ಪುತ್ತೂರು : ನ 22 : ಇಲ್ಲಿನ ಇತಿಹಾಸ ಪ್ರಸಿದ್ಧ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನ .21 ರಂದು ಸ್ವರ್ಣ ತಾಂಬೂಲ ಪ್ರಶ್ನಾ ಚಿಂತನೆಯನ್ನು ನಡೆಸಲಾಯಿತು. ಮುಂದಿನ ವಾರ ನಡೆಯಲಿರುವ ಅಷ್ಟಮಂಗಲ ಪ್ರಶ್ನಾ ಚಿಂತನೆ ಗೆ ಪೂರ್ವಾಭಾವಿಯಾಗಿ ಈ ಸ್ವರ್ಣ ತಾಂಬೂಲ ಪ್ರಶ್ನೆಯನ್ನು ಖ್ಯಾತ ಜ್ಯೋತಿಷಿಯಾದ ವಿದ್ವಾನ್ ಒಳಕುಂಜ ವೆಂಕಟ್ರಮಣ ಭಟ್ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.
ಮುಂಬರುವ ದಿನಗಳಲ್ಲಿ ದೇವಾಲಯದಲ್ಲಿ ನಡೆಸಲು ಉದ್ದೇಶಿಸಲಾಗಿರುವ ಹಲವು ಅಭಿವೃದ್ಧಿ ಕಾರ್ಯಗಳು ಹಾಗೂ ದೋಷಗಳಿರುವ ಬಗ್ಗೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯೂ ಅಷ್ಟಮಂಗಲ ಪ್ರಶ್ನಾ ಚಿಂತನೆಯಿಂದ ತಿಳಿದುಕೊಳ್ಳಲು ನಿರ್ಧರಿಸಿತ್ತು. ಈ ಹಿನ್ನಲೆಯಲ್ಲಿ ನ 29 ರಂದು ಅಷ್ಟ ಮಂಗಲ ಪ್ರಶ್ನೆ ಕಾರ್ಯಕ್ರಮವು ನಡೆಯಲಿದೆ. ಇದರ ಪೂರ್ವಭಾವಿಯಾಗಿ ಸ್ವರ್ಣ ಪ್ರಶ್ನೆ ಇಂದು ಜರುಗಿತು.
ಸ್ವರ್ಣ ತಾಂಬೂಲ ಪ್ರಶ್ನಾ ಚಿಂತನೆಗೆ ಆಗಮಿಸಿದ ಡಾ|ವಳಕುಂಜ ಮುರಳೀಕೃಷ್ಣ ಭಟ್ ಅವರಿಗೆ ದೇವಾಲಯದ ರಾಜಗೋಪುರದ ಬಳಿ ಸಕಲ ಬಿರುದಾವಳಿಗಳೊಂದಿಗೆ ಭವ್ಯ ಸ್ವಾಗತ ನೀಡಿ ದೇವಾಲಯಕ್ಕೆ ಕರೆದೊಯ್ಯಲಾಯಿತು. ವಿದ್ವಾನ್ ಜ್ಯೋತಿಷಿ ವೆಂಕಟ್ರಮಣ ಭಟ್ ರನ್ನು ಪೂರ್ಣಕುಂಭದ ಮೂಲಕ ಸ್ವಾಗತಿಸಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ರವರು ಹಾರಾರ್ಪಣೆ ಮಾಡಿ ದೇವಸ್ಥಾನದ ಸ್ವರ್ಣ ಪ್ರಶ್ನೆ ಕಾರ್ಯಕ್ರಮಕ್ಕೆ ಆಧರದಿಂದ ಬರಮಾಡಿಕೊಂಡರು. ಬಳಿಕ ದೇವಾಲಯದ ಸತ್ಯ-ಧರ್ಮ ನಡೆಯಲ್ಲಿ ಪೂಜೆ ಸಲ್ಲಿಸಿ ಪ್ರಶ್ನಾ ಚಿಂತನೆಯನ್ನು ಪ್ರಾರಂಭಿಸಲಾಯಿತು.

ಬಾಲಕಿ ಗರಿಮಾ, ಬೋನಂತಾಯ ವೀಳ್ಯದೆಳೆಗೆ ನಾಣ್ಯ ಹಾಕುವ ಮೂಲಕ ಪ್ರಶ್ನಾ ಚಿಂತನೆ ಪ್ರಾರಂಭಗೊಂಡಿತು. ಸ್ಥಳೀಯ ಜೋತಿಷಿ ಇ. ಗೋಪಾಲಕೃಷ್ಣ ಭಟ್ ಸಹಕರಿಸಿದರು.
ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಸದಸ್ಯರಾದ ರಾಮಚಂದ್ರ ಕಾಮತ್, ಸುಧಾ ಎಸ್.ರಾವ್, ವೀಣಾ ಬಿ.ಕೆ., ಐತ್ತಪ್ಪ ನಾಯ್ಕ ಶೇಖರ ನಾರಾವಿ, ರವೀದ್ರನಾಥ ರೈ ಬಳ್ಳಮಜಲು, ವೇ ಮೂ ವಿ.ಎಸ್, ವೇ| ಮೂ .ಭಟ್, ರಾಮದಾಸ್ ಗೌಡ, ಕಾರ್ಯ ನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ದೇವಾಲಯದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಮಾಜಿ ಆಡಳಿತ ಮೊಕೇಸರ ಎನ್.ಕೆ. ಜಗನ್ನಿವಾಸ್ ರಾವ್, ವಾಸ್ತು ಎಂಜಿನಿಯರ್ ಪಿ.ಜಿ. ಜಗನ್ನಿವಾಸ್ ರಾವ್, ಸಿವಿಲ್ ಗುತ್ತಿಗೆದಾರ ಕೊಟ್ಟಿಬೆಟ್ಟು ರಾಧಾಕೃಷ್ಣ ನಾಯ್ಕ ಕೆ. ರತ್ನಾಕರ ನಾಯ್ಕ ಮಾಜಿ ಪುರಸಭಾಪತಿ ರಾಜೇಶ ಬನ್ನೂರು, ಶ್ರೀಧರ ಪಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಸ್ವರ್ಣ ತಾಂಬೂಲ ಪ್ರಶ್ನೆ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ :
ನ 29 ರಂದು ಅಷ್ಟ ಮಂಗಲ ಪ್ರಶ್ನೆ – ಅದರ ಉದ್ದೇಶಗಳು
- 2 ವರ್ಷಗಳ ಹಿಂದೆ ಬ್ರಹ್ಮವಾಹಕರ ಶಿರದಿಂದ ಉತ್ಸವಮೂರ್ತಿ ಯ ಪುಷ್ಪಕನ್ನಡಿ ಯ ಮೇಲ್ಭಾಗ ಭೂಸ್ಪರ್ಶ ಮಾಡಿದ್ದರ ಕಾರಣ ಮತ್ತು ಅದಕ್ಕೆ ನಿವೃತ್ತಿ ಪರಿಹಾರ
- ಶಾಸಕರ ನೇತೃತ್ವದಲ್ಲಿ ಈಗಿನ ವ್ಯವಸ್ಥಾಪನಾ ಸಮಿತಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಮಹಾ ಅಭಿವೃದ್ಧಿ ಯೋಜನೆಯ ಪ್ರತಿಯೊಂದು ಕಾಮಗಾರಿಗೂ ದೈವಾನುಕೂಲ ಇದೆಯೇ ಎಂದು ತಿಳಿದುಕೊಂಡು ಮುಂದಡಿ ಇಡಲು ಚಿಂತನೆ
- ಇದು ದೇವರು – ಭಕ್ತರ ದೂತರ ಸಂಭಾಷಣೆ
- ದೇವರ ಸಾನ್ನಿಧ್ಯ ವೃದ್ಧಿಗೆ ಮಾಡವೇಕಾದ ನಿತ್ಯಕೈಂಕರ್ಯಗಳಲ್ಲಿ ಲೋಪದೋಷಗಳಿದ್ದಲ್ಲಿ ಅವುಗಳ ಬಗ್ಗೆ ಗಮನ ಸೆಳೆಯುವುದು ಮತ್ತು ಪರಿಹಾರ ಪಡೆದುಕೊಳ್ಳುವುದು
- ಲೋಪದೋಷಗಳಿದ್ದಲ್ಲಿ ಅವುಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ಸರಿಪಡಿಸಿಕೊಳ್ಳಲು ಮಾರ್ಗದರ್ಶನ ಪಡಕೊಳ್ಳಲು
ಸ್ವರ್ಣ ತಾಂಬೂಲ ಪ್ರಶ್ನೆ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ :