ಪುತ್ತೂರು: ಭಾರತೀಯ ಗಡಿಭದ್ರತಾ ಪಡೆಯಲ್ಲಿ ತರಬೇತಿ ಪಡೆಯುತ್ತಿರುವ ರಮ್ಯ ಡಿ. ರವರನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು.
ವಿವೇಕಾನಂದ ಪದವಿ ಕಾಲೇಜಿನ ಎನ್.ಸಿ.ಸಿ ಘಟಕದ ಅಧಿಕಾರಿ ಅತುಲ್ ಶೆಣೈ ರವರು ರಮ್ಯ ಡಿ. ರವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಇವರು ತಮ್ಮ ಪಿಯುಸಿ ಶಿಕ್ಷಣವನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ 2014-2016ರಲ್ಲಿ ಪಡೆದು ಬಳಿಕ ಪದವಿ ಶಿಕ್ಷಣವನ್ನು ವಿವೇಕಾನಂದ ಪದವಿ ಕಾಲೇಜಿನಲ್ಲಿ ಪೂರೈಸಿದರು.
ಇಂಜಿನಿಯರಿಂಗ್ ಪದವೀಧರ ಪುತ್ತೂರಿನ ಯುವಕನಿಂದ ಗೋ ತ್ಯಾಜದಿಂದ ಸಾವಯವ ರಸಗೊಬ್ಬರ ತಯಾರಿಕೆ – ರಾಜ್ಯದಲ್ಲೇ ಮೊದಲ ಪ್ರಯತ್ನಕ್ಕೆ ಭರ್ಜರಿ ಬೇಡಿಕೆ
ಈಕೆ ಶಾಲಾ ದಿನಗಳಲ್ಲೆ ಎನ್.ಸಿ.ಸಿಯಲ್ಲಿ ಸಕ್ರೀಯರಾಗಿದ್ದರು. ಇವರು ಬಲ್ನಾಡು ಗ್ರಾಮದ ದೇವಸ್ಯ ಪರಜಾಲು ಪದ್ಮಯ್ಯ ಗೌಡ ಮತ್ತು ತೇಜವತಿಯವರ ಪುತ್ರಿ. ಪ್ರಸ್ತುತ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಟ್ರೈನಿಂಗ್ ಪಡೆಯುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಮಹೇಶ ನಿಟಿಲಾಪುರ, ಉಪನ್ಯಾಸಕ ಮುರಳಿ ಪಿ.ಜಿ, ಜಯಗೋವಿಂದ ಶರ್ಮ, ದೇವಿಚರಣ್, ಭೀಮ ಭಾರದ್ವಾಜ್, ಜ್ಯೋತಿ ಕುಮಾರಿ, ಮಾಧವೀ ಪಟೇಲ್, ಚೈತ್ರಾ ಮೊದಲಾದವರು ಉಪಸ್ಥಿತರಿದ್ದರು.
ಯುವ ಜನತೆ ನೋಡಲೇಬೇಕಾದ ವೀಡಿಯೋ: ಯುವ ಜನರಲ್ಲೇ ಹೆಚ್ಚುತ್ತಿರುವ ಹೃದಯಾಘಾತಕ್ಕೆ ಕಾರಣಗಳೇನು? ಲಕ್ಷಣಗಳು ಕಂಡುಬಂದಾಗ ಕೈಗೊಳ್ಳಬೇಕಾದ ಮುಂಜಾಗರೂಕತೆಗಳು: ಪುತ್ತೂರಿನ ಖ್ಯಾತ ವೈದ್ಯ ಡಾ.ಸುರೇಶ್ ಪುತ್ತೂರಾಯ