ಪುತ್ತೂರು : ಪೊಕ್ಸೋ ಪ್ರಕರಣದ ಬಂಧಿತ ಆರೋಪಿ ಕಟ್ಟ ನಾರಾಯಣ ರೈಯವರಿಗೆ ಜಾಮೀನು

narayana-rai
Ad Widget

Ad Widget

Ad Widget

ಪುತ್ತೂರು: ನ 20 : ದಲಿತ  ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆಕೆ ಮಗುವಿಗೆ ಜನ್ಮ ನೀಡಲು ಕಾರಣವಾದ ಆರೋಪದಲ್ಲಿ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿ ನ್ಯಾಯಾಂಗ ಬಂಧನದಲ್ಲಿದ್ದ ಇಬ್ಬರು ಆರೋಪಿಗಳಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವೂ ನ.20 ರಂದು ಶರತುಬದ್ಧ ಜಾಮೀನು ಮಂಜೂರು ಮಾಡಿದೆ.

Ad Widget

ಪುತ್ತೂರು ತಾಲೂಕಿನ ಬಡಗನ್ನೂರು 17 ರ ಹರೆಯದ ಬಾಲಕಿ ಸಂತ್ರಸ್ತೆ. ಪುತ್ತೂರು ತಾಲೂಕು ಪಡವನ್ನೂರು ಗ್ರಾಮದ ಕಟ್ಟಾ  ನಿವಾಸಿ ನಾರಾಯಣ ರೈ ಹಾಗೂ ಸ್ಥಳೀಯ ನಿವಾಸಿ ಸತೀಶ್‌ ಪ್ರಕರಣದಡಿ ಬಂಧಿತರಾಗಿದ್ದ ಆರೋಪಿಗಳು . ಇದೀಗ ಇವರಿಬ್ಬರಿಗೂ ಜಾಮೀನು ಮಂಜೂರು ಆಗಿದೆ

Ad Widget

Ad Widget

Ad Widget

ಸಂತ್ರಸ್ತೆಯೂ ಸೆ. 5 ರಂದು ಮಗುವಿಗೆ ಜನ್ಮ ನೀಡಿದ್ದೂ ನಂತರ ಪ್ರಕರಣ ಬೆಳಕಿಗೆ ಬಂದಿತ್ತು. ಈ ಬಗ್ಗೆ ಅದೇ ದಿನ ಸಂತ್ರಸ್ತೆಯ ದೂರು ನೀಡಿದ ಬಳಿಕ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಯಿತು. ತನಿಖೆ ನಡೆಸಿದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ಈ ಪೈಕಿ ಸತೀಶ್‌ ಎಂಬಾತನನ್ನು ಬಂಧಿಸಿದ್ದರು. ಮತ್ತೂರ್ವನನ್ನು ಪ್ರಕರಣಕ್ಕೂ ಆತನಿಗೆ ಸಂಬಂಧವಿಲ್ಲ ಎನ್ನುವ ನೆಲೆಯಲ್ಲಿ ಪೊಲೀಸರು ಬಿಟ್ಟು ಕಳುಹಿಸಿದ್ದರು ಎನ್ನಲಾಗಿದೆ. ಮೂಲಗಳ ಪ್ರಕಾರ, ಸಂತ್ರಸ್ತೆಯೂ ಮೊದಲಿಗೆ ಪೊಲೀಸರು ವಿಚಾರಣೆ ನಡೆಸಿ ಬಿಡುಗಡೆಗೊಳಿಸಿದ ಯುವಕನ ಹೆಸರನ್ನು ಹೇಳಿದ್ದರು. ಅದಾದ ಒಂದು ದಿನದ ಬಳಿಕ ಆರೋಪಿ ಸತೀಶ್‌ ಹೆಸರು ಮುನ್ನಲೆಗೆ ಬಂದಿತ್ತು ಎನ್ನಲಾಗುತ್ತಿದೆ.

Ad Widget

ಅದಾಗಿ 15 ದಿನಗಳ ಬಳಿಕ ಸಂತ್ರಸ್ತೆಯೂ ತಾನು ಕೆಲಸಕ್ಕೆ ಹೋಗುತ್ತಿದ್ದ ತೋಟದ ಮಾಲಕ ಕಟ್ಟ ನಾರಾಯಣ ರೈ ಹೆಸರನ್ನು  ನ್ಯಾಯಾಧೀಶರ ಎದುರು ನೀಡಿದ್ದ ಹೇಳಿಕೆಯಲ್ಲಿ ಉಲ್ಲೇಖಿಸಿದ್ದರು. ಇದರ ಮಾಹಿತಿ ಪಡೆದ ನಾರಾಯಣ ರೈ ವರು ನಿರೀಕ್ಷಣಾ ಜಾಮೀನು ಕೋರಿ  ಅರ್ಜಿ ಸಲ್ಲಿಸಿದ್ದು ಇದನ್ನು  ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿತ್ತು

Ad Widget

Ad Widget

 ಈ ಹಂತದಲ್ಲಿ  ಪ್ರಕರಣದ ನೈಜ ಆರೋಪಿಯಾಗಿರುವ ನಾರಾಯಣ ರೈಯವರನ್ನು ಬಂಧಿಸಬೇಕು ಎಂಬ ಕೂಗು ದಲಿತ ಸಂಘಟನೆಗಳ ಮುಖಂಡರು ಎಬ್ಬಿಸಿದ್ದು, ಅವರ ಬಂಧನವಾಗದಿದ್ದಾಗ ನ್ಯಾಯಕ್ಕೆ ಅಗ್ರಹಿಸಿ ಸಂಘಟನೆಗಳು ಸಂಪ್ಯ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದರು.  

