ಚೆನ್ನೈ: ಭಾರತೀಯ ಸಿನಿಮಾ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ‘ಜೈ ಭೀಮ್’ ಸಿನಿಮಾದಿಂದ ನೂರಾರು ಜನ ಪ್ರೇರಣೆಗೊಂಡಿದ್ದಾರೆ.
ನಟ ಸೂರ್ಯ ಅಭಿನಯದ ‘ಜೈ ಭೀಮ್’ ಸಿನೆಮಾದಿಂದ ಪ್ರೇರೇಪಿತರಾಗಿರುವ ತಮಿಳುನಾಡಿನ ಕೆಲವು ಯುವಕರು ಕಾನೂನು ಪದವಿ ಪಡೆದು, ಬಡವರಿಗೆ ನ್ಯಾಯ ಒದಗಿಸಲು ಮುಂದಾಗಿದ್ದಾರೆ.
ಸಿನೆಮಾದಲ್ಲಿ ವಕೀಲರಾಗಿರುವ ಸೂರ್ಯ, ಹಿಂದುಳಿದ ಜನಾಂಗದವರಿಗೆ ನ್ಯಾಯ ಒದಗಿಸಿಕೊಡು ಇದನ್ನು ಕಂಡು ಅನೇಕರು ಸೂರ್ತಿ ಪಡೆದುಕೊಂಡಿದ್ದಾರೆ.
ಈ ಕುರಿತಂತೆ ಮಾತನಾಡಿದ ಚೆನ್ನೈಯ ವಾಣಿಜ್ಯ ವಿದ್ಯಾರ್ಥಿ ಶ್ರವಣ್, ತನಗೆ ವಕೀಲಿಕೆ ಮೇಲೆ ಮೊದಲಿನಿಂದಲೂ ಆಸಕ್ತಿಯಿತ್ತು.
ಈಗ ಜೈ ಭೀಮ್ ನೋಡಿದ ಮೇಲೆ ಮಾಡಿದರೆ ಇದೇ ಹುದ್ದೆ ಮಾಡಬೇಕೆಂದು ನಿರ್ಧಾರ ಮಾಡಿದ್ದಾಗಿ ಹೇಳಿದ್ದಾನೆ.
ಈ ಸಿನಿಮಾ ಅಮೆಝನ್ ಪ್ರೈಮ್ ನಲ್ಲಿ ಬಿಡುಗಡೆಗೊಂಡಿತು. ದೇಶದಲ್ಲೇ ನೂತನ ದಾಖಲೆ ಬರೆದಿದೆ. 10 ಕೋಟಿ ವೆಚ್ಚದಲ್ಲಿ ನಟ ಸೂರ್ಯ ನಿರ್ಮಿಸಿದ ಈ ಸಿನಿಮಾ 1993ರಲ್ಲಿ ನಡೆದ ನೈಜ ಘಟನೆಯನ್ನು ಆದರಿಸಿದೆ. ಈ ಸಿನಿಮಾ ಪಂಚ ಭಾಷೆಯಲ್ಲಿ ನಿರ್ಮಾಣವಾಗಿದೆ. ಈಗಾಗಲೇ ಈ ಸಿನಿಮಾ 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.