ಕಾಸರಗೋಡು, ನ.20: ವಿದ್ಯಾರ್ಥಿಯೊಬ್ಬ ವಿಧ್ಯೆ ಕಲಿಸುವ ಗುರುವಿಗೇ ಕಿರುಕುಳ ನೀಡಿರುವ ಬಗ್ಗೆ ಕಾಸರಗೋಡು ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಸರಗೋಡು ಸರ್ಕಾರಿ ಕಾಲೇಜ್ ಪ್ರಾಂಶುಪಾಲೆ ಡಾ| ಎಂ. ರಮಾ ಅವರು ವಿದ್ಯಾರ್ಥಿ ಮಹಮ್ಮದ್ ಸಾಬಿರ್ ಸನದ್ ಎಂಬ ವಿದ್ಯಾರ್ಥಿಯಿಂದ ತನಗೆ ಮಾನಹಾನಿಯಾಗಿದ್ದಲ್ಲದೆ ಕರ್ತವ್ಯಕ್ಕೂ ಅಡ್ಡಿಯಾಗಿದೆಯೆಂದು ನೀಡಿದ ದೂರಿನ ಅನ್ವಯ ಕಾಸರಗೋಡು ಮಹಿಳಾ ಪೊಲೀಸರು ವಿದ್ಯಾರ್ಥಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಧ್ಯೆ ಕಲಿಯಲು ಬರುವ ವಿದ್ಯಾರ್ಥಿಯೇ ವಿಧ್ಯೆ ಕಲಿಸುವ ಗುರುವಿಗೆ ಅಪಮಾನಿಸುವ ಪ್ರಕರಣ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ದಿಗಿಲಿಗೆ ಕಾರಣವಾಗಿದೆ.