Connect with us

ಅಪರಾಧ

ಕೊಕ್ಕಡ : ಅಕ್ರಮ ಗೋ ಸಾಗಾಟ ತಡೆದ ಹಿಂದೂ ಜಾಗರಣ ವೇದಿಕೆ – ಓರ್ವ ಪೊಲೀಸರ ವಶಕ್ಕೆ

Ad Widget

Ad Widget

Ad Widget

Ad Widget Ad Widget

ಧರ್ಮಸ್ಥಳ : ನ 20:  ಅಕ್ರಮ ಗೋ ಸಾಗಾಟ ಪ್ರಕರಣವೊಂದನ್ನು ಪತ್ತೆ ಹಚ್ಚಿರುವ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಆ ವಾಹನ ಹಾಗೂ ದನಗಳನ್ನು ಧರ್ಮಸ್ಥಳ ಪೊಲೀಸರಿಗೆ ಒಪ್ಪಿಸಿದ ಘಟನೆ ನ. 20 ರಂದು ಮುಂಜಾನೆ ನಡೆದಿದೆ.  

Ad Widget

Ad Widget

Ad Widget

Ad Widget

Ad Widget

 ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ  ಬೆಳ್ತಂಗಡಿ ತಾಲೂಕಿನ ಪಾಂಡಿಬೆಟ್ಟುನಿಂದ ಕೊಕ್ಕಡ ಸಮೀಪದ ಮಲ್ಲಿಗೆ ಮಜಲ್ ಗೆ ವಾಹನವೊಂದರಲ್ಲಿ ಗೋಸಾಗಾಟ ನಡೆಯುತ್ತಿದ್ದ ವೇಳೆ ತಿಪ್ಪೆಮಜಲು ಎಂಬಲ್ಲಿ ಕೊಕ್ಕಡ ಹಿಂದೂ ಜಾಗರಣೆ ವೇದಿಕೆ    ಕಾರ್ಯಕರ್ತರು ಆ ವಾಹನವನ್ನು ತಡೆದು ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ.

Ad Widget

Ad Widget

 ಸ್ಥಳಕ್ಕೆ ಆಗಮಿಸಿದ ಪೊಲೀಸರು ದಾಖಲೆಗಳನ್ನು ಪರಿಶೀಲನೆ ನಡೆಸಿ, ಸೂಕ್ತ ದಾಖಲೆಗಳು ಕಂಡು ಬಾರದ ಹಿನ್ನಲೆಯಲ್ಲಿ   ವಾಹನ ಹಾಗೂ ಅದರಲ್ಲಿದ್ದ ಎರಡು ಗೋವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಈ ಬಗ್ಗೆ ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Ad Widget

Ad Widget

 ವಿಕೃತ ರೀತಿಯಲ್ಲಿ ಅಕ್ರಮ ಗೋಸಾಗಾಟ ಪ್ರಕರಣಗಳು ನಡೆಯುತ್ತಲೇ ಇದ್ದು, ಪೋಲಿಸರು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಆಗ್ರಹಿಸಿದ್ದಾರೆ.

Ad Widget

Ad Widget

.

Click to comment

Leave a Reply

ಅಪರಾಧ

Bantwal-ಬಂಟ್ವಾಳ : ಬಾಲಕಿಯೊಂದಿಗೆ ಅನುಚಿತ ವರ್ತನೆ – ಯುವಕನ ವಿರುದ್ಧ ಪ್ರಕರಣ ದಾಖಲು

Ad Widget

Ad Widget

Ad Widget

Ad Widget Ad Widget

ಬಂಟ್ವಾಳ: ಪೊಳಲಿಯಲ್ಲಿ ಬಾಲಕಿಯನ್ನು ಅಪ್ಪಿ ಹಿಡಿದು ಅನುಚಿತವಾಗಿ ವರ್ತಿಸಿದ ಘಟನೆಯು ಎ. 24ರಂದು ನಡೆದಿದ್ದು, ಆರೋಪಿಯ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget

Ad Widget

Ad Widget

Ad Widget

Ad Widget

ಬಡಕಬೈಲು ನಿವಾಸಿ ಅಮೀನ್ ಯಾನೆ ಮೊಹಮ್ಮದ್ ಅಮೀನ್ ಪ್ರಕರಣ ಆರೋಪಿಯಾಗಿದ್ದು, ಆತ ಬಾಲಕಿಯ ಹಿಂದಿನಿಂದ ಬಂದು ಜೋರಾಗಿ ಎದೆ ಭಾಗವನ್ನು ಅಪ್ಪಿ, ಕೈಯನ್ನು ಬಲವಾಗಿ ಹಿಡಿದು ತಿರುಗಿ ನೋಡಲು ಕೂಡ ಅವಕಾಶ ನೀಡದೆ ನಿನ್ನ ಮೊಬೈಲ್ ನಂಬರ್ ಕೊಡಬೇಕು, ಇಲ್ಲದಿದ್ದರೇ ನಿನ್ನನ್ನು ರೇಪ್ ಮಾಡದೇ ಬಿಡುವುದಿಲ್ಲ, ನೀನು ನನಗೆ ಬೇಕು ಎಂದು ಹೇಳಿದಾಗ ನೊಂದ ಬಾಲಕಿಯು ಬೊಬ್ಬೆ ಹಾಕಿದ್ದಾಳೆ.

