ಮಂಗಳೂರು : ನ 25 : ಪುಟ್ ಪಾತ್ ಮೇಲೆ ಮಲಗಿದ್ದ ಕೂಲಿ ಕಾರ್ಮಿಕರ ಮೇಲೆ ಕಾರೊಂದು ಹರಿದು ಇಬ್ಬರು ಗಾಯಗೊಂಡ ಘಟನೆ ಮಂಗಳೂರಿನಲ್ಲಿ ನ. 25 ರಂದು ಮುಂಜಾನೆ ನಡೆದಿದೆ.
ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ದ ಬಳಿಯ ಪುಟ್ ಪಾತ್ ನಲ್ಲಿ ಘಟನೆ ನಡೆದಿದೆ.
ಹೊರ ರಾಜ್ಯದ ಸುಮಾರು 10ಕ್ಕೂ ಅಧಿಕ ಕಾರ್ಮಿಕರು ಈ ಫುಟ್‌ಪಾತ್‌ನಲ್ಲಿ ರಾತ್ದಿ ಮಲಗಿದ್ದರು ಎನ್ನಲಾಗಿದೆ. ಇಂದು ಬೆಳಗ್ಗೆ ಇಲ್ಲಿನ ರಸ್ತೆಯಲ್ಲಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸ್ಥಳದಲ್ಲಿ ಕೆಲವು ವಾಹನಗಳಿಗೆ ಢಿಕ್ಕಿ ಹೊಡೆದಿದೆಯಲ್ಲದೆ, ಅಲ್ಲೇ ಮಲಗಿದ್ದ ಕಾರ್ಮಿಕರ ಮೇಲೆ ಚಲಿಸಿದೆ.
ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದು ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಮಂಗಳೂರು ನಗರ ಸಂಚಾರ ದಕ್ಷಿಣ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.