ಬೆಂಗಳೂರು: ಬೇರೆ ಪಕ್ಷಗಳ ಕುಟುಂಬ ರಾಜಕಾರಣಕ್ಕೆ ಸದಾ ಟೀಕೆ ಮಾಡುತ್ತಿರುವ , ಕುಟುಂಬ ರಾಜಕಾರಣಕ್ಕೆ ಮಣೆ ಹಾಕುವುದಿಲ್ಲ ಎಂದು ಹೇಳಿಕೊಂಡೇ ಬಂದಿದ್ದ ಬಿಜೆಪಿ ಶುಕ್ರವಾರ ರಾತ್ರಿ ಬಿಡುಗಡೆ ಮಾಡಿರುವ 20 ಕ್ಷೇತ್ರಗಳ ವಿಧಾನಪರಿಷತ್‌ನ ಚುನಾವಣಾ ಅಭ್ಯರ್ಥಿಗಳ ಪಟ್ಟಿಯಲ್ಲಿ ಶಾಸಕ ಜಗದೀಶ ಶೆಟ್ಟರ್ ಅವರ ತಮ್ಮ ಪ್ರದೀಪ್ ಶೆಟ್ಟರ್, ಅಪ್ಪಚ್ಚು ರಂಜನ್ ತಮ್ಮ ಸುಜಾ ಕುಶಾಲಪ್ಪ ಸೇರಿ ಕೆಲವರಿಗೆ ಟಿಕೆಟ್ ನೀಡಿದೆ.
25 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಲಾಗಿದೆ. ದ್ವಿಸದಸ್ಯ ಕ್ಷೇತ್ರಗಳ ಪೈಕಿ ಬೆಳಗಾವಿ, ಮೈಸೂರು, ವಿಜಯಪುರ, ದಕ್ಷಿಣಕನ್ನಡ, ಧಾರವಾಡ ಜಿಲ್ಲೆಗಳ ತಲಾ ಒಂದೊಂದು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಲಾಗಿದೆ.
ಇಂಜಿನಿಯರಿಂಗ್ ಪದವೀಧರ ಪುತ್ತೂರಿನ ಯುವಕನಿಂದ ಗೋ ತ್ಯಾಜದಿಂದ ಸಾವಯವ ರಸಗೊಬ್ಬರ ತಯಾರಿಕೆ – ರಾಜ್ಯದಲ್ಲೇ ಮೊದಲ ಪ್ರಯತ್ನಕ್ಕೆ ಭರ್ಜರಿ ಬೇಡಿಕೆ
https://youtube.com/c/NikharaNews
ಕೊಡಗಿನಲ್ಲಿ ಅಪ್ಪಚ್ಚು ರಂಜನ್ ಅವರ ತಮ್ಮ ಸುನೀಲ್ ಸುಬ್ರಮಣಿ ಸದ್ಯ ವಿಧಾನ ಪರಿಷತ್ತಿನ ಸದಸ್ಯರು. ಈ ಬಾರಿ ಅವರ ಬದಲು ಮತ್ತೊಬ್ಬ ತಮ್ಮ ಸುಜಾ ಕುಶಾಲಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ. ಬಿಜೆಪಿ ಮತ್ತೊಬ್ಬ ಪ್ರಮುಖ ನಾಯಕ, ಸಭಾಪತಿಯಾಗಿದ್ದ ಡಿ.ಎಚ್.ಶಂಕರಮೂರ್ತಿ ಅವರ ಪುತ್ರ ಹಾಗೂ ಆರ್ಯವೈಶ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆಗಿರುವ ಡಿ.ಎಸ್.ಅರುಣ್ ಅವರೂ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಬಿಜೆಪಿಯಲ್ಲಿ ಟಿಕೆಟ್ ಸಿಗುವ ನಿರೀಕ್ಷೆಯಿಂದ ಹಾಲಿ ಸದಸ್ಯರಾಗಿರುವ ಸಂದೇಶ್ ನಾಗರಾಜ್ ಜೆಡಿಎಸ್‌ನಿಂದ ಹೊರಗೆ ಕಾಲಿಟ್ಟಿದ್ದರು. ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲಿ ರಘು ಕೌಟಿಲ್ಯ ಅವರಿಗೆ ಟಿಕೆಟ್ ಸಿಕ್ಕಿದೆ. ಬಿಬಿಎಂಪಿ ಸದಸ್ಯರಾಗಿದ್ದ ಎನ್.ಲೋಕೇಶ್ ಅವರು ತುಮಕೂರು ಕ್ಷೇತ್ರಕ್ಕೆ ಸ್ಥಾನ ಪಡೆದಿದ್ದಾರೆ.
ಯುವ ಜನತೆ ನೋಡಲೇಬೇಕಾದ ವೀಡಿಯೋ: ಯುವ ಜನರಲ್ಲೇ ಹೆಚ್ಚುತ್ತಿರುವ ಹೃದಯಾಘಾತಕ್ಕೆ ಕಾರಣಗಳೇನು? ಲಕ್ಷಣಗಳು ಕಂಡುಬಂದಾಗ ಕೈಗೊಳ್ಳಬೇಕಾದ ಮುಂಜಾಗರೂಕತೆಗಳು: ಪುತ್ತೂರಿನ ಖ್ಯಾತ ವೈದ್ಯ ಡಾ.ಸುರೇಶ್ ಪುತ್ತೂರಾಯ
ಜೆಡಿಎಸ್‌ನಿಂದ ಸಕಲೇಶಪುರ ಕ್ಷೇತ್ರದ ಶಾಸಕರಾಗಿ, ಬಳಿಕ ಕಾಂಗ್ರೆಸ್ ಸೇರಿ ಅಲ್ಲಿ ನೆಲೆ ಕಾಣದೇ ಬಿಜೆಪಿ ಸೇರಿದ್ದ ಎಚ್.ಎಂ. ವಿಶ್ವನಾಥ್ ಅವರಿಗೆ ಹಾಸನದಿಂದ ಟಿಕೆಟ್ ಸಿಕ್ಕಿದೆ.
ನಿರೀಕ್ಷೆಯಂತೆ ಸಮಾಜಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರಿಗೆ ಟಿಕೆಟ್ ನೀಡಲಾಗಿದೆ.