Ad Widget

Ad Widget

ಈ ವೇಳೆ ಸಂಬಂಧಿಕನೋರ್ವ ಬರುವುದನ್ನು ನೋಡಿ ಆರೋಪಿಯು ಸ್ಕೂಟರ್‌ನಲ್ಲಿ ಪರಾರಿಯಾಗಿದ್ದಾನೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ತನಿಖೆ ನಡೆಸುತ್ತಿದ್ದಾರೆ.

Ad Widget

Ad Widget
Continue Reading

ಅಪರಾಧ

Online acquaintance-ಆನ್ ಲೈನ್ ಪರಿಚಿತ ಗೆಳೆಯ ಮಹಿಳೆಯ ಜೀವಾಂತ್ಯಗೊಳಿಸಿದ

Ad Widget

Ad Widget

Ad Widget

Ad Widget Ad Widget

ಬೆಂಗಳೂರು: ಕೊಡಿಗೇಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಎಂ. ಶೋಭಾ (48) ಕೊಲೆ ಪ್ರಕರಣದ ಆರೋಪಿ ನವೀನ್‌ ಗೌಡ (28) ಅವರನ್ನು ಪೊಲೀಸರು ಬಂಧಿಸಿದ್ದಾರೆ.

Ad Widget

Ad Widget

Ad Widget

Ad Widget

Ad Widget

ಆರೋಪಿ ನವೀನ್‌ ಗೌಡ, ನಗರದ ಸಾಫ್ಟ್‌ವೇರ್ ಕಂಪನಿಯೊಂದರ ಉದ್ಯೋಗಿ. ಕೊಡಿಗೇಹಳ್ಳಿ ಬಳಿಯ ಗಣೇಶ ನಗರದ ಶೋಭಾ ಅವರನ್ನು ಏ. 18ರಂದು ಕೊಲೆ ಮಾಡಿ ಪರಾರಿಯಾಗಿದ್ದ.

Ad Widget

Ad Widget

ಶೋಭಾ ಮಗಳು ನೀಡಿದ್ದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು. ಶೋಭಾ ಅವರು ವಾಹನ ಚಾಲನಾ ತರಬೇತಿ ಶಾಲೆ ನಡೆಸುತ್ತಿದ್ದರು. ಎರಡನೇ ಮಗಳ ಜೊತೆ ನೆಲೆಸಿದ್ದರು. ಅವರ ಪತಿ ಹಾಗೂ ಮೊದಲ ಮಗಳು ಪ್ರತ್ಯೇಕವಾಗಿ ವಾಸವಿದ್ದರು. ಏ. 18ರಂದು ಬೆಳಿಗ್ಗೆ ಎರಡನೇ ಮಗಳು ತಮ್ಮ ಪತಿ ಮನೆಗೆ ತೆರಳಿದ್ದರು. ಇದೇ ಸಂದರ್ಭದಲ್ಲಿ ಮನೆಗೆ ಬಂದಿದ್ದ ನವೀನ್ ಗೌಡ, ಶೋಭಾ ಅವರನ್ನು ಕತ್ತು ಹಿಸುಕಿ ಕೊಂದಿದ್ದನೆಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು.

Ad Widget

Ad Widget

ಸಾಮಾಜಿಕ ಮಾಧ್ಯಮದಿಂದ ಪರಿಚಯ: ‘ಶೋಭಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಖಾತೆ ಹೊಂದಿದ್ದರು. ಅದೇ ಖಾತೆಗೆ ಆರೋಪಿ ನವೀನ್‌ ರಿಕ್ವೆಸ್ಟ್ ಕಳುಹಿಸಿದ್ದ. ಅದನ್ನು ಶೋಭಾ ಸ್ವೀಕರಿಸಿದ್ದರು. ನಂತರ, ಇಬ್ಬರೂ ಪರಸ್ಪರ ಚಾಟಿಂಗ್ ಮಾಡಲಾರಂಭಿಸಿದ್ದರು ಎಂದು ಪೊಲೀಸರು ಹೇಳಿದರು.

Ad Widget

Ad Widget

ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡಿದ್ದ ಇಬ್ಬರೂ ಮಾತುಕತೆ ಆರಂಭಿಸಿದ್ದರು. ಇಬ್ಬರ ನಡುವೆ ಸಲುಗೆಯೂ ಬೆಳೆದಿತ್ತು ಎಂಬ ಮಾಹಿತಿ ಇದೆ. ಭೇಟಿಯಾಗುವುದಾಗಿ ಹೇಳಿದ್ದ ನವೀನ್, ಕೆಲ ದಿನಗಳ ಹಿಂದೆಯಷ್ಟೇ ಶೋಭಾ ಅವರ ಮನೆಗೆ ಬಂದು ಹೋಗಿದ್ದ. ಏ. 18ರಂದು ಎರಡನೇ ಬಾರಿ ಮನೆಗೆ ಬಂದಿದ್ದ ನವೀನ್‌ ಹಾಗೂ ಶೋಭಾ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ’ ಎಂದು ತಿಳಿಸಿದರು.

ಕೊಲೆ ನಂತರ ಆರೋಪಿ ನವೀನ್, ಶೋಭಾ ಅವರ ಕಾರಿನಲ್ಲಿಯೇ ಸ್ಥಳದಿಂದ ಪರಾರಿಯಾಗಿದ್ದ. ಸಲುಗೆ ಕಾರಣಕ್ಕೆ ಈ ಕೊಲೆ ನಡೆದಿರುವ ಮಾಹಿತಿ ಇದೆ’ ಎಂದು ಪೊಲೀಸರು ಹೇಳಿದರು.

Continue Reading

ಅಪರಾಧ

Everest fish curry-ಎವರೆಸ್ಟ್ ಫಿಶ್‌ಕರಿ ಮಸಾಲಾದಲ್ಲಿ ಎಥಿಲಿನ್ ಆಕ್ಸೆಡ್  ಪತ್ತೆ

Ad Widget

Ad Widget

Ad Widget

Ad Widget Ad Widget

ಸಿಂಗಾಪುರ: ಭಾರತದ ಜನಪ್ರಿಯ ಉತ್ಪನ್ನ `ಎವರೆಸ್ಟ್ ಫಿಶ್‌ಕರಿ ಮಸಾಲಾ’ದಲ್ಲಿ ಅನುಮತಿಸಿರುವುದಕ್ಕಿಂತ ಅಧಿಕ ಮಟ್ಟದ ಎಥಿಲಿನ್ ಆಕ್ಸೆಡ್ ರಾಸಾಯನಿಕವಿದೆ ಎಂಬ ಕಾರಣಕ್ಕೆ ಈ ಮಸಾಲಾ ಉತ್ಪನ್ನವನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ ಸಿಂಗಾಪುರ ಆದೇಶಿಸಿದೆ.

Ad Widget

Ad Widget

Ad Widget

Ad Widget

Ad Widget

ಎಥಿಲೀನ್ ಆಕ್ಸೆಡ್ ಅನ್ನು ಆಹಾರದಲ್ಲಿ ಬಳಸಲು ಅನುಮತಿಸಲಾಗಿಲ್ಲ ಮತ್ತು ಬ್ಯಾಕ್ಟಿರಿಯಾಗಳ ಮಾಲಿನ್ಯವನ್ನು ತಡೆಗಟ್ಟಲು ಕೃಷಿ ಉತ್ಪನ್ನಗಳ ಧೂಮೀಕರಣ(ಕೀಟನಿಯಂತ್ರಣದ ಒಂದು ವಿಧಾನ)ಕ್ಕೆ ಮಾತ್ರ ಬಳಸಲಾಗುತ್ತದೆ ಎಂದು ಸಿಂಗಾಪುರ ಫುಡ್ ಏಜೆನ್ಸಿಯ ಹೇಳಿಕೆ ತಿಳಿಸಿದ್ದು ಎವರೆಸ್ಟ್ ಫಿಶ್‌ಕರಿ ಮಸಾಲಾವನ್ನು ಆಮದು ಮಾಡಿಕೊಳ್ಳುವ ಎಸ್‌ಪಿ ಮುತ್ತಯ್ಯ ಆ್ಯಂಡ್ ಸನ್ಸ್‌ ಪ್ರೈ.ಲಿ. ಸಂಸ್ಥೆಗೆ ಸಿಂಗಾಪುರ ಮಾರುಕಟ್ಟೆಯಿಂದ ಉತ್ಪನ್ನವನ್ನು ತಕ್ಷಣ ವಾಪಾಸು ಪಡೆಯುವಂತೆ ಸೂಚಿಸಿದೆ.

Ad Widget

Ad Widget
Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading