ಶಬರಿಮಲೆಯ ಅರವಣ ಪಾಯಸದಲ್ಲಿ ಹಲಾಲ್-ಪ್ರಮಾಣೀಕೃತ’ ಬೆಲ್ಲ ಬಳಕೆ ಪ್ರಕರಣ- ವಿಸ್ತೃತ ವರದಿ ಸಲ್ಲಿಸುವಂತೆ ಸರಕಾರ ಹಾಗೂ ಟಿಡಿಬಿಗೆ ಸೂಚಿಸಿದ ಕೇರಳ ಹೈಕೋರ್ಟು | ಈ ಪ್ರಕರಣದ ಬಗ್ಗೆ ಟಿಡಿಬಿ ನ್ಯಾಯಾಲಯಕ್ಕೆ ಹೇಳಿದ್ದೇನು?

shabarimale
Ad Widget

Ad Widget

Ad Widget

ತಿರುವನಂತಪುರಂ : ನ 18: ಶಬರಿಮಲೆಯಲ್ಲಿ ‘ನೈವೇದ್ಯ ಮತ್ತು ‘ಪ್ರಸಾದಂ’ ತಯಾರಿಸಲು ಹಾಳಾದ ‘ಹಲಾಲ್-ಪ್ರಮಾಣೀಕೃತ’ ಬೆಲ್ಲದ ಹುಡಿಯನ್ನು ಬಳಸಿದ್ದಾರೆ ಎಂಬ ಆರೋಪದ ಬಗ್ಗೆ ವಿಸ್ತೃತ  ವರದಿ ಸಲ್ಲಿಸುವಂತೆ ಕೇರಳ ಹೈಕೋರ್ಟ್ ಬುಧವಾರ (ನ 17 ) ಶಬರಿಮಲೆ ವಿಶೇಷ ಆಯುಕ್ತರಿಗೆ ನಿರ್ದೇಶನ ನೀಡಿದೆ

Ad Widget

ನ್ಯಾಯಮೂರ್ತಿ ಅನಿಲ್ ಕೆ ನರೇನ್ ದ್ರಾನ್ ಮತ್ತು ನ್ಯಾಯಮೂರ್ತಿ ಪಿ.ಜಿ.ಅಜಿತ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ನಿರ್ದೇಶನ ವನ್ನು ನೀಡಿದೆ. ಟಿಡಿಬಿಯ ಪ್ರತಿನಿಧಿಯೂ “ಇದೊಂದು ಅಧಾರ ರಹಿತ ಸುಳ್ಳು ಆರೋಪ “ ಎಂದು ತಿಳಿಸಿದ ಬಳಿಕವೂ ನ್ಯಾಯಾಲಯವು ಈ ಬಗ್ಗೆ ರಾಜ್ಯ ಸರ್ಕಾರ ಮತ್ತು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಯೂ ವಿವರವಾದ ವರದಿ ನೀಡುವಂತೆ ಸೂಚಿಸಿದೆ

Ad Widget

Ad Widget

Ad Widget

ಕೊಚ್ಚಿ ನಿವಾಸಿ ಎಸ್ ಜೆ ಆರ್ ಕುಮಾರ್ ಎಂಬವರು ಈ ಬಗ್ಗೆ ನ್ಯಾಯಾಲಯಕ್ಕೆ ರಿಟ್‌ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರ ವಕೀಲ ವಿ ಸಜಿತ್ ಕುಮಾರ್ ಅವರು, ತಮ್ಮ ವಾದದಲ್ಲಿ  ‘ಅನ್ಯ ಧರ್ಮದ ಧಾರ್ಮಿಕ ಆಚರಣೆಯಂತೆ ಹಲಾಲ್ ಪ್ರಮಾಣೀಕೃತ  ಬೆಲ್ಲವನ್ನು ದೇವಸ್ಥಾನದಲ್ಲಿ ಬಳಸಿ ಅದನ್ನು ದೇವರಿಗೆ ಅರ್ಪಿಸುವುದು ಅನಾದಿ ಕಾಲದಿಂದಲೂ ದೇವಾಲಯದಲ್ಲಿ ಅನುಸರಿಸಿಕೊಂಡು ಬಂದಿರುವ ಧಾರ್ಮಿಕ ಪದ್ಧತಿಗಳು ಮತ್ತು ಆಚರಣೆಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ತಿಳಿಸಿದರು.

Ad Widget

3 ಲಕ್ಷ ಕೆಜಿ ಬಳಕೆಯಾಗದೆ ಉಳಿದಿತ್ತು:

ಟಿಡಿಬಿ ಪರ ವಕೀಲ ಜಿ ಬಿಜು ಅವರು, “ ರಿಟ್ ಅರ್ಜಿಯಲ್ಲಿನ ಆರೋಪ ಸುಳ್ಳು. ಅಯ್ಯಪ್ಪ ಭಕ್ತರಿಗಾಗಿ ‘ಅಪ್ಪಂ’ ಮತ್ತು ‘ಅರವಣ’ ತಯಾರಿಸಲು TDB 2019 ರಲ್ಲಿ 40 ಲಕ್ಷ ಕೆಜಿ ಬೆಲ್ಲದ ಪುಡಿಯನ್ನು ಖರೀದಿಸಿತ್ತು. ಅದರಲ್ಲಿ, 2020 ರ ಆರಂಭದಲ್ಲಿಯೇ ಸುಮಾರು ಮೂರು ಲಕ್ಷ ಕಿಲೋಗ್ರಾಂಗಳಷ್ಟು  ಬೆಲ್ಲವು ಬಳಕೆಯಾಗದೆ ಉಳಿದಿತ್ತು. ಕೋವೀಡ್‌ ಹಿನ್ನಲೆಯಲ್ಲಿ ಬಳಕೆ ಕುಂಠಿತವಾದ ಹಿನ್ನಲೆಯಲ್ಲಿ ಹೀಗಾಗಿತ್ತು ಎಂದು ವಿವರಿಸಿದರು.  

Ad Widget

Ad Widget

ಆಹಾರ ಮತ್ತು ಸುರಕ್ಷತಾ ಪ್ರಾಧಿಕಾರವು ಆಗಸ್ಟ್ 2021 ರಲ್ಲಿ ಈ ಬೆಲ್ಲದ ಹುಡಿಗಳ  ತಪಾಸಣೆ ನಡೆಸಿತು ಮತ್ತು ಇದನ್ನು  ಅರಾವಣವನ್ನು ತಯಾರಿಸಲು ಬಳಸದಂತೆ ಸೂಚಿಸಿತ್ತು. ಹೀಗಾಗಿ ಮಂಡಳಿಯು ಬೆಲ್ಲವನ್ನು ಹರಾಜು ಹಾಕಿತು. ಬಿಡ್ಡುದಾರರೊಬ್ಬರು “ ಈ  ಬೆಲ್ಲವನ್ನು  ಪಾನೀಯ ಮತ್ತು ಡಿಸ್ಟಿಲರಿ ತಯಾರಿಕ (breweries and distilleries) ಘಟಕಕ್ಕೆ ಖರೀದಿಸಿ ತೆಗೆದುಕೊಂಡು ಹೋಗಿದ್ದರು, ”ಎಂದು ಬಿಜು ಹೇಳಿದರು.

 ಈ ಹಂತದಲ್ಲಿ TDB ಪರ  ವಕೀಲರನ್ನು ನ್ಯಾಯಾಲಯವು “ಇದನ್ನು ಆ ಉದ್ದೇಶಕ್ಕಾಗಿ ಮಾತ್ರ ಬಳಸಲಾಗುತ್ತಿದೆ ಎಂದು ನೀವು ಖಚಿತವಾಗಿ ಹೇಳಬಯಸುವಿರಾ?” ಎಂದು ಪ್ರಶ್ನಿಸಿದೆ. ʼ ಅದನ್ನು ಬೇರೆ ಉದ್ದೇಶಕ್ಕೆ ಬಳಸಿಲ್ಲʼ ಎಂದು TDB ಪರ  ವಕೀಲರು ಸ್ಪಷ್ಟ ಪಡಿಸಿದರು.

ಇದನ್ನೂ ಓದಿ : Big Breaking: ಎಚ್ಚರಿಕೆ…! ಶಬರಿಮಲೆ ಅರವಣ ಪಾಯಸದ ಬಗ್ಗೆ ಅಪಪ್ರಚಾರ ನಡೆಸಿದವರಿಗೆ ಕಾದಿದೆ ಕಾನೂನು ಕ್ರಮ : ಟಿಡಿಬಿ ಎಚ್ಚರಿಕೆ

ಕೆಲವು ಪ್ಯಾಕೆಟ್‌ ಗಳಲ್ಲಿ ಹಲಾಲ್‌ ಲೇಬಲ್‌ :

TDBಯೂ 2019 ರಲ್ಲಿ ಈ ಬೆಲ್ಲದ ಹುಡಿಗಳನ್ನು ಮುಂಬೈ ಮೂಲದ ತಯಾರಕರಿಂದ ಖರೀದಿಸಿದೆ. ಆಗ ಸರಬರಾಜು ಮಾಡಿದ ಬೆಲ್ಲದ ಕೆಲವು ಪ್ಯಾಕೆಟ್‌ಗಳಲ್ಲಿ ‘ಹಲಾಲ್’ ಎಂಬ ಲೇಬಲ್ ಗಳು ಇದ್ದವು.  ಮುಂಬೈ ಮೂಲದ ತಯಾರಕರು  ಬೆಲ್ಲವನ್ನು ಅರೇಬಿಯನ್ ದೇಶಗಳಿಗೂ ರಫ್ತು ಮಾಡುತ್ತಿದ್ದಾರೆ. ಆದ್ದರಿಂದ, ಅವರಿಗೆ ಹಲಾಲ್ ಪ್ರಮಾಣಪತ್ರದ  ಅಗತ್ಯವಿದೆ. ದೇವಸ್ಥಾನಕ್ಕೆ ಸರಬರಾಜು ಮಾಡುವ ಬೆಲ್ಲದ ಪುಡಿಯಲ್ಲಿಯೂ ಹಲಾಲ್ ಲೇಬಲ್ ಹೊಂದಿರುವ ಕೆಲವು ಪ್ಯಾಕೆಟ್‌ಗಳಿದ್ದವು ಎಂದು TDB ಪರ ವಕೀಲರು ನ್ಯಾಯಾಲಯಕ್ಕೆ ವಿವರಿಸಿದರು.

ಅಲ್ಲದೇ,  ದೇವಸ್ವಂ ಮಂಡಳಿಯು ಈ ಬಾರಿ ಮಹಾರಾಷ್ಟ್ರದ ತಯಾರಕರಿಂದ ತಾಜಾ ಬೆಲ್ಲವನ್ನು ಖರೀದಿಸಿದೆ. ಹೀಗಾಗಿ  ಮಂಡಳಿಯ ಮೇಲೆ ಮಾಡಲಾಗಿರುವ ಆರೋಪಗಳು ನಿರಾಧಾರ ಎಂದು ಟಿಡಿಬಿ ಹೇಳಿದೆ. ” ಈ ವರ್ಷ 9.5 ಲಕ್ಷ ಕೆಜಿ ಬೆಲ್ಲವನ್ನು ಮಂಡಳಿಯೂ ಖರೀದಿಸಿದ್ದು. ಅದರ ಗುಣಮಟ್ಟವನ್ನು ಪಂಪಾದಲ್ಲಿ ವಿವಿಧ ಹಂತಗಳಲ್ಲಿ ಪರೀಕ್ಷಿಸಿ ಸನ್ನಿಧಾನಕ್ಕೆ ಸರಬರಾಜು ಮಾಡಲಾಗುತ್ತಿದೆ  ” ಎಂದು ಟಿಡಿಬಿಯೂ ನ್ಯಾಯಾಲಯಕ್ಕೆ ತಿಳಿಸಿತ್ತು.  

ಆ ಎಲ್ಲಾ ಅಂಶಗಳನ್ನು ಒಳಗೊಂಡ ವಿಸ್ತೃತ ಹೇಳಿಕೆಯನ್ನು ಸಲ್ಲಿಸುವಂತೆ ನ್ಯಾಯಾಲಯವು TDB ಗೆ ಸೂಚಿಸಿತು.

ಇದನ್ನೂ ಓದಿ : ಶಬರಿಮಲೆಯಲ್ಲಿ ಮಾರಾಟವಾಗುತ್ತಿದೆಯೇ ಅರೇಬಿಕ್ ಹೆಸರಿನ ಅರವಣ ಪಾಯಸ? ಶಬರಿಮಲೆಯ ಅರವಣ ಪಾಯಸದ ವಿಶೇಷತೆ ಏನೂ? ಇಲ್ಲಿದೆ Fact-Check

ರಿಟ್‌ ಅರ್ಜಿಯಲ್ಲಿ ಏನಿತ್ತು ?

‘ಅರವಣʼ ಮತ್ತು ‘ಉಣ್ಣಿಯಪ್ಪಂ’ಅಯ್ಯಪ್ಪ ದೇವರಿಗೆ ಅರ್ಪಿಸಲಾಗುವ ಪ್ರಮುಖ ನೈವೇದ್ಯ. ದೇವರಿಗೆ ಅರ್ಪಿಸಿದ  ಈ ನೈವೇದ್ಯವನ್ನು ಪ್ರಸಾದವಾಗಿ ಹಂಚಲಾಗುತ್ತದೆ. ಇದನ್ನು ಸ್ವಚ್ಛ ಪರಿಸರದಲ್ಲಿ, ಸಾತ್ವಿಕ್/ಶುದ್ಧ ವಸ್ತುಗಳನ್ನು ಬಳಸಿ ತಯಾರಿಸುವುದು ಅತ್ಯವಶ್ಯಕ. ದೇವರ ಅಭಿಲಾಷೆಯಂತೆ ಇದನ್ನು ಅರ್ಪಿಸಿದರೆ ಮಾತ್ರ, ಪ್ರಸಾದವು ದೇವರ ಕೃಪಾಕಟಾಕ್ಷವನ್ನು ಹೊಂದಿರುತ್ತದೆ. ಅನ್ಯ ಸಮುದಾಯದ ಧಾರ್ಮಿಕ ನಂಬಿಕೆಗಳ ಪ್ರಕಾರ  ತಯಾರಿಸಲಾದ ಹಲಾಲ್-ಪ್ರಮಾಣೀಕೃತ ಆಹಾರ ಸಾಮಗ್ರಿಗಳ ಬಳಕೆಯು ‘ಸಾತ್ವಿಕ/ಶುದ್ಧ’ ವಸ್ತುವಲ್ಲ ಎಂದು ರಿಟ್‌ ಅರ್ಜಿಯಲ್ಲಿ ತಿಳಿಸಲಾಗಿತ್ತು.

ಡಬ್ಬಿಯಲ್ಲಿ ಅರವಣ ಪಾಯಸ
ಅರವಣ ಪಾಯಸ ಪ್ರಸಾದಂ

Leave a Reply

Recent Posts

ದೇಶದಲ್ಲಿ ಹಿಂದೂಗಳ ಶಕ್ತಿ ಹೇಗಿರಬೇಕೆಂದರೆ ಸರ್ಕಾರ ಹಿಂದೂಗಳ ಹೇಳಿಕೆಯಂತೆ ನಡೆಯಬೇಕು..! : ದೇವಸ್ಥಾನಗಳನ್ನು ಸರಕಾರಿಕರಣಗೊಳಿಸಿದಂತೆ ಮಸೀದಿಗಳನ್ನು ಏಕೆ ಮಾಡುವುದಿಲ್ಲ..? ಮಂದಿರ ಸಂಸ್ಕೃತಿ ರಕ್ಷಣೆ ಸಭೆಯಲ್ಲಿ ಚರ್ಚೆ – ಮುಂಬೈಯ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿನ ಭ್ರಷ್ಟಾಚಾರ ಬೆಳಕಿಗೆ ತಂದಿರುವ ಸುಪ್ರಸಿದ್ಧ ಸರ್ಜನ್ ರ ಪುಸ್ತಕ ಬಿಡುಗಡೆ

error: Content is protected !!
%d bloggers like this: