ಪುತ್ತೂರು : ನ 22 : ನಾಲ್ಕು ದಿನಗಳ ನಂತರ ಜರುಗಲಿದ್ದ ವಿವಾಹ ನಿಶ್ಚಿತಾರ್ಥದ ವರ ತನ್ನ ಪ್ರೀತಿಯನ್ನು ಅಡಗಿಸಿ ಸಹೋದರನ ನಿರ್ಮಾಣ ಹಂತದಲ್ಲಿದ್ದ ಮನೆಯ ಕೊಣೆಯೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದುರಂತವೊಂದು ಭಾನುವಾರ ನ .21 ರಂದು ನಡೆದಿದೆ.
ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಸುಳ್ಯಪದವು ಸಮೀಪ ಶಬರಿನಗರ ನಿವಾಸಿ ಕೂಸಪ್ಪ ಪೂಜಾರಿ ಅವರ ಪುತ್ರ ರವಿರಾಜ್ ( 31 ) ಆತ್ಮಹತ್ಯೆ ಮಾಡಿಕೊಂಡ ಯುವಕ . ವಿದೇಶದಲ್ಲಿರುವ ಈತನ ಸಹೋದರ ನೆಟ್ಟಣಿಗೆಮುಡ್ನೂರು ಗ್ರಾಮದ ಮುಂಡ್ಯ ಕರೆಂಟಿಯಡ್ಕ ಎಂಬಲ್ಲಿ ನಿರ್ಮಿಸುತ್ತಿರುವ ಮನೆಯ ಬಚ್ಚಲು ಕೋಣೆಯಲ್ಲಿ ರವಿರಾಜ್ ಆತ್ಮಹತ್ಯೆಗೈದಿದ್ದಾನೆ.
ರವಿರಾಜ್ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು ಆತನ ವಿವಾಹ ನಿಶ್ಚಿತಾರ್ಥವೂ ನ 25 ರಂದು ವಿಟ್ಲದ ಯುವತಿಯೊಂದಿಗೆ ನಡೆಸುವುದಾಗಿ ಎರಡು ಕುಟುಂಬದ ಹಿರಿಯರು ನಿಶ್ಚಯಿಸಿದ್ದರು. ಇದಕ್ಕೆ ಸಕಲ ಸಿದ್ದತೆಯೂ ಎರಡು ಕುಟುಂಬಗಳು ಮಾಡಿಕೊಂಡಿತ್ತು. ಈ ಹಿನ್ನಲೆಯಲ್ಲಿ ಆತ ನ.19ರಂದು ಬೆಂಗಳೂರಿನಿಂದ ಊರಿಗೆ ಬಂದಿದ್ದರು
ಆದರೇ ನ .21 ರಂದು ಬೆಳಿಗ್ಗೆ ರವಿರಾಜ್ ನ ಮನೆಯವರಿಗೆ ಆಘಾತ ಕಾದಿತ್ತು. ಆತನ ಮನೆಗೆ ಕುಂದಾಪುರದ ಯುವತಿಯ ಕುಟುಂಬವೊಂದು ವಿವಾಹ ಮಾತುಕತೆ ನಡೆಸಲು ಮೂರು ಕಾರಿನಲ್ಲಿ ಬಂದಿಳಿದಿದ್ದರು. ಆದರೇ ಈ ವೇಳೆ ವರ ರವಿರಾಜ್ ಮನೆಯಲ್ಲಿರಲಿಲ್ಲ. ಈ ಹಂತದಲ್ಲಿ ತಬ್ಬಿಬ್ಬಾದ ರವಿರಾಜ್ ಮನೆಯವರು ಯುವಕನಿಗೆ ಈಗಾಗಲೇ ವಿವಾಹ ನಿಶ್ಚಯಗೊಂಡಿರುವ ವಿಚಾರವನ್ನು ಅವರಿಗೆ ತಿಳಿಸಿದ್ದಾರೆ. ಆತ ಕುಂದಾಪುರದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ವಿಚಾರ ಹಾಗೂ ಅ ವಿವಾಹ ಸಂಬಂಧ ಕುದುರಿಸಲು ತಾವು ಬಂದಿರುವ ವಿಚಾರವನ್ನು ದಿಬ್ಬಣ ಬಂದಿದ್ದವರು ರವಿರಾಜ್ ಮನೆಯವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಉದ್ಭವಿಸಿದ ಗೊಂದಲವನ್ನು ಎರಡು ಕಡೆಯವರು ಯುವಕನ ಮುಂದೆಯೇ ಕೂತು ಚರ್ಚಿಸಿ ಪರಿಹರಿಸಲು ನಿರ್ಧರಿಸಿದ್ದರು. ಆದರೇ ರವಿರಾಜ್ ಪುತ್ತೂರಿನಲ್ಲಿರುವ ಸ್ನೇಹಿತರ ಮನೆಗೆ ಹೋಗಿ ನ.21ರಂದು ಸಂಜೆ ಬರುವುದಾಗಿ ತಿಳಿಸಿ ನ.20ರಂದು ಮನೆಯಿಂದ ಹೊರಹೋಗಿದ್ದರು. ಹೀಗಾಗಿ ಆತನ ಮನೆಯವರು ರವಿರಾಜ್ ಮೊಬೈಲ್ ಪೋನಿಗೆ ಕರೆ ಮಾಡಿದ್ದು ಆದರೇ ಆತನ ಮೊಬೈಲ್ ಸ್ವಿಚ್ಚಪ್ ಆಗಿತ್ತು.
