ರಕಲಾ ಡಿ ರಾವ್ ,ಸಿಂಧಿಯಾ ,ಕವಿತಾ, ನಾಗವೇಣಿ,ಪದ್ಮಾ ಗ್ಲಾಡಿಸ್ ಹಾಗೂ ಅಶ್ಫಾಕ್ ಉಪಸ್ಥಿತರಿದ್ದರು .