ಪುತ್ತೂರು, ನ.24: ಕ್ಯಾಂಪಸ್ ಪ್ರಂಟ್ ಆಪ್ ಇಂಡಿಯಾದ ವಿದ್ಯಾರ್ಥಿಗಳು ಪುತ್ತೂರು ನಗರದಲ್ಲಿ ಸೇರಿ ದಿಢೀರ್ ಮೆರವಣಿಗೆ ನಡೆಸಿ ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ಕೊಂಬೆಟ್ಟು ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಇರಿದು ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪುತ್ತೂರು ನಗರ ಪೊಲೀಸ್ ಠಾಣೆ ಆವರಣಕ್ಕೆ ನಗರದ ಹಳೆ ಅಂಚೆ ಕಚೇರಿ ಬಳಿ ಸೇರಿ ಅಲ್ಲಿಂದ ಠಾಣೆಗೆ ತೆರಳಿ ಅಲ್ಲಿ ಪ್ರತಿಭಟನೆ ನಡೆಸಿದರು.
ಗುಂಪು ಸೇರಿದ ವಿದ್ಯಾರ್ಥಿಗಳು ಹಲ್ಲೆ ನಡೆಸಿದವರನ್ನು ಬಂಧಿಸುವಂತೆ ಆಗ್ರಹಿಸಿ ಘೋಷಣೆ ಕೂಗಿದ್ದಾರೆ.
ಈ ಸಂದರ್ಭ ಡಿವೈಎಸ್ಪಿ ಧನ್ಯ, ಠಾಣಾಧಿಕಾರಿ, ಸಬ್ ಇನ್ಸ್ಪೆಕ್ಟರ್ ಪ್ರತಿಭಟನಾ ನಿರಂತರ ಜತೆ ಮಾತನಾಡಿದಾಗ ಪ್ರತಿಭಟನಾಕಾರರು ಹಲ್ಲೆ ನಡೆಸಿದವರನ್ನು 24 ಗಂಟೆಯೊಳಗೆ ಬಂಧಿಸಲು ಗಡು ನೀಡಿ ಧರಣಿ ಹಿಂಪಡೆದಿದ್ದಾರೆ.
ಪ್ರತಿಭಟನೆಯ ದೃಶ್ಯ:
ಅರುಣ್ ಕುಮಾರ್ ಪುತ್ತಿಲ ಬಂಧನಕ್ಕೆ ಒತ್ತಾಯ: ಪ್ರತಿಭಟನೆ ಸಂದರ್ಭ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ ಮಾತನಾಡಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಸಹಿತ ಕಾಲೇಜ್‌ನಲ್ಲಿ ಲವ್ ಜಿಹಾದ್ ಬಗ್ಗೆ ಸಭೆ ನಡೆಸಿದ ಹಿಂದೂ ಸಂಘಟನೆಯವರನ್ನು ಬಂಧಿಸಲು ಆಗ್ರಹಿಸಿದ್ದಾರೆ.
ಧರಣಿಯಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ, ಜಿಲ್ಲಾಧ್ಯಕ್ಷ ಅನ್ಸಾರ್ ಬೆಳ್ಳಾರೆ, ಜಿಲ್ಲಾ ಮುಖಂಡ ರಿಯಾಜ್ ಅಂಕತಡ್ಕ, ಪಾರೂಕ್ ಕಬಕ, ಸಂಶುದ್ದಿನ್ ವಿಟ್ಲ ಸೇರಿದಂತೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಐವತ್ತಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಪಾಲ್ಗೊಂಡರು.
ಠಾಣೆಯ ಮುಂದೆ ಪ್ರತಿಭಟನೆಯ ದೃಶ್ಯ: