ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ನೂತನ ಆಡಳಿತ ಮಂಡಳಿಯ ಸೇವಾ ದೀಕ್ಷಾ ಸಮಾರಂಭ

WhatsApp-Image-2021-11-20-at-11.19.05-AM
Ad Widget

Ad Widget

Ad Widget

ಪುತ್ತೂರು : ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಪುತ್ತೂರು ಇದರ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳ ಸೇವಾ ದೀಕ್ಷಾ ಸಮಾರಂಭವು ನ.15ರಂದು ಶಾಲಾ ಆಡಳಿತ ಕಚೇರಿಯಲ್ಲಿ ನಡೆಯಿತು.

Ad Widget

ಮಾತೃ ಸಂಸ್ಥೆ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ.) ಇದರ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಡಾ| ಕೆ ಎಂ.ಕೃಷ್ಣ ಭಟ್ ಅವರು ಪ್ರತಿಜ್ಞಾವಿಧಿ ಬೋಧಿಸುವುದರ ಮೂಲಕ ಸೇವಾ ದೀಕ್ಷಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ  ಡಾ. ಶಿವಪ್ರಕಾಶ್.ಎಂ, ನೂತನ ಸಂಚಾಲಕರಾಗಿ ಜವಾಬ್ದಾರಿ ವಹಿಸಿಕೊಂಡ  ರವಿನಾರಾಯಣ.ಎಂ, ಖಜಾಂಜಿಯಾಗಿ ನಿಯುಕ್ತರಾದ ಕೃಷ್ಣ ಮೋಹನ್.ಪಿ.ಎಸ್ ಮತ್ತು ನೂತನ ಸದಸ್ಯರಾದ  ನಾಗೇಶ್ ಪ್ರಭು,  ಗೋವರ್ಧನಕುಮಾರ್ ವಿಟ್ಲ,  ಮಾಲಾ ಮಹೇಶ್.ವೈ,  ಡಾ. ಅಮೃತ ಪ್ರಸಾದ್ ಹಾಗೂ ಸದಸ್ಯರಾದ  ಹರೇಕೃಷ್ಣ,  ಚಂದ್ರಶೇಖರ.ಎಸ್ ಇವರುಗಳು ಉಪಸ್ಥಿತರಿದ್ದರು.

Ad Widget

Ad Widget

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ.) ಇದರ ಹಿರಿಯ ಸದಸ್ಯರಾದ  ಬಿರ್ಮಣ್ಣಗೌಡ ಅವರು ನೂತನ ಆಡಳಿತ ಮಂಡಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ.)ಇದರ ನಿರ್ದೇಶಕರಾದ  ಮುರಳಿಧರ್.ಕೆ ಹಾಗೂ  ಶಿವಪ್ರಸಾದ್.ಇ ಉಪಸ್ಥಿತರಿದ್ದರು. ನೂತನ ಸಂಚಾಲಕರಾದ ರವಿನಾರಾಯಣ.ಎಂ ಅವರು ಅಧ್ಯಾಪಕ ಸಮೂಹವನ್ನು ಉದ್ಧೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಾಲಾ ಅಧ್ಯಾಪಕ ವೃಂದ ಉಪಸ್ಥಿತರಿದ್ದರು.

Ad Widget

Leave a Reply

Recent Posts

error: Content is protected !!
%d bloggers like this: