ಪುತ್ತೂರು, ನ.25: ನೆಟ್ಟಣ ರೈಲ್ವೆ ನಿಲ್ದಾಣದಿಂದ ಪ್ರಯಾಣಿಕರನ್ನು ಹೊತ್ತುಕೊಂಡು ತೆರಳುತ್ತಿದ್ದ KSRTC ಬಸ್ ಗಳ ಸಂಚಾರಕ್ಕೆ ಅಡ್ಡಿಪಡಿಸಿದ ಪ್ರಕರಣದ ಆರೋಪಿಗಳನ್ನು ಪ್ರಕರಣದಿಂದ ಬಿಡುಗಡೆಗೊಳಿಸಿ ನ್ಯಾಯಾಲಯ ಆದೇಶಿಸಿದೆ.
ದಿನಾಂಕ 19/8/2012 ರಂದು ನೆಟ್ಟಣ ರೈಲ್ವೆ ನಿಲ್ದಾಣ ದಿಂದ ರೈಲಿನ ಪ್ರಯಾಣಿಕರನ್ನು ಹೊತ್ತುಕೊಂಡು ತೆರಳುತ್ತಿದ್ದ KSRTC ಬಸ್ ಗಳನ್ನು ಆರೋಪಿಗಳಾದ ಥೋಮಸ್,ಅಲಿಯಾರ್, ಕಿಶೋರ್, ಚಂದ್ರಶೇಖರ,ನಾಗೇಶ, ಹರೀಶ, ಖಾಲಿದ್, ಗಿರೀಶ್ ಎಂಬವರು ಅಕ್ರಮ ಕೂಟ ರಚಿಸಿ ತಮ್ಮ ಜೀಪ್ ಗಳನ್ನು ಅಡ್ಡಗಟ್ಟಿ ಜೀವ ಬೆದರಿಕೆ ಹಾಕಿ ಕರ್ತವ್ಯ ಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಕಡಬ ಪೋಲಿಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಪೂರೈಸಿ ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಕೆಯಾಗಿತ್ತು. ಪ್ರಾಸಿಕ್ಯೂಶನ್ ವತಿಯಿಂದ ಅಂದಿನ ಪುತ್ತೂರು ಡಿಪೋ ಮ್ಯಾನೆಜರ್ ಜೈಶಾಂತ್ , ನಿರ್ವಾಹಕರು, ಚಾಲಕರು ಸೇರಿದಂತೆ 18 ಸಾಕ್ಷಿದಾರರ ಸುದೀರ್ಘ ವಿಚಾರಣೆ ನಡೆಸಿದ ಪುತ್ತೂರಿನ ಎರಡನೆ ಹೆಚ್ಚುವರಿ ಸಿವಿಲ್ ಹಾಗು ನ್ಯಾಯಿಕ ದಂಡಾಧಿಕಾರಿ ನ್ಯಾಯಾಧೀಶರು ಅಭಿಯೋಜನೆಯು ಆರೋಪಿಗಳ ವಿರುದ್ದದ ದೋಷಾರೋಪವನ್ನು ಸಾಬೀತುಪಡಿಸಲು ವಿಫಲರಾಗಿದ್ದಾರೆ ಎಂದು ಅಭಿಪ್ರಾಯಿಸಿ ಆರೋಪಗಳನ್ನು ಪ್ರಕರಣದಿಂದ ಬಿಡುಗಡೆಗೊಳಿಸಿ ಆದೇಶಿಸಿದ್ದಾರೆ.
ಆರೋಪಿಗಳ ಪರವಾಗಿ ಪುತ್ತೂರಿನ ಖ್ಯಾತ ಯುವ ನ್ಯಾಯವಾದಿ ಮುರಳಿಕೃಷ್ಣ ಕೆ. ಎನ್ ಇವರು ವಾದಿಸಿದ್ದರು.