ಹೀಗಾಗಿ ಆತಂಕಕ್ಕೆ ಒಳಗಾದ ಆತನ ಮನೆಯವರು ಹುಡುಕಾಟಕ್ಕೆ ಶುರು ಮಾಡಿದ್ದಾರೆ ಈ ವೇಳೆ ಈಶ್ವರಮಂಗಲ ಸಮೀಪದ ಮುಂಡ್ಯದಲ್ಲಿ ನಿರ್ಮಾಣ ಹಂತದ ಸಹೋದರನ ಮನೆಯಲ್ಲಿ ರವಿರಾಜ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿದು ಬಂದಿದೆ. ಬಳಿಕ ಈ ಬಗ್ಗೆ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ . ವಿಷಯ ತಿಳಿಯುತ್ತಲೇ ಕುಂದಾಪುರದಿಂದ ಆಗಮಿಸಿದ ಯುವತಿಯ ಮನೆಯವರು ವಾಪಸ್ಸಾಗಿದ್ದಾರೆ
ಮೂಲಗಳ ಪ್ರಕಾರ ರವಿರಾಜ್ ಕುಂದಾಪುರದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಈ ವಿಚಾರವನ್ನ ಆತ ತನ್ನ ಮನೆಯವರಿಗೆ ತಿಳಿಸದೆ ಗುಟ್ಟಾಗಿ ಇಟ್ಟಿದ್ದ. ಈ ನಡುವೆ ರವಿರಾಜ್ಗೆ ಮನೆಯವರು ವಿಟ್ಲದ ಯುವತಿಯೊಂದಿಗೆ ವಿವಾಹ ಸಂಬಂಧ ಮಾತುಕತೆ ಬೆಳೆಸಿ ನ.25ರಂದು ವಿವಾಹ ನಿಶ್ಚಿತಾರ್ಥಕ್ಕೆ ದಿನಾಂಕ ನಿಗದಿಪಡಿಸಿ ಸಿದ್ಧತೆ ನಡೆಸಿದ್ದರು. ಆದರೆ ಈ ಬಗ್ಗೆ ಮಾಹಿತಿ ಪಡೆದೋ ಯುವತಿಯ ಸೂಚನೆಯ ಮೇರೆಗೂ ಅಥಾವ ಹಠಕ್ಕೆ ಕಟ್ಟುಬಿದ್ದೋ ಕುಂದಾಪುರದಿಂದ ಯುವತಿಯ ಕುಟುಂಬಸ್ಥರು ವಿವಾಹ ಮಾತುಕತೆಗೆ ಬಂದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ರವಿರಾಜ್ ನ ಪ್ರಿಯತಮೆ ಆತನಿಗೆ ಪೂರ್ವ ಸೂಚನೆ ನೀಡಿರಬಹುದು. ಈ ಹಂತದಲ್ಲಿ ಒತ್ತಡಕ್ಕೆ ಒಳಗಾದ ಯುವಕ ಪ್ರೀತಿಯನ್ನು ನಿರಾಕರಿಸಲಾಗದೇ, ಇತ್ತ ಮನೆಯವರಿಗೂ ಪ್ರೀತಿಯ ವಿಚಾರ ತಿಳಿಸಲಾಗದೇ ಉಭಯ ಸಂಕಟಕ್ಕೆ ತುತ್ತಾಗಿ ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರಕ್ಕೆ ಮುಂದಾಗಿರಬಹುದು ಎಂದು ಶಂಕಿಸಲಾಗಿದೆ
ಅತ್ತ ರವಿರಾಜ್ ಮದುವೆ ಕನಸು ಕಂಡಿದ್ದ ಕುಂದಾಪುರ ಮತ್ತು ವಿಟ್ಲದ ಯುವತಿಯರಿಬ್ಬರಗೂ ರವಿರಾಜ್ನ ಅಘಾತ ಉಂಟು ಮಾಡಿದೆ. ಇತ್ತ ಎಲ್ಲವನ್ನೂ ಗುಟ್ಟಾಗಿಟ್ಟು ಕೊನೆಗೆ ಇಕ್ಕಟ್ಟಿಗೆ ಸಿಲುಕಿ ಅನ್ಯಾಯವಾಗಿ ಪ್ರಾಣ ಕಳಕೊಂಡ ಮಗನಿಗಾಗಿ ಕಣ್ಣೀರಿಡುತ್ತಿದ್ದಾರೆ.