ಬೆಂಗಳೂರು : ನ 22 : ಭಾರೀ ಅಳೆದು ತೂಗಿ ಕಾಂಗ್ರೇಸ್ ಪಕ್ಷವೂ ಮುಂಬರುವ ವಿಧಾನ ಪರಿಷತ್ ಚುನಾವಣೆಗೆ 17 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರತಿಷ್ಟಿತ ದ.ಕ ವಿಧಾನ ಪರಿಷತ್ ದ್ವಿ ಸದಸ್ಯ ಸ್ಥಾನಗಳ ಪೈಕಿ ಒಂದು ಸ್ಥಾನಕ್ಕೆ ಕಾಂಗ್ರೇಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
ಪ್ರಸ್ತುತ ಗ್ರಾಮೀಣ ಜನ ಜೀವನದ ಅವಿಭಾಜ್ಯ ಅಂಗವಾಗಿರುವ ಹಾಗೂ ದೇಶದ ವಿವಿದೆಡೆ ಲಕ್ಷಾಂತರ ಉದ್ಯೋಗ ಸೃಷ್ಟಿಗೆ ಕಾರಣವಾಗಿರುವ ಜನ ಸೇವಾ ಕೇಂದ್ರದ ರೂವಾರಿ, ಶೈಕ್ಷಣಿಕ ಮುಂದಾಳು , ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಡಾ. ಮಂಜುನಾಥ ಭಂಡಾರಿಯನ್ನು ಕಾಂಗ್ರೇಸ್ ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದೆ.
ಮನಮೋಹನ್ ಸಿಂಗ್ ನೇತ್ರತ್ವದ ಯುಪಿಎ ಸರಕಾರ ಜಾರಿಗೆ ತಂದ ಮಹತ್ವಾಕಾಂಕ್ಷೆಯ ಗ್ರಾಮೀಣ ಕಲ್ಯಾಣ ಯೋಜನೆ ಸಿ.ಎಸ್.ಸಿ.ಗಳ (ಸಾಮಾನ್ಯ ಸೇವಾ ಕೇಂದ್ರಗಳು) ಆರಂಭದಲ್ಲಿ ಮಂಜುನಾಥ ಭಂಡಾರಿಯವರು ಪ್ರಮುಖ ಭೂಮಿಕೆ ನಿಭಾಯಿಸಿದ್ದರು . “ರಾಜೀವ್ ವಿಕಾಸ್ ಕೇಂದ್ರ” ಯೋಜನೆಯನ್ನು ಆಗಿನ ಭಾರತ ಸರ್ಕಾರಕ್ಕೆ ಪ್ರಸ್ತಾಪಿಸಿದ ಅವರು, 10 ದಶಲಕ್ಷ ಗ್ರಾಮೀಣ ಯುವಕರಿಗೆ ಉದ್ಯೋಗ ಒದಗಿಸುವ ಯೋಜನೆಯನ್ನು ಅಂದಿನ ಪ್ರಧಾನಮಂತ್ರಿ ಶ್ರೀ ಮನಮೋಹನ್ ಸಿಂಗ್ ಅವರಿಗೆ ರವಾನಿಸಿದರು. ಈ ಪ್ರಸ್ತಾಪವನ್ನು ಕೇಂದ್ರ ಸಚಿವ ಸಂಪುಟವು ಸೆಪ್ಟೆಂಬರ್ 2006 ರಂದು ಸಿಎಸ್ ಸಿಗಳಾಗಿ ಒಪ್ಪಿಗೆ ಸೂಚಿಸಿತು.

ಮಂಜುನಾಥ ಭಂಡಾರಿ ಮೂಲತಃ ಭದ್ರಾವತಿ ತಾಲೂಕು ಹೊಳೆಹೊನ್ನೂರು ಹೋಬಳಿಯ ಅಗಸನಹಳ್ಳಿಯ ನಿವಾಸಿ. ಹಲವಾರು ವರ್ಷಗಳಿಂದ ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯರಾಗಿರುವ ಇವರು 2014ರ ಲೋಕ ಸಭಾ ಚುನಾವಣೆಯಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ವಿರುದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೇಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಎಐಸಿಸಿ ಮತ್ತು ಕೆಪಿಸಿಸಿಯ ವಿವಿಧ ಹುದ್ದೆಗಳಗಳಲ್ಲಿ ಮಂಜುನಾಥ್ ಭಂಡಾರಿ ಕಾರ್ಯನಿರ್ವಹಿಸಿದ್ದಾರೆ.
* ರಾಜ್ಯಾಶಾಸ್ತ್ರದಲ್ಲಿ ಎಂಎ ಪದವಿ ಪಡೆದಿರುವ ಇವರು ಮೆಕಾನಿಕಲ್ ಇಂಜಿನಿಯರಿಂಗ್ ಪದವೀಧರರು.
* ರಾಜೀವ್ ವಿಕಾಸ ಕೇಂದ್ರ ಕಾರ್ಯಕ್ರಮದ ರೂವಾರಿ. ಈ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ 600 ಕೋಟಿ ಅನುದಾನ ನೀಡಿತ್ತು.
ದೆಹಲಿ ವಾಯುಮಾಲಿನ್ಯ: ನ.26ರವರೆಗೂ ಟ್ರಕ್‌ಗಳಿಗೆ ನಿರ್ಬಂಧ, WFH ವಿಸ್ತರಣೆ
ಯುವಕರಿಗೆ ಸ್ಫೂರ್ತಿ
* ಯುವಕರನ್ನು ರಾಜಕೀಯಕ್ಕೆ ಕರೆತರಲು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಾಯಕತ್ವ ಗುಣ ಬೆಳೆಸುವ ಶಿಬಿರ ನಡೆಸಿದ್ದಾರೆ.
* ಅಮೆರಿಕ, ಕ್ಯೂಬಾ, ಇಸ್ರೇಲ್, ಶ್ರೀಲಂಕಾ, ಚೀನಾ ಮುಂತಾದ ಕಡೆ ನಡೆದ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಲ್ಲಿ ದೇಶದ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ.
* ಕರ್ನಾಟಕ ಸರ್ಕಾರದ ಇಂದಿರಾ ಜ್ಯೋತಿ ಯೋಜನೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕಾಂಗ್ರೇಸ್ ಪಟ್ಟಿ :
ಒಟ್ಟು 25 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 17 ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಪಕ್ಷ ಅಂತಿಮಗೊಳಿಸಿದೆ. ಪಟ್ಟಿ ಈ ಕೆಳಕಂಡಂತಿದೆ.
ಕಲಬುರಗಿ ಶಿವಾನಂದ ಪಾಟೀಲ ಮರಟೂರ
ಬೆಳಗಾವಿ ಚೆನ್ನರಾಜ ಹಟ್ಟಿಹೊಳಿ
ಉತ್ತರ ಕನ್ನಡ ಭೀಮಣ್ಣ ನಾಯ್ಕ
ಹುಬ್ಬಳ್ಳಿ–ಧಾರವಾಡ, ಗದಗ, ಹಾವೇರಿ ಸಲೀಂ ಅಹಮದ್
ರಾಯಚೂರ ಶರಣಗೌಡ ಪಾಟೀಲ
ಚಿತ್ರದುರ್ಗ ಬಿ.ಸೋಮಶೇಖರ್
ಶಿವಮೊಗ್ಗ ಆರ್.ಪ್ರಸನ್ನಕುಮಾರ
ದಕ್ಷಿಣ ಕನ್ನಡ ಮಂಜುನಾಥ ಭಂಡಾರಿ
ಚಿಕ್ಕಮಗಳೂರು ಎ.ವಿ. ಗಾಯತ್ರಿ ಶಾಂತೆಗೌಡ
ಹಾಸನ ಎಂ.ಶಂಕರ್
ತುಮಕೂರು ಆರ್.ರಾಜೇಂದ್ರ
ಮಂಡ್ಯ ಎಂ.ಜಿ. ಗೂಳಿಗೌಡ
ಬೆಂಗಳೂರು ಗ್ರಾಮಾಂತರ ಎಸ್.ರವಿ
ಕೊಡಗು ಡಾ.ಮಂತರ್ ಗೌಡ
ವಿಜಯಪುರ–ಬಾಗಲಕೋಟೆ ಸುನೀಲಗೌಡ ಪಾಟೀಲ
ಮೈಸೂರು–ಚಾಮರಾಜನಗರ ಡಾ.ಡಿ.ತಿಮ್ಮಯ್ಯ
ಬಳ್ಳಾರಿ ಕೆ.ಸಿ. ಕೊಂಡಯ್ಯ
ಬೀದರ್ , ಕೋಲಾರ, ಬೆಂಗಳೂರು ನಗರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾಂಗ್ರೇಸ್ ನಲ್ಲಿ ಗೊಂದಲ ಮುಂದುವರಿದಿದ್ದು, ನಾಳೆ ಬೆಳಿಗ್ಗೆ ಈ ಕ್ಷೇತ್ರಗಳ ನಿರ್ಧಾರವಾಗುವ ಸಾಧ್ಯತೆ ಇದೆ. ನಾಳೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