ಬೆಳ್ತಂಗಡಿ, ನ.20: ಸವಣಾಲು ಗ್ರಾಮದ ಮಲ್ಲರೊಡಿಯ ಶ್ರೀ ಆತ್ಮಾನಂದ ಅವಧೂತರು (ಕೇಶವ ಭಟ್) ಅಲ್ಪಕಾಲದ ಅಸೌಖ್ಯದಿಂದ ತಮ್ಮ ಪೂರ್ವಾಶ್ರಮದ ಮನೆಯಲ್ಲಿ ನವಂಬರ್ 17 ರಂದು ದೇಹಾಂತವಾದರು.

ಸಂಸಾರಿಯಾಗಿದ್ದು ವಿರಕ್ತ ಜೀವನದಲ್ಲಿ ಆಸಕ್ತರಾಗಿದ್ದ ಅವರು ಆ ಬಳಿಕ ಗೋಕರ್ಣದಲ್ಲಿ ಸನ್ಯಾಸ ದೀಕ್ಷೆ ಪಡೆದು ಗಾಣಗಾಪುರದ ದತ್ತಾತ್ರೇಯ ಪೀಠ, ವರದಪುರ ಶ್ರೀಧರ ಆಶ್ರಮ, ಬದರಿನಾಥ, ಕೇದಾರನಾಥ, ಕಾಶಿ ಮತ್ತು ಹಿಮಾಲಯದಲ್ಲಿ ಸಾಧನೆ ನಡೆಸಿದ್ದರು.
ಸನ್ಯಾಸ ಸಾಧನೆ ಸಂದರ್ಭ ವಯೋ ಸಹಜ ಅನಾರೋಗ್ಯಗಳು ಕಾಡಿದ ಹಿನ್ನೆಲೆಯಲ್ಲಿ ಪೂರ್ವಾಶ್ರಮದ ಮಕ್ಕಳ ಒತ್ತಾಯದಿಂದ ಮರಳಿ ತಮ್ಮ ಊರಿಗೆ ಬಂದಿದ್ದರು.

ಸವಣಾಲು ಕಾಳಿ ಬೆಟ್ಟ ಶ್ರೀ ದುರ್ಗಾ ಕಾಳಿಕಾಂಬ ದೇವಸ್ಥಾನದ ಸಂಸ್ಥಾಪಕರಾಗಿ, ಚಂದ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅಭಿವೃದ್ಧಿಯಲ್ಲಿ ಸಕ್ರಿಯರಾಗಿದ್ದರು.
ಇವರು ಎಲ್ಲಾ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಗೋಕರ್ಣದ ವೇದ ವಿದ್ವಾಂಸರು ಆಗಮಿಸಿ ಸಕಲ ಧಾರ್ಮಿಕ ವಿಧಿಗಳೊಂದಿಗೆ ಅವಧೂತರ ಸಮಾಧಿ ಸ್ಥಾಪಿಸಲಾಯಿತು. ಮಲ್ಲರೋಡಿ ಮನೆಯವರು, ಆಪ್ತವರ್ಗ ಕಾರ್ಯದಲ್ಲಿ ಭಾವಿಗವಹಿಸಿದ್ದರು.