ನೆರೆಹೊರೆಯವರೊಂದಿಗೆ ಸಭ್ಯರಂತೆ ವರ್ತಿಸಿ ಉಗ್ರರಿಗೆ ಹಣಕಾಸು ನೆರವು ನೀಡುತ್ತಿದ್ದ ಮಂಗಳೂರಿನ ಆಯೇಷಾ ಬಾನು ದಂಪತಿಗೆ 10 ವರ್ಷ ಕಠಿಣ ಶಿಕ್ಷೆ – ಆಕೆ ಮಾಡುತ್ತಿದ್ದುದೇನು ಗೊತ್ತೆ?

FB_IMG_1637843292900
Ad Widget

Ad Widget

Ad Widget

ಛತ್ತೀಸಗಢ: ನಿಷೇಧಿತ ಸಿಮಿ, ಇಂಡಿಯನ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಯ ಜತೆ ಸಂಪರ್ಕ ಹೊಂದಿ ಹಲವಾರು ಉಗ್ರರಿಗೆ ನೆರವು ನೀಡುತ್ತಿದ್ದ ಮಂಗಳೂರಿನ ದಂಪತಿಗೆ ಇದೀಗ 10 ವರ್ಷಗಳ ಶಿಕ್ಷೆಯಾಗಿದೆ.

Ad Widget

ಜುಬೇರ್ ಹುಸೇನ್ (42), ಆತನ ಪತ್ನಿ ಆಯೇಷಾ ಬಾನು (39) ಶಿಕ್ಷೆಗೊಳಗಾದವರು. ಇವರ ಮೇಲಿನ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ರಾಯಪುರದ ಕೋರ್ಟ್‌ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.

Ad Widget

Ad Widget

Ad Widget

ಇವರು ಮಾಡುತ್ತಿದ್ದುದೇನು?
ಮಂಗಳೂರಿನ ಈ ದಂಪತಿಯ ಹಿನ್ನೆಲೆಯೂ ಭಯಾನಕವಾಗಿದೆ. ಮಂಗಳೂರಿನಿಂದಲೇ ತಮ್ಮ ಕಾರ್ಯವನ್ನು ಶುರು ಮಾಡಿದ್ದರು ಈ ದಂಪತಿ. ಅದರಲ್ಲಿಯೂ ಪತ್ನಿ ಆಯೇಷಾಳದ್ದು ಪ್ರಮುಖ ಪಾತ್ರ. ನೆರೆಹೊರೆಯವರ ಜತೆ ಸಭ್ಯರಂತೆ ವರ್ತಿಸುತ್ತಿದ್ದ ಈಕೆ ಯಾರಿಗೂ ಅನುಮಾನ ಬಾರದಂತೆ ತನ್ನ ಕೆಲಸ ಮಾಡುತ್ತಿದ್ದಳು.

Ad Widget

ಅಲ್ಲಿಂದ ಈ ದಂಪತಿ ರಾಯಪುರಕ್ಕೆ ಹೋಗಿ ಅಲ್ಲಿ ತಮ್ಮ ಕುಕೃತ್ಯ ಮುಂದುವರೆಸಿದ್ದರು. ಆದರೆ ಸುಲಭದಲ್ಲಿ ಇವರು ಸಿಕ್ಕಿಬೀಳುತ್ತಿರಲಿಲ್ಲ.

Ad Widget

Ad Widget

ಕರ್ನಾಟಕದಲ್ಲಿಯೂ ಉಗ್ರ ಸಂಘಟನೆಯ ಲಿಂಕ್‌ ಇರುವುದನ್ನು ಅರಿತಿದ್ದ ತನಿಖಾಧಿಕಾರಿಗಳು ಸಂಶಯಾಸ್ಪದ ವ್ಯಕ್ತಿಗಳ ಮೇಲೆ ಕಣ್ಣು ಇಟ್ಟಿದ್ದರು.

2013ರಲ್ಲಿ ಬೀದಿ ಬದಿಯಲ್ಲಿ ಹೋಟೆಲ್ ಮಾಡುತ್ತಿದ್ದ ಧೀರಜ್ ಸಾವೋನ ಎಂಬ ಉಗ್ರನನ್ನು ಬಂಧಿಸಲಾಗಿತ್ತು. ಈತ ಇಂಡಿಯನ್ ಮುಜಾಹಿದೀನ್, ಸಿಮಿ ಸಂಘಟನೆ ಜತೆ ಸಂಬಂಧ ಹೊಂದಿದವರಿಗೆ ಪಾಕಿಸ್ತಾನದ ಖಾಲಿದ್ ಎಂಬುವವನಿಂದ ಹಣ ಪಡೆದು ಉಗ್ರರ ಖಾತೆಗೆ ರವಾನಿಸುತ್ತಿದ್ದ ವಿಷಯ ಬಹಿರಂಗಗೊಂಡಿತು.

