ಜಗದೀಶ್‌ ಕಾರಂತ್‌ ವಿರುದ್ಧ ಡಿಸಿ ದೂರು ನೀಡಿದ ಬಳಿಕ ಕಾರಿಂಜ ಕ್ಷೇತ್ರದ ಭಗವಧ್ವಜ ತೆಗೆಯಲು ಪೊಲೀಸರಿಂದ ಸೂಚನೆ- ತಾಖತ್ ಇದ್ದರೆ ಭಗವಧ್ವಜ ತೆಗೆದು ನೋಡಿ, ಹಿಂದೂ ಸಮಾಜ ಫುಟ್‌ಬಾಲ್ ಅಲ್ಲ, ಕಲ್ಲುಗುಂಡು ..!!! ತುಳಿದರೆ ಕಾಲು ಮುರಿಯುತ್ತದೆ : ಹಿಂದೂ ಜಾಗರಣೆ ವೇದಿಕೆ ಗುಡುಗು

hinjave
Ad Widget

Ad Widget

Ad Widget

ಮಂಗಳೂರು : ನ 25 : ಹಿಂದೂ ಜಾಗರಣ ವೇದಿಕೆಯ ಪ್ರಾಂತೀಯ ಸಂಘಟನಾ ಕಾರ್ಯದರ್ಶಿ ಜಗದೀಶ್‌ ಕಾರಂತ್‌ ರವರು ನ .21ರಂದು ಮಾಡಿದ ಭಾಷಣವೊಂದರಲ್ಲಿ ಕಾರಿಂಜದಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸದೇ ಹೋದಲ್ಲಿ ಜಿಲ್ಲಾಧಿಕಾರಿ ಕಛೇರಿಗೆ ನುಗ್ಗಿ ಕೊರಳು ಪಟ್ಟಿ ಹಿಡಿಯುವ ಎಚ್ಚರಿಕೆ ನೀಡಿದ್ದು ಆ ಬಳಿಕ ಹಿಂದೂ ಜಾಗರಣ ವೇದಿಕೆ ಮತ್ತು ಜಿಲ್ಲಾಧಿಕಾರಿ ನಡುವೆ ಜಟಾಪಟಿ ತಾರಕ್ಕೇರಿದೆ.

Ad Widget

  ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರರವರು ಈ ಭಾಷಣದ ವಿರುದ್ದ ಬಂಟ್ವಾಳದ ಪೂಂಜಲಕಟ್ಟೆ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.ದೂರು ಸ್ವೀಕರಿಸಿದ ಪೊಲೀಸರು ಜಗದೀಶ್ ಕಾರಂತ್ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ̤

Ad Widget

Ad Widget

Ad Widget

ಈ ದೂರನ್ನು ಹಿಂಪಡೆಯಬೇಕು ಎಂದು ಅಗ್ರಹಿಸಿ ಹಿಂದೂ ಜಾಗರಣೆ ವೇದಿಕೆಯ  ಪ್ರಾಂತ್ಯ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯರವರು ಮಂಗಳೂರಿನಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದರು.

Ad Widget

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು  ಜಗದೀಶ್ ಕಾರಂತ್‌ ವಿರುದ್ದ  ದೂರು ದಾಖಲಿಸಿದ ಬಳಿಕ ಅದೇ ಠಾಣೆಯ ಸಬ್‌ಇನ್ಸ್‌ಪೆಕ್ಟರ್‌ ಸೌಮ್ಯ ರವರು ಕಾರಿಂಜ ದೇವಸ್ಥಾನದಲ್ಲಿ ಹಾಕಿರುವ  ಭಗವಾಧ್ವಜ ತೆಗೆಯಲು  ಸೂಚಿಸಿದ್ದಾರೆ ಎಂಬ ಗಂಭೀರ ಆರೋಪವನ್ನು ಅಡ್ಯಂತಾಯರು ಮಾಡಿದ್ದಾರೆ .

Ad Widget

Ad Widget

ವಿಡಿಯೋ ನೋಡಲು ಇಲ್ಲಿ ಕ್ಲಿಕ್‌ ಮಾಡಿ :

ಇದೇನು ಮಕ್ಕಳಾಟಿಕೆಯೇ?  ಘೋರಿ ಮಹಮ್ಮದ್‌, ಟಿಪ್ಪು ಕಾಲವೇ ಎಂದು ಪ್ರಶ್ನಿಸಿದ ಅವರು ತಾಖತ್ ಇದ್ದರೆ ಭಗವಾಧ್ವಜ ತೆಗೆದು ತೋರಿಸಿ ವಾರದೊಳಗೆ ಸಾವಿರ ಭಗವಾಧ್ವಜ ಹಾಕಿ ತೋರಿಸುತ್ತೇವೆ ತಾಕತ್ತಿದ್ದರೆ ತಡೆಯಿರಿ ಎಂದು ಅವರು ಗುಡುಗಿದರು.

ಹಿಂದೂ ಸಮಾಜದ ಭಾವನೆ ಜೊತೆ ಚೆಲ್ಲಾಟವಾಡಬೇಡಿ, ನಮ್ಮನ್ನು  ಜಾಸ್ತಿ ತುಳಿಯೋಕೆ ನೋಡಬೇಡಿ, ಹಿಂದೂ ಸಮಾಜ ಫುಟ್ಬಾಲ್ ಅಲ್ಲ‌,  ಹಿಂದೂ ಸಮಾಜ ಕಲ್ಲು ಗುಂಡು,ಇದು ಕಾಲು ಮುರಿಯುತ್ತದೆ ಎಂದು ಅವರು ಎಚ್ಚರಿಸಿದರು

ಡಿಸಿ ಕಾಲರ್‌ ಪಟ್ಟಿ ಹಿಡಿಯುವುದು ಎಂದರೆ ಆಗ್ರಹ ಪೂರ್ವಕವಾಗಿ ನಾವು ಕೇಳಿದ್ದೆವು. ಅಕ್ಷರರಕ್ಷಕ್ಕೆ ಅರ್ಥ ಕಲ್ಪಿಸಬೇಡಿ. ಅದರ ಹಿಂದಿನ ಭಾವನೆ ಅರ್ಥ ಮಾಡಿಕೊಳ್ಳಿ. ಜಿಲ್ಲಾಧಿಕಾರಿಯ ಕಾಲರ್‌ ಪಟ್ಟಿ ಹಿಡಿಯಲಾಗುತ್ತದೆಯೇ ಎಂದು ಹೇಳುವ ಮೂಲಕ ಅವರು  ನ .21 ರಂದು ಜಗದೀಶ್‌ ಕಾರಂತ್‌ ರವರು ರುದ್ರಗಿರಿ ರಣಕಹಳೆ ಎಂಬ ಪ್ರತಿಭಟನಾ ಸಭೆಯಲ್ಲಿ ಮಾಡಿದ ಭಾಷಣಕ್ಕೆ ಸಮಜಾಯಿಷಿ ನೀಡಿದರು.

ಕೇಸನ್ನು ಹಿಂತೆಗೆದುಕೊಳ್ಳಿ ಎಂದು ಮನವಿ ಮಾಡಲು ಪತ್ರಿಕಾಗೋಷ್ಠಿ ಕರೆದಿಲ್ಲ.ನಾವು ಕೇಸಿಗೆಲ್ಲ ಹೆದರುವವರು ಅಲ್ಲ, ಬಗ್ಗವವರು ಅಲ್ಲ ಉದ್ದೇಶಪೂರ್ವಕವಾಗಿ ಜಿಲ್ಲಾಧಿಕಾರಿಯನ್ನು ಅಪಮಾನ ಮಾಡಿಲ್ಲ. ಕೇಸಿಗೆ ಹೆದರಿ ತಲೆಬಗ್ಗಿ ಹೋಗುವವರಲ್ಲ ಎಂದು ಅವರು ಘಂಟಾಘೋಷವಾಗಿ ಘೋಷಿಸಿದರು.

ವಿಡಿಯೋ ನೋಡಲು ಇಲ್ಲಿ ಕ್ಲಿಕ್‌ ಮಾಡಿ :

ಜಿಲ್ಲಾಧಿಕಾರಿಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ಮಾಡಲಿ . ಅವರ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸುವ ಕೆಲಸವನ್ನು ಮಾಡಲಿ. ಅದು ಬಿಟ್ಟು ಅಕ್ರಮದ ವಿರುದ್ದ ಹೋರಾಟ ಮಾಡುವ, ಧ್ವನಿ ಉಡುಗಿಸುವ ಕೆಲಸವನ್ನು ಜಿಲ್ಲಾಧಿಕಾರಿಗಳು ಮಾಡುತ್ತಿದ್ದಾರೆ. ಕಾರೀಂಜೇಶ್ವರ ದೇವಸ್ಥಾನದ 10 ಕಿಮೀ ಸುತ್ತಳತ್ತೆಯಲ್ಲಿ ಯಾವುದೇ ಗಣಿಗಾರಿಕೆ ಆಗದಂತೆ ನೋಡಿಕೊಳ್ಳಬೇಕು ಎಂದು ಅವರು ಅಗ್ರಹಿಸಿದರು.

ಪತ್ರಿಕಾಗೋಷ್ಟಿಯಲ್ಲಿ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಕಿಶೋರ್ ಕುಮಾರ್, ರತ್ನಾಕರ್ ಶೆಟ್ಟಿ ಹಾಗೂ ಜಗದೀಶ್ ನೆತ್ತರಕೆರೆ ಇದ್ದರು.

ಹೆಚ್ಚಿನ ಮಾಹಿತಿಗೆ ಇದ್ದನ್ನು ಓದಿ : ‘ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೊರಳಪಟ್ಟಿ ಹಿಡಿಯುತ್ತೇನೆ’ ಎಂದ ಹಿಂಜಾವೇ ಮುಖಂಡ ಜಗದೀಶ್ ಕಾರಂತ್ ವಿರುದ್ದ ಪ್ರಕರಣ ದಾಖಲು

Leave a Reply

Recent Posts

ದೇಶದಲ್ಲಿ ಹಿಂದೂಗಳ ಶಕ್ತಿ ಹೇಗಿರಬೇಕೆಂದರೆ ಸರ್ಕಾರ ಹಿಂದೂಗಳ ಹೇಳಿಕೆಯಂತೆ ನಡೆಯಬೇಕು..! : ದೇವಸ್ಥಾನಗಳನ್ನು ಸರಕಾರಿಕರಣಗೊಳಿಸಿದಂತೆ ಮಸೀದಿಗಳನ್ನು ಏಕೆ ಮಾಡುವುದಿಲ್ಲ..? ಮಂದಿರ ಸಂಸ್ಕೃತಿ ರಕ್ಷಣೆ ಸಭೆಯಲ್ಲಿ ಚರ್ಚೆ – ಮುಂಬೈಯ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿನ ಭ್ರಷ್ಟಾಚಾರ ಬೆಳಕಿಗೆ ತಂದಿರುವ ಸುಪ್ರಸಿದ್ಧ ಸರ್ಜನ್ ರ ಪುಸ್ತಕ ಬಿಡುಗಡೆ

error: Content is protected !!
%d bloggers like this: