
ಸುಬ್ರಹ್ಮಣ್ಯ: ಡಿ.1ರಂದು ಬುಧವಾರದಿಂದ ಕೊಪ್ಪರಿಗೆ ಏರುವುದರ ಮೂಲಕ ಕುಕ್ಕೆ ಸುಬ್ರಹ್ಮಣ್ಯ ಜಾತ್ರೆ ಆರಂಭವಾಗಲಿದೆ.
ಡಿ.3 – ಲಕ್ಷದೀಪೋತ್ಸವ
ಡಿ.7 – ಚೌತಿ ಹೂವಿನ ತೇರಿನ ಉತ್ಸವ
ಡಿ.8 – ಪಂಚಮಿ ರಥೋತ್ಸವ
ಡಿ. 9 – ಬೆಳಗ್ಗೆ ಚಂಪಾಷಷ್ಠಿ ಬ್ರಹ್ಮ ರಥೋತ್ಸವ
ಡಿ.10 – ಅವಭ್ರಥೋತ್ಸವ ಮತ್ತು ನೌಕವಿಹಾರ
ಡಿ.15 ರಂದು ಕೊಪ್ಪರಿಗೆ ಇಳಿಯುವುದರ ಮೂಲಕ ಜಾತ್ರೆ ಸಮಾಪನಗೊಳ್ಳಲಿದೆ. ಈ ದಿನ ರಾತ್ರಿ ನೀರಿನಲ್ಲಿ ಬಂಡಿ ಉತ್ಸವ ನೆರವೇರಲಿದೆ. ಅಲ್ಲದೆ, ಪುರುಷರಾಯ, ಹೊಸಳಿಗಮ್ಮ ಹಾಗೂ ಪರಿವಾರ ದೈವಗಳ ನಡಾವಳಿ ನಡೆಯಲಿವೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ರಥ ಮುಹೂರ್ತಕ್ಕೆ ಚಾಲನೆ :
ಮಾರ್ಗಶಿರ ಶುದ್ಧ ಪೌರ್ಣಮಿಯಂದು ಸಹಸ್ರ ನಾಮಾರ್ಚನೆ ಬಳಿಕ ದೇಗುಲದ ಪ್ರಧಾನ ಅರ್ಚಕರು ಶುಭಮುಹೂರ್ತದಲ್ಲಿ ಬ್ರಹ್ಮರಥ ನಿರ್ಮಾಣಕ್ಕೆ ಚಾಲನೆ ನೀಡುತ್ತಾರೆ.

ರಥ ಮುಹೂರ್ತದ ಬಳಿಕ ಮಲೆಕುಡಿಯ ಜನಾಂಗದವರು ವೀಳ್ಯ ಸ್ವೀಕರಿಸಿ ಕಾಡಿಗೆ ತೆರಳುತ್ತಾರೆ. ರಥ ನಿರ್ಮಾಣಕ್ಕೆ ಬೇಕಿರುವ ಬೆತ್ತ ಸಂಗ್ರಹಿಸಿ, ಬ್ರಹ್ಮರಥವನ್ನು ಕಟ್ಟಲು ಆರಂಭಿಸುತ್ತಾರೆ. ಸುಮಾರು ನಾಲ್ಕು ದಿನಗಳ ಕಾಲ ಕಾಡಿನಲ್ಲಿಯೇ ಇದ್ದು ಬೆತ್ತಗಳನ್ನು ಹುಡುಕಿಕೊಂಡು ಮಳೆ, ಬಿಸಿಲು ಚಳಿ ಎನ್ನದೆ ಸುಮಾರು ಹದಿನೈದು ಇಪ್ಪತ್ತು ಜನರ ತಂಡ ಈ ಬೆತ್ತಗಳನ್ನು ಸಂಗ್ರಹಿಸಿ ಕುಕ್ಕೆಗೆ ತಂದು ನಂತರ ರಥವನ್ನು ಕಟ್ಟಿ ತಮ್ಮ ಕೈ ಚಳಕದಲ್ಲಿ ವಿಶೇಷವಾಗಿ ರಥವನ್ನು ತಯಾರಿಸುತ್ತಾರೆ.