
ಉಪ್ಪಿನಂಗಡಿ: ಕಾಲೇಜ್ ಒಂದರ ಬೇರೆ ಬೇರೆ ಕೋಮಿಗೆ ಸೇರಿದ ವಿದ್ಯಾರ್ಥಿಗಳ ಎರಡು ತಂಡಗಳು ಕಾಲೇಜ್ ಅವರಣದಲ್ಲಿ ಪರಸ್ಪರ ಹೊಡೆದಾಡಿಕೊಂಡ ಘಟನೆ ನ .18 ರ ಸಂಜೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಬಳಿಕ ಇತ್ತಂಡಗಳ ಒಟ್ಟು ಐದು ಮಂದಿ ವಿದ್ಯಾರ್ಥಿಗಳು ಪುತ್ತೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಕಾಲೇಜಿನ ವಿದ್ಯಾರ್ಥಿನಿಯೊಬ್ಬಳ ವಿಚಾರವಾಗಿ ಈ ಹೊಡೆದಾಟ ನಡೆದಿದೆ ಎಂದು ಹೇಳಲಾಗುತ್ತಿದ್ದು, ಈ ಬಗೆಗಿನ ನಿಖರ ಮಾಹಿತಿ ತಿಳಿದು ಬಂದಿಲ್ಲ. ಹೊಡೆದಾಟದ ನಡೆದ ಬಗ್ಗೆ ಕಾಲೇಜಿನ ವತಿಯಿಂದಾಗಲಿ, ಇತ್ತಂಡಗಳ ವಿದ್ಯಾರ್ಥಿಗಳ ಕಡೆಯಿಂದಾಗಲಿ ದೂರು ಬಂದಿಲ್ಲ ಎಂದು ಹೇಳಲಾಗುತ್ತಿದ್ದೂ ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಒಂದು ಮೂಲದ ಪ್ರಕಾರ ವಿದ್ಯಾರ್ಥಿಯೊಬ್ಬ ಭಿನ್ನ ಕೋಮಿನ ವಿದ್ಯಾರ್ಥಿನಿಯ ಬಳಿ ಆಕೆಯ ಪೋನ್ ನಂಬರ್ ಕೇಳಿದ್ದಾನೆ ಎನ್ನಲಾಗಿದೆ. ಈ ಮಾಹಿತಿ ಪಡೆದ ವಿದ್ಯಾರ್ಥಿನಿಯ ಕೋಮಿಗೆ ಸೇರಿದ ಕೆಲ ವಿದ್ಯಾರ್ಥಿಗಳು ಪೋನ್ ನಂಬರ್ ಕೇಳಿದಾತನ ಬಳಿ ವಿಚಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವೇಳೆ ಪೋನ್ ನಂಬರ್ ಕೇಳಿದ ವಿದ್ಯಾರ್ಥಿಯ ಪರವಾಗಿ ಆತನ ಕೋಮಿನ ಕೆಲ ವಿದ್ಯಾರ್ಥಿಗಳು ಬೆಂಬಲಕ್ಕೆ ನಿಂತಿದ್ದು, ಈ ವೇಳೆ ವಾಗ್ವಾದ ನಡೆದು ಪರಸ್ಪರ ಹೊಡೆದಾಟ ನಡೆದಿದೆ.

ಇನ್ನೊಂದು ಮೂಲಗಳ ಪ್ರಕಾರ, ಕಾಲೇಜಿನ ಒಂದು ತರಗತಿ ಕೆಲ ವಿದ್ಯಾರ್ಥಿಗಳು ಹಾಗೂ ಕೆಲ ವಿದ್ಯಾರ್ಥಿನಿಯರು ಜತೆಯಾಗಿ ನಿಂತು ಸೆಲ್ಪಿ ತೆಗೆದುಕೊಂಡಿದ್ದಾರೆ. ಇವರ ಪೈಕಿ ಅನ್ಯ ಧರ್ಮೀಯನಾಗಿದ್ದು , ಉಳಿದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಒಂದೇ ಧರ್ಮಕ್ಕೆ ಸೇರಿದವರಾಗಿದ್ದರು ಎಂದು ಹೇಳಲಾಗುತ್ತಿದೆ.
ಇದರ ಬಗ್ಗೆ ಮಾಹಿತಿ ಪಡೆದ ಕೆಲ ವಿದ್ಯಾರ್ಥಿಗಳು, ಪೋಟೋಗೆ ನಿಂತ ಅನ್ಯ ಕೋಮಿನ ವಿದ್ಯಾರ್ಥಿ ಜತೆ ಪೋಟೊ ಗೆ ನಿಂತ ವಿಚಾರವಾಗಿ ತಗಾದೆ ತೆಗೆದಿದ್ದಾರೆ ಎನ್ನಲಾಗಿದೆ. ಈ ವೇಳೆ ಪೋಟೋಗೆ ನಿಂತ ಅನ್ಯ ಕೋಮಿನ ವಿದ್ಯಾರ್ಥಿ ಆತನ ಕೋಮಿನ ಕೆಲ ವಿದ್ಯಾರ್ಥಿಗಳು ಧಾವಿಸಿದ್ದಾರೆ.ಈ ವೇಳೆ ಎರಡು ತಂಡದ ನಡುವೆ ಹೋಯ್ ಕೈ ಆಗಿದ್ದು ಬಳಿಕ ಎರಡು ತಂಡಗಳು ಕಾಲೇಜ್ ಅವರಣದಲ್ಲಿ ಪರಸ್ಪರ ಬಡಿದಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಬಡಿದಾಟದಲ್ಲಿ ತೊಡಗಿಸಿಕೊಂಡಿದ್ದ ಒಂದು ತಂಡದ ಮೂವರು ವಿದ್ಯಾರ್ಥಿಗಳು ಮತ್ತು ಇನ್ನೊಂದು ತಂಡದ ಇಬ್ಬರು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.