Connect with us

ಬಿಗ್ ನ್ಯೂಸ್

ಬೆಳ್ತಂಗಡಿ : ಅತಿಕ್ರಮಿತ ಜಮೀನು ವಶಪಡಿಸುವ ಅತೀ ದೊಡ್ಡ ಕಾರ್ಯಚಾರಣೆ ಯಶಸ್ವಿ | 37 ಎಕರೆ ಜಮೀನು ಇಲಾಖೆ ಸುಪರ್ಧಿಗೆ ಒಪ್ಪಿಸುವ ಮೂಲಕ ಘಟಾನುಘಟಿ ಅತಿಕ್ರಮಣಕಾರರಿಗೆ ಬಿಸಿಮುಟ್ಟಿಸಿದ ತಹಸೀಲ್ದಾರ್ ಮಹೇಶ್ ಜೆ – ಸಾರ್ವಜನಿಕರಿಂದ ಶ್ಲ್ಯಾಘನೆ

Ad Widget

Ad Widget

Ad Widget

Ad Widget Ad Widget

 ಬೆಳ್ತಂಗಡಿ: ನ : 18 : ಕಾನೂನು ಬಾಹಿರವಾಗಿ ಭೂಮಿ ಅತಿಕ್ರಮಿಸಿಕೊಂಡವರಿಗೆ  ಬೆಳ್ತಂಗಡಿ ತಹಸೀಲ್ದಾರ್ ಮಹೇಶ್ ಜೆ. ಅವರು ಭರ್ಜರಿ ಕಾರ್ಯಾಚರಣೆ ನಡೆಸಿ ಬಿಸಿಮುಟ್ಟಿಸಿದ್ದಾರೆ. ಈ ಮೂಲಕ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಕಂದಾಯ ಇಲಾಖೆಯ ಭೂಮಿಯನ್ನು ಮತ್ತೆ ಇಲಾಖೆಯ ಸುಪರ್ದಿಗೆ ಪಡೆದಿದ್ದಾರೆ.    

Ad Widget

Ad Widget

Ad Widget

Ad Widget

Ad Widget

 ಹಲವು ವರ್ಷಗಳಿಂದ ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಭಾಗಗಳು ಭೂ ಕಳ್ಳರ ಸ್ವರ್ಗವಾಗಿತ್ತು.   ತಮ್ಮ ಸುತ್ತಮುತ್ತ ಆಳುಗಳನ್ನು ಇರಿಸಿ ಗ್ರಾಮ ಮಟ್ಟದಲ್ಲಿ ಅಧಿಕಾರಿಗಳನ್ನು ತಮ್ಮ ಕೈ ಕೆಳಗಿರಿಸಿ ಸರ್ಕಾರಿ ಭೂಮಿಯನ್ನು ಅತಿಕ್ರಮಿಸುವ ಜಾಲ ಬೆಳ್ತಂಗಡಿಯಾಧ್ಯಂತ ನಡೆಯುತ್ತಿತ್ತು.  ಬಹುತೇಕ ಕಡೆಗಳಲ್ಲಿ ಅಧಿಕಾರಿಗಳು ತಮ್ಮತ್ತ  ಬರದಂತೆ ಕೋರ್ಟ್ ಸ್ಟೇ ತರಲಾಗಿತ್ತು. ಈ ಎಲ್ಲಾ ವಿಚಾರಗಳನ್ನು ತಿಳಿದ ಬೆಳ್ತಂಗಡಿಯ ತಹಸೀಲ್ದಾರ್ ಮಹೇಶ್ ಜೆ. ಆರಂಭದಲ್ಲಿ ಅತಿಕ್ರಮಣದಾರರಿಗೆ ನೋಟಿಸ್ ನೀಡಿದರು. ಅದಕ್ಕೆ ಸಕಾರತ್ಮಕ ಸ್ಪಂದನೆ ದೊರಕದಿದ್ದಾಗ , ಅತಿಕ್ರಮಿತ ಜಮೀನು ವಶ ಪಡಿಸಿಕೊಳ್ಳಲು ಮಹತ್ತರ ಯೋಜನೆ ರೂಪಿಸಿದರು. ತಮ್ಮ ನಂಬುಗೆಯ ಕಂದಾಯ ಅಧಿಕಾರಿಗಳ ತಂಡ ರಚಿಸಿ  ಕಾರ್ಯಾಚರಣೆ  ನಡೆಸಿದ ಅವರು ಒಂದೋಂದಾಗಿ  ಅತಿಕ್ರಮಣವನ್ನು ತೆರವುಗೊಳಿಸಿದರು.

Ad Widget

Ad Widget

   ಬೆಳ್ತಂಗಡಿ ತಹಸೀಲ್ದಾರ್ ನೇತೃತ್ವದ ಈ  ಕಾರ್ಯಾರಚರಣೆಯಲ್ಲಿ ಕೆಲವೇ ದಿನದೊಳಗೆ 37.2 ಎಕರೆ ಜಮೀನು ತೆರವುಗೊಳಿಸಲಾಗಿದೆ.  ಜಿಲ್ಲೆಯ ಇತಿಹಾಸದಲ್ಲೇ ತಹಸೀಲ್ದಾರರೊಬ್ಬ ಕಡಿಮೆ ಕಾಲಾವಧಿಯಲ್ಲಿ  ಅತಿಕ್ರಮಣಗೊಂಡ ಅತಿ ಹೆಚ್ಚು ಭೂಮಿಯನ್ನು ಸರ್ಕಾರದ ಸುಪರ್ದಿಗೆ ಒಪ್ಪಿಸಿದ  ಹೆಗ್ಗಳಿಕೆಗೆ ಮಹೇಶ್  ಪಾತ್ರರಾಗಿದ್ದಾರೆ.

Ad Widget

Ad Widget

 10 ವರ್ಷಗಳಿಂದ ಅತಿಕ್ರಮಣ

Ad Widget

Ad Widget

 ಶಾಲಾ ಆಟದ ಮೈದಾನ, ವಿವಿಧ ಅಭಿವೃದ್ಧಿ ಕಾಮಗಾರಿಗೆ ಮೀಸಲಿರಿಸಿದ ಭೂಮಿ  ಕಳೆದ 10 ವರ್ಷಗಳಿಂದ ಅತಿಕ್ರಮಣಗೊಂಡಿರುವ ಬಗ್ಗೆ ಕಂದಾಯ ಇಲಾಖೆಗೆ ಈ ಹಿಂದೆ ದೂರುಗಳು ಬಂದಿದ್ದರೂ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಲು ಹಿಂದೇಟು ಹಾಕುತ್ತಿದ್ದರು. ಇತ್ತೀಚೆಗೆ ಬೆಳ್ತಂಗಡಿ ತಹಸೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡ ಮೈಸೂರು ಮೂಲದ ಅಧಿಕಾರಿ ಮಹೇಶ್ ಜೆ. ಅವರು ತಾಲೂಕಿನ ಮೂಲೆ ಮೂಲೆಗಳಲ್ಲಿರುವ ಕಂದಾಯ ಭೂಮಿಯ ಪರಿಶೀಲನೆ ನಡೆಸಿದ್ದರು. ಈ ವೇಳೆ ಹಲವು ಅತಿಕ್ರಮಣಕಾರರಿಗೆ ನೋಟಿಸ್ ನೀಡಿ ಜಾಗ ತೆರವುಗೊಳಿಸುವಂತೆ ಸೂಚಿಸಿದ್ದರು. ಆದರೆ ಬಹುತೇಕ ಅತಿಕ್ರಮಣಕಾರರು ನೋಟಿಸ್, ಮನವಿಗೆ ಕ್ಯಾರೇ ಮಾಡದ ಹಿನ್ನೆಲೆಯಲ್ಲಿ ಕಂದಾಯ ಅಧಿಕಾರಿಗಳ ಜತೆಗೂಡಿ ತೆರವು ಕಾರ್ಯಾಚರಣೆ ಕೈಗೊಂಡಿದ್ದರು.

