ಭಾರತ ಜಿಹಾದಿ ರಾಷ್ಟ್ರ- ಕೇಂದ್ರ ಸರ್ಕಾರದ ವಿರುದ್ಧವೇ ಧ್ವನಿಯೆತ್ತಿದ ವಿವಾದಾತ್ಮಕ ನಟಿ ಕಂಗನಾ

WhatsApp-Image-2021-11-13-at-19.57.08-1
Ad Widget

Ad Widget

Ad Widget

ಬೆಂಗಳೂರು: ಇತ್ತೀಚಿಗಷ್ಟೇ ಸ್ವಾತಂತ್ರ್ಯದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ತೀವ್ರ ಟೀಕೆಗೆ ಗುರಿಯಾಗಿದ್ದ ಬಾಲಿವುಡ್ ನಟಿ ಕಂಗನಾ ರನೌತ್ ಅವರು ಈಗ ಕೇಂದ್ರ ಸರ್ಕಾರ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Ad Widget

ಪ್ರಧಾನಿ ಮೋದಿ ಅವರು ಕೃಷಿ ಕಾಯ್ದೆಗಳನ್ನು ಹಿಂಪಡೆದ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿರುವ ಕಂಗನಾ, ‘ಇದು ದುಃಖದ ಸಂಗತಿ, ನಾಚಿಕೆಗೇಡಿನದ್ದು, ಸಂಪೂರ್ಣ ಅನ್ಯಾಯ. ಬೀದಿಗಿಳಿದ ಜನ ದೇಶದಲ್ಲಿ ಕಾನೂನುಗಳನ್ನು ರೂಪಿಸಲಾರಂಭಿಸಿದ್ದಾರೆಯೇ ಹೊರತು, ಸಂಸತ್ತಿನಲ್ಲಿರುವ ಜನರಿಂದ ಆಯ್ಕೆಯಾದ ಸರ್ಕಾರವಲ್ಲ. ಇದು ಸಹ ಜಿಹಾದಿ ರಾಷ್ಟ್ರವಾಗಿದೆ. ಈ ರೀತಿ ಆಗಬೇಕೆಂದು ಬಯಸಿದ ಎಲ್ಲರಿಗೂ ಅಭಿನಂದನೆಗಳು,’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Ad Widget

Ad Widget

Ad Widget

ಎರಡನೇ ಪೋಸ್ಟ್‌ನಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಶುಭಾಶಯ ಕೋರುವ ನೆಪದಲ್ಲಿ ಅವರನ್ನು ಟೀಕಿಸಿರುವ ಕಂಗನಾ, ಕೇಂದ್ರದ ನಿರ್ಧಾರದ ವಿರುದ್ಧವೂ ಹರಿಹಾಯ್ದಿದ್ದಾರೆ. ‘ರಾಷ್ಟ್ರದ ಸಾಕ್ಷಿಪ್ರಜ್ಞೆ ಗಾಢವಾದ ನಿದ್ರೆಯಲ್ಲಿರುವಾಗ, ಬೆತ್ತವೊಂದೇ ಪರಿಹಾರ ಮತ್ತು ಸರ್ವಾಧಿಕಾರವೇ ಅಂತಿಮ. ಜನ್ಮದಿನದ ಶುಭಾಶಯಗಳು ಮಾಜಿ ಪ್ರಧಾನಿಗಳೇ’ ಎಂದು ಬರೆದಿದ್ದಾರೆ.

Ad Widget

Leave a Reply

Recent Posts

ದೇಶದಲ್ಲಿ ಹಿಂದೂಗಳ ಶಕ್ತಿ ಹೇಗಿರಬೇಕೆಂದರೆ ಸರ್ಕಾರ ಹಿಂದೂಗಳ ಹೇಳಿಕೆಯಂತೆ ನಡೆಯಬೇಕು..! : ದೇವಸ್ಥಾನಗಳನ್ನು ಸರಕಾರಿಕರಣಗೊಳಿಸಿದಂತೆ ಮಸೀದಿಗಳನ್ನು ಏಕೆ ಮಾಡುವುದಿಲ್ಲ..? ಮಂದಿರ ಸಂಸ್ಕೃತಿ ರಕ್ಷಣೆ ಸಭೆಯಲ್ಲಿ ಚರ್ಚೆ – ಮುಂಬೈಯ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿನ ಭ್ರಷ್ಟಾಚಾರ ಬೆಳಕಿಗೆ ತಂದಿರುವ ಸುಪ್ರಸಿದ್ಧ ಸರ್ಜನ್ ರ ಪುಸ್ತಕ ಬಿಡುಗಡೆ

error: Content is protected !!
%d bloggers like this: