ಪುತ್ತೂರು : ನ 22 : ಮೂಲತ ಉಜಿರೆ ಅತ್ತಾಜೆ ನಿವಾಸಿ ಪ್ರಸ್ತುತ ಬೆಳ್ಳಿಪ್ಪಾಡಿ ಗುತ್ತಿನಮನೆಯಲ್ಲಿ ವಾಸವಾಗಿದ್ದ ಚಿತ್ರಾ ಶೆಟ್ಟಿ (47ವ.)ಯವರು ನ.22 ರಂದು ಬೆಳಿಗ್ಗೆ ಹೃದಯಘಾತದಿಂದ ನಿಧನರಾಗಿದ್ದಾರೆ . ಇವರು ಉಜಿರೆ ಅತ್ತಾಜೆ ನಿವಾಸಿ ಅಶೋಕ್ ಶೆಟ್ಟಿಯವರ ಪತ್ನಿ.
ನ. 22ರಂದು ಬೆಳಿಗ್ಗೆ 2 ಗಂಟೆ ಸುಮಾರಿಗೆ ಮನೆಯಲ್ಲಿಯೇ ಹೃದಯಘಾತಕ್ಕೆ ತುತ್ತಾಗಿ ಅವರು ಮೃತಪಟ್ಟರು ಎಂದು ತಿಳಿದು ಬಂದಿದೆ.
ಮೂರು ವರ್ಷಗಳ ಹಿಂದೆ ಬ್ರೈನ್ ಹ್ಯಾಮರೇಜ್ ಗೆ ತುತ್ತಾಗಿದ್ದ ಅವರು ಬಳಿಕ ವರ್ಷಗಳ ಕಾಲ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು.

ಮೃತರು ಪತಿ, ಒಬ್ಬಳು ಹೆಣ್ಣು ಮಗಳು, ಇಬ್ಬರು ಗಂಡು ಮಕ್ಕಳು, ತಾಯಿ ಸರೋಜಿನಿ ಶೆಟ್ಟಿ, ಸಹೋದರಿಯರು, ಸಹೋದರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಯುವ ಜನತೆ ನೋಡಲೇಬೇಕಾದ ವೀಡಿಯೋ: ಯುವ ಜನರಲ್ಲೇ ಹೆಚ್ಚುತ್ತಿರುವ ಹೃದಯಾಘಾತಕ್ಕೆ ಕಾರಣಗಳೇನು? ಲಕ್ಷಣಗಳು ಕಂಡುಬಂದಾಗ ಕೈಗೊಳ್ಳಬೇಕಾದ ಮುಂಜಾಗರೂಕತೆಗಳು: ಪುತ್ತೂರಿನ ಖ್ಯಾತ ವೈದ್ಯ ಡಾ.ಸುರೇಶ್ ಪುತ್ತೂರಾಯ