ಮಂಗಳೂರು, ನ. 21: ಕಾಟಿಪಳ್ಳ ಇನ್‌ಫೆಂಟ್ ಮೇರಿ ಚರ್ಚ್‌ನ ಧರ್ಮಗುರು ಫಾ. ವಲೇರಿಯನ್ ಲೂವಿಸ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇಂದು ಪ್ರಾರ್ಥನೆ ಸಂದರ್ಭದಲ್ಲಿ ಕುಸಿದು ಬಿದ್ದು ತೀವ್ರ ಅಸ್ವಸ್ಥಗೊಂಡಿದ್ದ ಫಾ. ವಲೇರಿಯನ್ ಲೂವಿಸ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಫಾ. ಲೂವಿಸ್ ಅವರು 1966ರಲ್ಲಿ ಪುತ್ತೂರಿನ ಆಂಟನಿ ಲೂಯಿಸ್ ಮತ್ತು ಕ್ಯಾಥರೀನ್ ಬ್ರಿಜಿಡ್ ಲೋಬೋ ಅವರ ಪುತ್ರರಾಗಿ ಜನಿಸಿದರು. ಪುತ್ತೂರಿನ ಫಿಲೋಮಿನಾ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದರು.
1995 ರಲ್ಲಿ ಮಂಗಳೂರು ಧರ್ಮಪ್ರಾಂತ್ಯದಿಂದ ಧರ್ಮಗುರುಗಳಾಗಿ ನೇಮಕಗೊಂಡರು. ಇವರು ವಾಮಂಜೂರು, ಬಾರ್ಕೂರು ಚರ್ಚ್ ಗಳಲ್ಲಿ ಸಹಾಯಕ ಧರ್ಮಗುರುಗಳಾಗಿ ಅವರು ಸೇವೆ ನೀಡಿದ್ದಾರೆ. ಮತ್ತು ಜೆಪ್ಪುವಿನಲ್ಲಿ ಸಹಾಯಕ ನಿರ್ದೇಶಕರಾಗಿದ್ದರು. ಅವರು ಕೊಕ್ಕಡ, ಸುಳ್ಯ ಮತ್ತು ಮಂಜೇಶ್ವರ ಚರ್ಚ್ ನಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದರು. 2019ರಿಂದ ಕಾಟಿಪಳ್ಳ ಚರ್ಚ್‌ನಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದರು.
ಯುವ ಜನತೆ ನೋಡಲೇಬೇಕಾದ ವೀಡಿಯೋ: ಯುವ ಜನರಲ್ಲೇ ಹೆಚ್ಚುತ್ತಿರುವ ಹೃದಯಾಘಾತಕ್ಕೆ ಕಾರಣಗಳೇನು? ಲಕ್ಷಣಗಳು ಕಂಡುಬಂದಾಗ ಕೈಗೊಳ್ಳಬೇಕಾದ ಮುಂಜಾಗರೂಕತೆಗಳು: ಪುತ್ತೂರಿನ ಖ್ಯಾತ ವೈದ್ಯ ಡಾ.ಸುರೇಶ್ ಪುತ್ತೂರಾಯ :
25 ವರ್ಷ ದಾಟಿದ ಯುವಕ/ಯುವತಿಯರು ತಮ್ಮ ಆರೋಗ್ಯಕ್ಕಾಗಿ ಅನುಸರಿಸಬೇಕಾದ ಅಗತ್ಯ ಕ್ರಮಗಳು ಹಾಗೂ ಹೃದಯಾಘಾತದ ಬಗ್ಗೆ ಪುತ್ತೂರಿನ ಖ್ಯಾತ ಹೃದ್ರೋಗ ತಜ್ಞ ಡಾ. ಶ್ರೀಪತಿ ರಾವ್ ರವರಿಂದ ಯುವಜನತೆಗೆ ಅತ್ಯುಪಯುಕ್ತ ಮಾಹಿತಿ :