 ಶಾಲಾ ಆಟದ ಮೈದಾನ 23 ಕುಟುಂಬಗಳಿಂದ ಕಬಳಿಕೆ

 ಈೀಗಾಗಲೇ ಅಭಿವೃದ್ದಿ ಕಾಮಗಾರಿಗಳಿಗೆ, ಮೈದಾನ, ಸಂಘ ಸಂಸ್ಥೆಗಳ ಕಾರ್ಯಚಟುವಟಿಕೆಗಳಿಗೆ ಮೀಸಲಾಗಿರಿಸಿದ ಭೂಮಿಯೂ ಅತಿಕ್ರಮಣಗೊಂಡ ದೂರು ಇದೆ. ಇತ್ತೀಚೆಗೆ ವೇಣೂರು ವಿಭಾಗದ ಕಂದಾಯ ಅಧಿಕಾರಿ ಎಂ.ಎನ್ ರವಿ ಅವರ ವ್ಯಾಪ್ತಿಯಲ್ಲಿ ಶಾಲಾ ಆಟದ ಮೈದಾನವನ್ನು 23 ಕುಟುಂಬಗಳು ಕಾನೂನು ಬಾಹಿರವಾಗಿ ಅತಿಕ್ರಮಿಸಿರುವ ಬಗ್ಗೆ ತಹಸಿಲ್ದಾರ್ ಅವರಿಗೆ ವರದಿಯನ್ನೂ ಸಲ್ಲಿಸಿದ್ದರು.  ಈ ವರದಿಯ ಆಧಾರದಲ್ಲೂ ತೆರವು ಕಾರ್ಯಾಚರಣೆ ನಡೆಸಿದ ತಹಸೀಲ್ದಾರ್ ಮಹೇಶ್ ಅವರು 2.30 ಎಕರೆ ಭೂಮಿಯನ್ನು ಶಾಲೆಯ ಸುಪರ್ಧಿಗೆ ನೀಡಲಾಗಿದೆ.

ಬೆಳ್ತಂಗಡಿ ತಹಸೀಲ್ದಾರ್ ಮಹೇಶ್ ಜೆ.

ಬೆಳ್ತಂಗಡಿ ಇತಿಹಾಸದಲ್ಲೇ ಅತೀ ದೊಡ್ಡ ಕಾರ್ಯಾಚರಣೆ

 ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ಸರ್ವೆ ನಂ. 113/1ರಲ್ಲಿ 10 ಎಕರೆ, ಪುತ್ತಿಲ ಗ್ರಾಮದ ಸರ್ವೆ ನಂ. 47/1ರಲ್ಲಿ  3.5 ಎಕರೆ, ಕಳಂಜ ಗ್ರಾಮದ ಸರ್ವೆ ನಂ. 29/2ರಲ್ಲಿ 1.1 ಎಕರೆ ಹಾಗೂ  ಸರ್ವೆ ನಂ. 30ರಲ್ಲಿ 4.75 ಎಕರೆ, ಮಚ್ಚಿನ ಗ್ರಾಮದ ಸರ್ವೆ ನಂ. 188/2ರಲ್ಲಿ 2.77 ಎಕರೆ ಹಾಗೂ ಸರ್ವೆ ನಂ. 199/1ರಲ್ಲಿ 2 ಎಕರೆ, ಸವಣಾಲು ಗ್ರಾಮದ ಸರ್ವೆ ನಂ. 31 ಹಾಗೂ 81ರಲ್ಲಿ ಒಟ್ಟು  5 ಎಕರೆ, ಕರಿಮಣೇಲು ಗ್ರಾಮದ ಸರ್ವೆ ನಂ. 114/2ರಲ್ಲಿ 2.30 ಎಕರೆ ಭೂಮಿ ಅತಿಕ್ರಮಣಗೊಂಡಿತ್ತು.    ಒಟ್ಟು 37.2 ಎಕರೆ ಕಂದಾಯ ಭೂಮಿಯನ್ನು  ತೆರವುಗೊಳಿಸಿರುವುದು ಬೆಳ್ತಂಗಡಿ ಇತಿಹಾಸದಲ್ಲೇ ಅತೀ ದೊಡ್ಡ ಕಾರ್ಯಾಚರಣೆ ಎನಿಸಿದೆ.