ಇದಾದ  ಎರಡು – ಮೂರು ದಿನಗಳ ಬಳಿಕ, ಹಾಗೂ ಪ್ರಕರಣ ದಾಖಲಾದ ಸುಮಾರು ಒಂದೂವರೆ ತಿಂಗಳ ನಂತರ ನಾಟಕೀಯ ಬೆಳವಣಿಗೆಯೊಂದರಲ್ಲಿ  ಆರೋಪಿ ನಾರಾಯಣ ರೈ ಅವರು ನ್ಯಾಯಾಲಯಕ್ಕೆ ಶರಣಾಗಿ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೇ ಆ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯವೂ ಆರೋಪಿಯನ್ನು ಎರಡು ದಿನಗಳ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿತ್ತು. ಅದೇ ದಿನ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಹಿನ್ನೆಲೆಯಲ್ಲಿ  ಪೊಲೀಸ್ ಕಸ್ಟಡಿ ಅವಧಿಯಲ್ಲಿಯೇ ನಾರಾಯಣ ರೈ ಯವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಬಳಿಕ ನ್ಯಾಯಾಲಯವೂ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.

ನಾರಾಯಣ ರೈ

 ಈ ಹಂತದಲ್ಲಿ ಮತ್ತೆ ಅವರು  ಜಾಮೀನು  ಕೋರಿ  ಅರ್ಜಿ ಸಲ್ಲಿಸಿದ್ದು .ಅದನ್ನು ಮತ್ತೆ  ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು.

 ಇತ್ತೀಚೆಗೆ ತನಿಖೆ ಪೂರ್ಣಗೊಳಿಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷರೋಪಣ ಪಟ್ಟಿ ಸಲ್ಲಿಸಿದರು . ಈ ಹಂತದಲ್ಲಿ ಮತ್ತೆ ತಮ್ಮ ವಕೀಲರ ಮೂಲಕ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು ಇದನ್ನು ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನ .19 ರಂದು ಪುರಸ್ಕರಿಸಿ ಜಾಮೀನು ಮಂಜೂರು ಮಾಡಿದೆ.  ಇದೇ ಸಂದರ್ಭದಲ್ಲಿ ಇನ್ನೋರ್ವ ಬಂಧಿತ ಅರೋಪಿ ಸತೀಶ್‌ ರವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಿದೆ.

  ನಾರಾಯಣ ರೈ  ಪರ ವಾದಿಸಿದ ವಕೀಲರಾದ  ಮಹೇಶ್ ಕಜೆ ಅವರು, ‘ ತನಿಖೆಯನ್ನು ಪೂರ್ಣಗೊಂಡು ನ್ಯಾಯಾಲಯಕ್ಕೆ    ದೋಷಾರೋಪಣಾ ಪಟ್ಟಿ ಸಲ್ಲಿಕೆಯಾಗಿದೆ.  ಆರೋಪಿ ನಾರಾಯಣ ರೈ ಅವರಿಗೆ 73 ವರ್ಷವಾಗಿದ್ದು ಅವರ  ಮೇಲೆ ಹೊರಿಸಲಾಗಿರುವ ಅತ್ಯಾಚಾರದ ಆರೋಪವನ್ನು ಸಾಬೀತುಪಡಿಸುವಂತಹ ಸಾಮರ್ಥ್ಯ ಮೇಲ್ನೋಟಕ್ಕೆ ಅವರಲ್ಲಿ ಕಂಡು ಬಾರದ ಹಿನ್ನಲೆಯಲ್ಲಿ ಸಂತ್ರಸ್ತೆಯೂ ನ್ಯಾಯಾದೀಶರ ಎದುರು ನೀಡಿದ ಹೇಳಿಕೆಯೂ ವಿರೋಧಭಾಸದಂತೆ ಕಾಣಿಸುತ್ತಿದೆ  ಎಂಬಿತ್ಯಾದಿ ವಾದವನ್ನು ನ್ಯಾಯಾಲಯದ ಮುಂದೆ ಮಂಡಿಸಿದ್ದಾರೆಂದು ವರದಿಯಾಗಿದೆ  

Leave a Reply

Recent Posts

ಮಹಿಳಾ ಪೊಲೀಸ್ ಪೇದೆಯನ್ನು ಹತ್ಯೆಗೈದು ನಾಪತ್ತೆಯಾಗಿದ್ದಳೆ ಎಂದು ಬಿಂಬಿಸಿದ್ದ ಸಹೋದ್ಯೋಗಿ ಎರಡು ವರ್ಷಗಳ ಬಳಿಕ ಅಂದರ್ ! ಚೈತ್ರಾ ಟಿಕೆಟ್‌ ಡೀಲ್ ನಂತೆ ನಕಲಿ ಪಾತ್ರ, ತಿರುಚಿದ ಆಡಿಯೋ, ನಕಲಿ ಕೊವೀಡ್‌ ಸರ್ಟಿಫಿಕೆಟ್‌ – ಅಬ್ಬಾಬ್ಬ ಕೊಲೆಯನ್ನು ಮುಚ್ಚಲು ಈ ಕ್ರಿಮಿನಲ್‌ ಮಾಡಿದ ಪ್ಲ್ಯಾನ್‌ ಒಂದಾ ಎರಡಾ ?

error: Content is protected !!
%d bloggers like this: