Big Breaking : ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಗಿದ್ದ ವಿವಾದಿತ ಕೃಷಿ ಮಸೂದೆ ವಾಪಸ್: ಪ್ರಧಾನಿ ಮೋದಿ ಘೋಷಣೆ

Ad Widget

Ad Widget

Ad Widget

ನವದೆಹಲಿ : ನ 19 : ವಿವಾದಿತ ಹಾಗೂ ಬಾರೀ ಪ್ರತಿಭಟನೆಗೆ ಕಾರಣವಾಗಿದ್ದ ಮೂರು ಕೃಷಿ ಮಸೂದೆಯನ್ನು ಹಿಂತೆಗೆದುಕೊಳ್ಳುವುದಾಗಿ ಭಾರತ ಸರಕಾರವೂ  ಘೋಷಿಸಿದೆ . ಇಂದು (ನವೆಂಬರ್ 19) ಬೆಳಗ್ಗೆ 9 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ  ಮಾಡಿದ ಭಾಷಣದಲ್ಲಿ ಇದನ್ನು ಘೋಷಿಸಿದ್ದಾರೆ.ಗುರುನಾನಕ್ ಜಯಂತಿ ಹಿನ್ನೆಲೆಯಲ್ಲಿ ದೇಶವನ್ನು ಉದ್ದೇಶಿಸಿ  ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.

Ad Widget

ರೈತರ ಆರ್ಥಿಕ, ಸಾಮಾಜಿಕ ಸ್ಥಿತಿ ಸುಧಾರಿಸಲು ಪ್ರಯತ್ನ ಮಾಡಲಾಗುತ್ತಿದ್ದು, 3 ಕಾಯ್ದೆ ಜಾರಿಗೆ ತಂದಿದ್ದೆವು. ಸಣ್ಣ ರೈತರ ಒಳಿತಿಗಾಗಿಯೇ ಕೃಷಿ ಕಾಯ್ದೆ ಜಾರಿಗೆ ತಂದಿದ್ದೆವು. ಈ 3 ಕಾನೂನುಗಳು ಸಂಪೂರ್ಣವಾಗಿ ರೈತರ ಪರವಾಗಿದ್ದವು. ರೈತರ ಹಿತ ದೃಷ್ಟಿಯಲ್ಲಿಟ್ಟುಕೊಂಡೇ ಕಾಯ್ದೆ ಜಾರಿ ಮಾಡಲಾಗಿತ್ತು. ಯೋಜನೆ ಬಗ್ಗೆ ರೈತರಿಗೆ ತಿಳಿಸುವಲ್ಲಿ ಸಾಕಷ್ಟು ಯತ್ನಿಸಿದ್ದೇವೆ. ಆದರೆ ಕೆಲವು ರೈತರು ಕಾಯ್ದೆಯನ್ನು ಅವರ ಸಲಹೆ ಒಪ್ಪಿಕೊಂಡಿದ್ದರೂ ವಿರೋಧಿಸುತ್ತಿದ್ದಾರೆ. ರೈತರ ನಿರಂತರ ಹೋರಾಟದ ಹಿನ್ನೆಲೆಯಲ್ಲಿ ಇದೀಗ ಸರ್ಕಾರ ಮೂರು ಕೃಷಿ ಕಾಯ್ದೆ ವಾಪಸ್ ಪಡೆಯಲು ನಿರ್ಧರಿಸಲಾಗಿದೆ ಎಂದು ಪ್ರಧಾನಿ ಘೋಷಿಸಿದ್ದಾರೆ.

Ad Widget

Ad Widget

Ad Widget

ಭಾಷಣದಲ್ಲಿ ಮೊದಲು ರೈತರ ಸಮಸ್ಯೆಯ ಕುರಿತು ಮಾತನಾಡಿದ ಪ್ರಧಾನಿ, ರೈತರ ಸಮಸ್ಯೆ ಬಗೆಹರಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ದೇಶದಲ್ಲಿ 100ರಲ್ಲಿ 80 ಪ್ರತಿಶತ ರೈತರು ಸಣ್ಣ ಹಿಡುವಳಿ ರೈತರಾಗಿದ್ದು, 10 ಕೋಟಿಗಿಂತ ಹೆಚ್ಚು ಸಣ್ಣ ರೈತರಿದ್ದಾರೆ. ಅವರ ಸಮಸ್ಯೆಗಳನ್ನು ನಾನು ಅರಿತಿದ್ದೇನೆ. ಅದನ್ನು ಬಗೆಹರಿಸಲು ಪ್ರಯತ್ನ ಮಾಡಲಾಗುತ್ತಿದ್ದು, ಬೀಜ, ವಿಮೆ, ಮಾರುಕಟ್ಟೆ, ಉಳಿತಾಯಕ್ಕೆ ಯೋಜನೆಗಳಿಗಾಗಿ ರೈತರಿಗೆ ಫಸಲ್ ಬಿಮಾ, ಪೆನ್ಷನ್‌ ಯೋಜನೆ ಜಾರಿಗೆ ತಂದಿದ್ದೇವೆ. ಕೃಷಿ ಮಾರುಕಟ್ಟೆ ಆಧುನೀಕರಣಕ್ಕೆ ಕೋಟ್ಯಂತರ ರೂ. ಖರ್ಚು ಮಾಡಲಾಗುತ್ತಿದೆ. ರೈತರು ಈಗ ಎಲ್ಲಿ ಬೇಕಾದರೂ ತಮ್ಮ ಬೆಳೆ ಮಾರಬಹುದು. ಕೃಷಿ ಬಜೆಟ್‌ ಮೊದಲಿಗಿಂತ 5 ಪಟ್ಟು ಹೆಚ್ಚಿಸಿದ್ದೇವೆ. ರೈತರಿಗೆ 22 ಕೋಟಿ ಸಾಯಿಲ್ ಹೆಲ್ತ್ ಕಾರ್ಡ್‌ ನೀಡಿದ್ದೇವೆ ಎಂದು ಪ್ರಧಾನಿ ಹೇಳಿದ್ದಾರೆ.

Ad Widget

ಸುಮಾರು ಒಂದು ವರ್ಷದಿಂದ ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೆಹಲಿಯ ಗಡಿ ಭಾಗಗಳಲ್ಲಿ ಹೋರಾಟ ನಡೆಸುತ್ತಿದ್ದಾರೆ. ಒಂದೂವರೆ ವರ್ಷದ ಬಳಿಕ ಕರ್ತಾರ್‌ಪುರ್ ಕಾರಿಡಾರ್ ಅನ್ನು ಮತ್ತೆ ತೆರೆಯಲಾಗಿದೆ. 2 ಹೆಕ್ಟೇರ್‌ಗಿಂತ ಅಧಿಕ ಭೂಮಿ ಇಲ್ಲದ ಸಣ್ಣ ರೈತರ ಒಳಿತಿಗಾಗಿ ಸರ್ಕಾರ ಶ್ರಮಿಸಿದೆ ಎಂದು ಹೇಳಿದರು

Ad Widget

Ad Widget

Leave a Reply

Recent Posts

ಮಹಿಳಾ ಪೊಲೀಸ್ ಪೇದೆಯನ್ನು ಹತ್ಯೆಗೈದು ನಾಪತ್ತೆಯಾಗಿದ್ದಳೆ ಎಂದು ಬಿಂಬಿಸಿದ್ದ ಸಹೋದ್ಯೋಗಿ ಎರಡು ವರ್ಷಗಳ ಬಳಿಕ ಅಂದರ್ ! ಚೈತ್ರಾ ಟಿಕೆಟ್‌ ಡೀಲ್ ನಂತೆ ನಕಲಿ ಪಾತ್ರ, ತಿರುಚಿದ ಆಡಿಯೋ, ನಕಲಿ ಕೊವೀಡ್‌ ಸರ್ಟಿಫಿಕೆಟ್‌ – ಅಬ್ಬಾಬ್ಬ ಕೊಲೆಯನ್ನು ಮುಚ್ಚಲು ಈ ಕ್ರಿಮಿನಲ್‌ ಮಾಡಿದ ಪ್ಲ್ಯಾನ್‌ ಒಂದಾ ಎರಡಾ ?

error: Content is protected !!
%d bloggers like this: