
ಮಂಗಳೂರು ನವೆಂಬರ್ 19: 2016ರಲ್ಲಿ ಬ್ಯಾನ್ ಆದ 1000 ಹಾಗೂ 500 ಮುಖಬೆಲೆಯ ಕೋಟ್ಯಾಂತರ ರೂಪಾಯಿ ಹಣ ಮಂಗಳೂರಿನಲ್ಲಿ ಪತ್ತೆಯಾಗಿದೆ.
ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಅಮಾನ್ಯಗೊಂಡಿದ್ದ 1 ಸಾವಿರ ಹಾಗೂ 500 ಮುಖ ಬೆಲೆಯ ಸುಮಾರು 1.92 ಕೋಟಿ ಮೌಲ್ಯದ ನೋಟುಗಳು ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕಣ್ಣೂರು ಬೋರುಗುಡ್ಡೆ ನಿವಾಸಿ ಜುಬೈರ್ ಹಮ್ಮಬ್ಬ ಹಾಗು ದೀಪಕ್ ಕುಮಾರ್, ಬಜಪೆಯ ನಾಸೀರ್ ಎಂದು ಗುರುತಿಸಲಾಗಿದ್ದು. ಒಂದು ಸಾವಿರ ಮುಖ ಬೆಲೆಯ 50 ಲಕ್ಷ ರೂ.ಹಾಗು 500 ಮುಖ ಬೆಲೆಯ 1 ಕೋಟಿ ರೂ. ಪತ್ತೆಯಾಗಿದೆ.
ಆರೋಪಿಗಳು ಬ್ಯಾಂಕ್ ಗಳಲ್ಲಿ ಶೇಕಡ 50 ರಷ್ಟು ಹಣ ಮರಳಿ ಸಿಗುತ್ತದೆ ಎಂದು ಹೇಳಿ ಶಿವಮೊಗ್ಗ, ಚಿತ್ರದುರ್ಗ ಕಡೆಯಿಂದ ತಂದಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಹೇಳಿದ್ದಾರೆ.