ಉಪ್ಪಿನಂಗಡಿ : ನ 24 : ಉಪ್ಪಿನಂಗಡಿ ಸಮೀಪದ ಖ್ಯಾತ ನಾಟಿ ವೈದ್ಯರು ಹಾಗೂ ಅವರ ಪತ್ನಿ 24 ಗಂಟೆಯ ಅಂತರದಲ್ಲಿ ನಿಧನರಾಗಿದ್ದೂ ಸಾವಿನಲ್ಲೂ ಸತಿ –ಪತಿ ಜತೆಯಾಗಿದ್ದಾರೆ
ಬೆಳ್ತಂಗಡಿ ತಾಲೂಕಿನ ಪದ್ಮುಂಜ ನಿವಾಸಿ, ನಾಟಿ ವೈದ್ಯರಾಗಿದ್ದ ವೆಂಕಪ್ಪ ಪಂಡಿತರವರು ನ.19 ರಂದು ರಾತ್ರಿ ನಿಧನ ಹೊಂದಿದ್ದರು. ಅದರ ಮರುದಿನ(ನ.20) ಬೆಳಿಗ್ಗೆ ಇವರ ಪತ್ನಿ ಸರಸ್ವತಿಯವರೂ ಮೃತಪಟ್ಟಿದ್ದಾರೆ. ಈ ಮೂಲಕ ಸಪ್ತಪದಿ ತುಳಿದು ವೈವಾಹಿಕ ಜೀವನದ ಯಾತ್ರೆಯನ್ನು ಜತೆಯಾಗಿ ಆರಂಭಿಸಿದವರು ಇದೀಗ ಇಹಲೋಕದ ಯಾತ್ರೆಯನ್ನು ಜತೆಯಾಗಿ ಮುಗಿಸಿದ್ದಾರೆ.
ವೆಂಕಪ್ಪ ಪಂಡಿತರವರು ಉಪ್ಪಿನಂಗಡಿ ಪರಿಸರದ ಖ್ಯಾತ ನಾಟಿ ವೈದ್ಯರಾಗಿದ್ದರು. ಪಕ್ಷಪಾತ, ಕೆಂಪು, ಕಣ್ಣ ದ್ರಷ್ಟಿ, ಚಿನ್ನೆ ಸೇರಿದಂತೆ ಹಲವಾರು ರೋಗಗಳಿಗೆ ನಾಟಿ ಮದ್ದು ನೀಡುವ ಮೂಲಕ ಜನಪ್ರಿಯತೆ ಗಳಿಸಿದ್ದರು. ಮೃತರು ಪುತ್ರರಾದ ಕುಶಾಲಪ್ಪ, ಉಮೇಶ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.
