ರಾಮನಗರ : ನ 22 : ಮೈಸೂರು ಸಂಸದ ಪ್ರತಾಪ್ ಸಿಂಹರವರು ಪ್ರಯಾಣಿಸುತ್ತಿದ್ದ ಕಾರು ರಾಮನಗರ ಎಂಬಲ್ಲಿ ಪಲ್ಟಿಯಾಗಿ ಅವರಿಗೆ ಹಾಗೂ ಅವರ ಚಾಲಕನಿಗೆ ಗಾಯವಾಗಿದೆ ಎಂಬ ವರದಿಗಳು ಕನ್ನಡ ದೃಶ್ಯ ಮಾಧ್ಯಮ ಹಾಗೂ ವೆಬ್ ನ್ಯೂಸ್ ಪೋರ್ಟಲ್ ಗಳಲ್ಲಿ ಬಿತ್ತರವಾಗಿ ಅವರ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿತ್ತು . ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು ಅಪಘಾತಗೊಂಡ ಕಾರು ನನ್ನದಲ್ಲ ನಾನು ಸುರಕ್ಷಿತವಾಗಿದ್ದಾನೆ ಎಂದು ತಿಳಿಸಿದ್ದಾರೆ.
ಅಸಲಿಗೆ ಆದದ್ದೇನು ಎಂದರೇ, ಪ್ರತಾಪ್ ಸಿಂಹರವರು ನ 22 ರಂದು ಮಧ್ಯಾಹ್ನ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ರಾಮನಗರ ಬಳಿ ಹೊಟೇಲ್ ಒಂದರಲ್ಲಿ ಊಟ ಮಾಡುತ್ತಿದ್ದಾಗ ಕಾರೊಂದು ಅಪಘಾತವಾಗಿದೆ . ಈ ಸಂದರ್ಭ ಅವರ ರಕ್ಷಣೆಗೆ ಧಾವಿಸಿ ಪ್ರತಾಪ್ ಸಿಂಹ ಹಾಗೂ ಇತರರು ಧಾವಿಸಿದ್ದಾರೆ.
ಆದರೇ ಬ್ರೆಕಿಂಗ್ ನ್ಯೂಸ್ ಧಾವಂತದಲ್ಲಿ ಇದನ್ನು ಸರಿಯಾಗಿ ಅರ್ಥೈಸಿಕೊಳ್ಳದ ಮಾಧ್ಯಮ ವರದಿಗಾರರು ಪ್ರತಾಪ್ ಸಿಂಹ ಕಾರು ಅಫಘಾತಗೊಂಡಿದೆ ಎಂದು ವರದಿ ಮಾಡಿದ್ದರು . ಇದು ಅವರ ಅಭಿಮಾನಿಗಳ ಆತಂಕ ಹಾಗೂ ಜನರ ಮಧ್ಯೆ ಗೊಂದಲಕ್ಕೂ ಕಾರಣವಾಗಿತ್ತು. ವರದಿ ನೋಡಿದ ಹಲವರು ಸಂಸದರಿಗೆ ಈ ಬಗ್ಗೆ ವಿಚಾರಿಸಿದ್ದಾರೆ. ಈ ಹಿನ್ನಲೆಯಲ್ಲಿ ಅವರು ಪೇಸ್ ಬುಕ್ ಲೈವ್ ಬಂದು ಸ್ಪಷ್ಟನೆ ನೀಡಿದ್ದಾರೆ.

ಚನ್ನಪಟ್ಟಣದ ಹೊರವಲಯದಲ್ಲಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಮುದುಗೆರೆ ಬಳಿ ಹೋಟೆಲ್ ವೊಂದರ ಜಗುಲಿಯಲ್ಲಿ ಪ್ರತಾಪ ಸಿಂಹ ಅವರು ಊಟ ಮಾಡುತ್ತಿದ್ದ ವೇಳೆ ಅಪಘಾತದ ಸದ್ದು ಕೇಳಿಸಿದೆ.
ತಕ್ಷಣ ಹೊರ ಬಂದು ನೋಡಿದಾಗ ಕಾರೊಂದು ಪಲ್ಟಿಯಾಗಿತ್ತು. ಹಾಗೂ ಮುಚ್ಚಿದ ಡೋರ್ ಒಳಗಿಂದ ಹೊರಬರಲು ಆಗದೇ ಗಾಯಳುಗಳು ಕಷ್ಟ ಪಡುತ್ತಿದ್ದರು. ಆದರೇ ಆ ವೇಳೆ ಆ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಯಾರೂ ಅಪಘಾತಕ್ಕಿಡಾದವರ ನೆರವಿಗೆ ಧಾವಿಸಿಲ್ಲ.
ಇದನ್ನು ಗಮನಿಸಿದ ಪ್ರತಾಪ್ ಸಿಂಹ ಹಾಗೂ ಅವರ ಚಾಲಕ, ಗನ್ ಮ್ಯಾನ್ ಇತರರು ಧಾವಿಸಿ ಕಾರಿನ ಡೋರ್ ತೆಗೆದು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ಕಾರಿನ ಟೈರ್ ಬ್ಲಾಸ್ಟ್ ಆಗಿ ಅಪಘಾತ ಸಂಭವಿಸಿದೆ ಎಂದು ಗೊತ್ತಾಗಿದೆ.
ಪ್ರತಾಪ್ ಸಿಂಹ ಸ್ಪಷ್ಟನೆಯ ವಿಡಿಯೋ