ಈತನ ಹಿನ್ನೆಲೆ ಕೆದಕಿದಾಗ ಸಿಕ್ಕಿದ್ದೇ ಈ ಆಯೇಷಾ ಬಾನೋ. ಈಕೆಯ ಬ್ಯಾಂಕ್ ಖಾತೆಗೂ ಸಹ ಈತನಿಂದ ಹಣದ ವರ್ಗಾವಣೆ ಆಗುತ್ತಿತ್ತು.

ಆಕೆಯ ಮೂಲ ಕೆದಕಿದಾಗ ಮಂಗಳೂರು ಮೂಲಕ ಈಕೆ ತನ್ನ ಪತಿಯ ಜತೆಗೂಡಿ ಉಗ್ರ ಕೃತ್ಯದಲ್ಲಿ ತೊಡಗಿರುವುದು ತಿಳಿಯಿತು. ಸಿಮಿ ಹಾಗೂ ಇಂಡಿಯನ್ ಮುಜಾಹಿದೀನ್ ಉಗ್ರರ ಜತೆ ಕೂಡ ಈಕೆ ನಂಟು ಹೊಂದಿರುವುದು ಬಹಿರಂಗವಾಯಿತು.

ಇವಳು ಬಿಹಾರದ ಸುಮಾರು 50 ಬ್ಯಾಂಕ್ ಖಾತೆಯ ನೆಟ್ ಬ್ಯಾಂಕಿಂಗ್ ಅನ್ನು ಹೊಂದಿದ್ದಳು. ಇದರ ಮೂಲಕ ಉಗ್ರರಿಗೆ ಹಣ ನೀಡುತ್ತಿದ್ದಳು.

ಆದಾಯ ತೆರಿಗೆ ಇಲಾಖೆಯ ಕಣ್ಣನ್ನು ತಪ್ಪಿಸಲು 49 ಸಾವಿರಕ್ಕಿಂತ ಕಡಿಮೆ ಹಣವನ್ನು ವರ್ಗವಣೆ ಮಾಡುತ್ತಿದ್ದಳು. ಮೊದಮೊದಲು ಅಕ್ಕಪಕ್ಕದ ಮನೆಯವರಿಗೆ ವಿಚಾರಿಸಿದಾಗ ಸಭ್ಯಳಂತೆ ಇದ್ದ ಈಕೆಯ ಬಗ್ಗೆ ಯಾರಿಗೂ ಸುಳಿವೇ ಇರದದ್ದು ತಿಳಿಯಿತು. ಕೊನೆಗೆ ಎಲ್ಲಾ ಸಾಕ್ಷ್ಯಾಧಾರಗಳನ್ನು ಕಲೆಹಾಕಿದ ಪೊಲೀಸರ ಕೈಗೆ ಕೊನೆಗೂ 2013ರಲ್ಲಿ ಸಿಕ್ಕಿಬಿದ್ದಳು. ಈ ದಂಪತಿ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿ ಕೇಸ್‌ ದಾಖಲಾಗಿತ್ತು. ಇದೀಗ 10 ವರ್ಷಗಳ ಕಠಿಣ ಶಿಕ್ಷೆಯಾಗಿದೆ.

Leave a Reply

Recent Posts

ಮಹಿಳಾ ಪೊಲೀಸ್ ಪೇದೆಯನ್ನು ಹತ್ಯೆಗೈದು ನಾಪತ್ತೆಯಾಗಿದ್ದಳೆ ಎಂದು ಬಿಂಬಿಸಿದ್ದ ಸಹೋದ್ಯೋಗಿ ಎರಡು ವರ್ಷಗಳ ಬಳಿಕ ಅಂದರ್ ! ಚೈತ್ರಾ ಟಿಕೆಟ್‌ ಡೀಲ್ ನಂತೆ ನಕಲಿ ಪಾತ್ರ, ತಿರುಚಿದ ಆಡಿಯೋ, ನಕಲಿ ಕೊವೀಡ್‌ ಸರ್ಟಿಫಿಕೆಟ್‌ – ಅಬ್ಬಾಬ್ಬ ಕೊಲೆಯನ್ನು ಮುಚ್ಚಲು ಈ ಕ್ರಿಮಿನಲ್‌ ಮಾಡಿದ ಪ್ಲ್ಯಾನ್‌ ಒಂದಾ ಎರಡಾ ?

error: Content is protected !!
%d bloggers like this: