ನವದೆಹಲಿ: ತರಕಾರಿ , ದಿನಬಳಕೆ ವಸ್ತು, ಪೆಟ್ರೋಲ್ ಡಿಸೇಲ್ ಗಳ ಬಳಿಕ ಇದೀಗ ಮೊಬೈಲ್ ರಿಚಾರ್ಜ್ ಗಳ ಬೆಲೆಯಲ್ಲೂ ಏರಿಕೆಯಾಗಿದೆ. ಏರ್ ಟೆಲ್ ತನ್ನ ಗ್ರಾಹಕರಿಗೆ ಶಾಕ್ ನೀಡಿದ್ದು, ಕಾಲಿಂಗ್ ಮತ್ತು ಡೇಟಾ ರಿಚಾರ್ಜ್ ದರಗಳನ್ನು ಶೇ.20ರಿಂದ 25ರಷ್ಟು ಹೆಚ್ಚಿಸಿವೆ.
ಆರಂಭಿಕ ಕರೆಗಳ ಯೋಜನೆಯ ದರವನ್ನು ಸುಮಾರು ಶೇಕಡ 25 ಹೆಚ್ಚಿಸಲಾಗಿದೆ. ಆದರೆ, ಅನಿಯಮಿತ ಕರೆಗಳ ಯೋಜನೆಯು ಶೇ 20 ರಷ್ಟು ಹೆಚ್ಚಾಗಿದೆ. ಬೇಸ್ ಪ್ರಿಪೇಯ್ಡ್ ಏರ್ಟೆಲ್ ಯೋಜನೆಯು 99 ರೂಪಾಯಿಗಳಿಂದ ಪ್ರಾರಂಭವಾಗಲಿದ್ದು, 28 ದಿನಗಳ ವ್ಯಾಲಿಡಿಟಿ ಹೊಂದಿದೆ.

ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿರುವ ಕಂಪೆನಿ, ಭಾರತದಲ್ಲಿ 5ಜಿ ಅನ್ನು ಹೊರತರಲು ಏರ್ಟೆಲ್ ಬಲ ನೀಡುತ್ತದೆ. ಆದ್ದರಿಂದ ದರ ಪರಿಷ್ಕರಣೆ ಮಾಡಲಾಗಿದೆ ಎಂದು ತಿಳಿಸಿದೆ. 56 ದಿನಗಳು ಮತ್ತು 84 ದಿನಗಳ ವ್ಯಾಲಿಡಿಟಿಯ ಯೋಜನೆಗಳಿಗೆ ಕನಿಷ್ಠ 479 ಮತ್ತು 455 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
ಇಂಜಿನಿಯರಿಂಗ್ ಪದವೀಧರ ಪುತ್ತೂರಿನ ಯುವಕನಿಂದ ಗೋ ತ್ಯಾಜದಿಂದ ಸಾವಯವ ರಸಗೊಬ್ಬರ ತಯಾರಿಕೆ – ರಾಜ್ಯದಲ್ಲೇ ಮೊದಲ ಪ್ರಯತ್ನಕ್ಕೆ ಭರ್ಜರಿ ಬೇಡಿಕೆ–