ಪುತ್ತೂರು, ನ 21 : ವ್ಯಕ್ತಿಯೋರ್ವ ಮಹಿಳೆಯ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ವೀರಮಂಗಲದಲ್ಲಿ ಇಂದು ನಡೆದಿದೆ. ಅದೃಷ್ಟವಶಾತ್ ಗುರಿ ತಪ್ಪಿ ಮಹಿಳೆಯು ಪಾರಾಗಿದ್ದಾರೆ.
ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ವೀರಮಂಗಲದ ದೇವಪ್ಪ ಹಾಗೂ ಧರ್ಣಮ್ಮ ಎಂಬವರ ಮಧ್ಯೆ ಮಾತಿಗೆ ಮಾತು ಬೆಳೆದಿತ್ತು. ಮತ್ತಷ್ಟು ಕುಪಿತಗೊಂಡ ದೇವಪ್ಪ ತನ್ನ ಬಳಿ ಇದ್ದ ನಾಡಕೋವಿಯನ್ನು ತಂದು ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಗುರಿ ತಪ್ಪಿ ಮಹಿಳೆಯು ಸ್ವಲ್ಪದರಲ್ಲೇ ಪಾರಾಗಿದ್ದಾರೆ.
ಇದೀಗ ಪುತ್ತೂರಿನ ಡಿವೈಎಸ್‌ಪಿ ಗಾನ ನೇತೃತ್ವದ ತಂಡವು ಘಟನಾ ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸುತ್ತಿದ್ದಾರೆ.
ಯುವ ಜನತೆ ನೋಡಲೇಬೇಕಾದ ವೀಡಿಯೋ: ಯುವ ಜನರಲ್ಲೇ ಹೆಚ್ಚುತ್ತಿರುವ ಹೃದಯಾಘಾತಕ್ಕೆ ಕಾರಣಗಳೇನು? ಲಕ್ಷಣಗಳು ಕಂಡುಬಂದಾಗ ಕೈಗೊಳ್ಳಬೇಕಾದ ಮುಂಜಾಗರೂಕತೆಗಳು: ಪುತ್ತೂರಿನ ಖ್ಯಾತ ವೈದ್ಯ ಡಾ.ಸುರೇಶ್ ಪುತ್ತೂರಾಯ