ಮಂಗಳೂರು: ‘ಬಿರುವೆರ್ ಕುಡ್ಲ ‘ ಸಂಘಟನೆಯ ಸ್ಥಾಪಕರ ಮದುವೆಯಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಪಾಲ್ಗೊಂಡರು.
ನ.21ರಂದು ‘ಬಿರುವೆರ್ ಕುಡ್ಲ’ ಸಂಘಟನೆಯ ಸ್ಥಾಪಕ ಉದಯ ಪೂಜಾರಿ ವಿವಾಹವು ಸೋನಿಯಾ ರಂದು ನಡೆದು ರಾತ್ರಿ ಲಾನ್ಸ್ ಅಡ್ಯಾರ್ ಗಾರ್ಡನ್ ನಲ್ಲಿ ಔತನಕೂಟ ನಡೆಯಿತು.
ಔತನಕೂಟಕ್ಕೆ ಮದುಮಗ ಉದಯ ಪೂಜಾರಿ ಆಪ್ತ ಕನ್ನಡದ ಸ್ಟಾರ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಪಾಲ್ಗೊಂಡರು.
ದರ್ಶನ್ ಭೇಟಿ ದೃಶ್ಯ:
ದರ್ಶನ್ ವೇದಿಕೆ ಹತ್ತುತಿದ್ದಂತೆ ಮಳೆಯೂ ಪ್ರಾರಂಭವಾಯಿತು. ಮಳೆಯ ನಡುವೆಯೂ ದರ್ಶನ್ ನೂತನ ವಧುವರರಿಗೆ ಶುಭಹಾರೈಸಿದರು.
‘ತುಳು ಪಾತೆರ್ರೆ ಬರ್ಪುಜಿ ಅರ್ಥ ಆಪೂಂಡು’ ಎಂದು ತುಳುವಿನಲ್ಲೇ ದರ್ಶನ್ ಹೇಳಿದರು.
ಭಾರೀ ಸಂಖ್ಯೆಯ ಅಭಿಮಾನಿಗಳು, ಬಿರುವೆರ್ ಕುಡ್ಲ ಸಂಘಟನೆಯ ಕಾರ್ಯಕರ್ತರು ದರ್ಶನ್ ಆಗಮನದ ಸಂದರ್ಭ ಉಪಸ್ಥಿತರಿದ್ದರು.

ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ವಿಧಾನಪರಿಷತ್ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ, ರಾಜಶೇಖರ್ ಕೋಟ್ಯಾನ್, ಸತ್ಯಜಿತ್ ಸುರತ್ಕಲ್ ಸಹಿತ ನೂರಾರು ಜನ ವಧುವರರಿಗೆ ಶುಭಹಾರೈಸಿದರು.
ದರ್ಶನ್ ಭೇಟಿ ದೃಶ್ಯ:
ಇಂಜಿನಿಯರಿಂಗ್ ಪದವೀಧರ ಪುತ್ತೂರಿನ ಯುವಕನಿಂದ ಗೋ ತ್ಯಾಜದಿಂದ ಸಾವಯವ ರಸಗೊಬ್ಬರ ತಯಾರಿಕೆ – ರಾಜ್ಯದಲ್ಲೇ ಮೊದಲ ಪ್ರಯತ್ನಕ್ಕೆ ಭರ್ಜರಿ ಬೇಡಿಕೆ