ಕಂದಾಯ ಭೂಮಿ ಸೇರಿದಂತೆ ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿ ಕಟ್ಟಡ ನಿರ್ಮಿಸುವುದು ಸೇರಿದಂತೆ ಇನ್ನಿತರ ಚಟುವಟಿಕೆ ನಡೆಸುವುದು ಕಾನೂನು ಬಾಹಿರ. ಈಗಾಗಲೇ ಅತಿಕ್ರಮಣಕಾರರಿಗೆ ನೋಟಿಸ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಡೆಗಳಲ್ಲಿ ಅತಿಕ್ರಮಣ ಪತ್ತೆ ಹಚ್ಚಿ ತೆರವು ಕಾರ್ಯಾಚರಣೆ ನಡೆಸಲಾಗಿವುದು ಎಂದು ಬೆಳ್ತಂಗಡಿ ತಹಸೀಲ್ದಾರ್ ಮಹೇಶ್ ಜೆ. ಅತಿಕ್ರಮಣಗಾರರಿಗೆ ಎಚ್ಚರಿಕೆ ನೀಡಿದ್ದಾರೆ.

Click to comment

Leave a Reply

ಸಾಮಾಜಿಕ ಮಾಧ್ಯಮ

Hasana sex tape : ಚುನಾವಣೆ ಹೊಸ್ತಿಲಲ್ಲಿ  ಹಾಸನ ಅಭ್ಯರ್ಥಿಯ ರಾಸಲೀಲೆಯ ಪೆನ್‌ ಡ್ರೈವ್‌  ಸೌಂಡ್‌ ! ಅಸಲಿಯ / ನಕಲಿಯ ತೀವ್ರ ಚರ್ಚೆ

Ad Widget

Ad Widget

Ad Widget

Ad Widget Ad Widget

ಹಾಸನ ಲೋಕಸಭಾ ಕ್ಷೇತ್ರದ  ರಾಜಕೀಯ ಪಕ್ಷವೊಂದರ ಅಭ್ಯರ್ಥಿಯೊರು  ಭಾಗಿಯಾಗಿದ್ದಾರೆ  ಎನ್ನಲಾದ ನೂರಾರು  ರಾಸಲೀಲೆಯ ಫೋಟೋ ಮತ್ತು ವಿಡಿಯೋಗಳನ್ನು ಒಳಗೊಂಡ ಪೆನ್ ಡ್ರೈವ್ ವೊಂದು ಇದೆ ಎಂಬ ಸುದ್ದಿ ಕ್ಷೇತ್ರದಾದ್ಯಂತ ಚುನಾವಣೆಯಲ್ಲಿ ಭಾರಿ ಸಂಚಲನ ಉಂಟು ಮಾಡಿದೆ. ಕೆಲ ಅಶ್ಲೀಲ ವಿಡಿಯೋ ಹಾಗೂ ಫೋಟೊಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇವು ಆ ಪೆನ್‌ ಡ್ರೈವ್‌ ಒಳಗಿನಿಂದ ಸೋರಿಕೆ ಮಾಡಲಾದ ಕ್ಲಿಪಿಂಗ್‌ ಗಳು ಎಂದು ಹೇಳಲಾಗುತ್ತಿದೆ.

