ಭಟ್ಕಳ: ಕುಂದಾಪುರದ ಕಡೆಯಿಂದ ಹೊನ್ನಾವರ ಕಡೆಗೆ ಹೋಗುತ್ತಿದ್ದ ರಿಡ್ಜ್ ಕಾರೊಂದು ರಸ್ತೆಯಲ್ಲಿದ್ದ ದನವೊಂದನ್ನು ತಪ್ಪಿಸಲು ಹೋಗಿ ಕಾರು ಮಗುಚಿ ಬಿದ್ದು ಸಂಪೂರ್ಣ ಜಖಂ ಆಗಿ, ಅದರಲ್ಲಿದ್ದ ನಾಲ್ವರು ಪ್ರಯಾಣಿಕರು ಗಂಭೇರವಾಗಿ ಗಾಯಗೊಂಡ ಅವಘಡ ಶನಿವಾರ ನಡೆದಿದೆ.
ಕಾರು ಎದುರಿಗೆ ನಿಂತಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಬೊಲೆರೋ ಪಿಕ್‍ಅಪ್ ವಾಹನಕ್ಕೆ ಡಿಕ್ಕಿಯಾಗಿ ಜಖಂ ಗೊಂಡಿದೆ.
ವೇಗವಾಗಿ ಬರುತ್ತಿದ್ದ ರಿಡ್ಜ್ ಕಾರು ರಸ್ತೆಯ ಪಕ್ಕದಲ್ಲಿಯೇ ಮುಗುಚಿ ಬಿದ್ದಿದೆ.
ಗಾಯಗೊಂಡವರನ್ನು ಕುಂದಾಪುರದ ಪ್ರಾತೇಶ ಮೊಗವೀರ (18), ರಾಮಚಂದ್ರ ಶೇಟ್ (17), ಭರತ ಜೋಗಿ (19), ನೂತನ ಮಡಿವಾಳ (18) ಎಂದು ಗುರುತಿಸಲಾಗಿದೆ.