Ad Widget

Ad Widget

Ad Widget

Ad Widget

Ad Widget

ಚುನಾವಣೆ ಹೊಸ್ತಿಲಲ್ಲಿ , 3 ದಿನಗಳ ಹಿಂದೆಯಷ್ಟೆ ಈ ಪೆನ್‌ ಡ್ರೈವ್‌ ಚರ್ಚೆ ಮುನ್ನಲೆಗೆ ಬಂದಿದೆ. ಈ ವಿಡಿಯೋ ತುಣುಕುಗಳಲ್ಲಿ ಕೆಲವು ಸಂಘಟನೆಗಳಿಗೆ ಸೇರಿದ ಮಹಿಳೆಯರು, ಅಭ್ಯರ್ಥಿಯ ಪಕ್ಷದ ಮುಖಂಡರ ಪತ್ನಿಯರು ಇದ್ದಾರೆ. ಮನೆ ಕೆಲಸದ ಮಹಿಳೆಯರೂ ಇದ್ದಾರೆ ಎಂಬ ಚರ್ಚೆ ಬಿರುಸಿನಿಂದ ನಡೆದಿದೆ. ತನ್ನಲ್ಲಿ ಕೆಲಸ ಕೇಳಿ ಬಂದ ಯುವತಿಯರು ಹಾಗೂ ಮಹಿಳೆಯರನ್ನು ಆ ವ್ಯಕ್ತಿ ವಿಕೃತವಾಗಿ ಬಳಸಿಕೊಂಡಿದ್ದಾನೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

Ad Widget

Ad Widget

ಆದರೇ ರಾಜಕಾರಣಿಯ ಬೆಂಬಲಿಗರು ಈ ಆರೋಪಗಳನ್ನು ನಿರಾಕರಿಸಿದ್ದು.  ಅತ್ಯಾಧುನಿಕ ಡೀಪ್ ಫೇಕ್ ತಂತ್ರಜ್ಞಾನ ಬಳಸಿ ಈ ವಿಡಿಯೋಗಳನ್ನು  ಎಂದು  ಅಭ್ಯರ್ಥಿಯ ಬೆಂಬಲಿಗರು   ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದಾರೆ.

Ad Widget

Ad Widget

ಚುನಾವಣೆಯ ಪ್ರಚಾರದ ಭರಾಟೆ ಆರಂಭವಾಗಿ ಇಷ್ಟು ದಿನಗಳ ಬಳಿಕ ಇದೀಗ ಕೊನೆಯ ಹಂತದಲ್ಲಿ ಈ ರಾಸಲೀಲೆಯ ವಿಡಿಯೋಗಳನ್ನು ಒಳಗೊಂಡ ಪೆನ್ ಡ್ರೈವ್ ಬಗ್ಗೆ ಚರ್ಚೆ ನಡೆಯುತ್ತಿರುವುದು ಕುತೂಹಲ ಮೂಡಿದ್ದು, ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಈ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡದೆ ಮೌನಕ್ಕೆ  ಶರಣಾಗಿದ್ದಾರೆ.

Ad Widget

Ad Widget

ಈ ಪೆನ್‌ಡ್ರೈನಲ್ಲಿ ಸುಮಾರು ಸಾವಿರಾರು ವಿಡಿಯೋಗಳಿವೆ ಎನ್ನಲಾಗುತ್ತಿದೆ. ಇದರಲ್ಲಿರುವ ಎನ್ನಲಾದ ಅಭ್ಯರ್ಥಿ ತನ್ನ ಬಳಿ ಸಹಾಯ ಕೇಳಿಕೊಂಡು ಬರುವ ಮಹಿಳೆಯರನ್ನು ತನ್ನ ಲೈಂಗಿಕ ತೃಷೆಗೆ ಬಳಸಿಕೊಳ್ಳುತ್ತಿದ್ದ. ಆ ಲೈಂಗಿಕ ಚಟುವಟಿಕೆಯನ್ನು ತಾನೇವಿಡಿಯೋ ಮಾಡಿಟ್ಟುಕೊಳ್ಳುತ್ತಿದ್ದ. ಈಗಾಗಲೇ ಕ್ಷೇತ್ರದ ಹಲವರು ಹಲವರು ಈ ಈ ವಿಡಿಯೋಗಳನ್ನು ನೋಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅದರ ತುಣುಕುಗಳು ಹರಿದಾಡುತ್ತಿವೆ.

 ಈ ಹಿಂದೆ ಹಾಸನದ ವಕೀಲ ದೇವರಾಜೇಗೌಡ ಎಂಬುವವರು ಅಭ್ಯರ್ಥಿಯ ಹಲವು ಅಶ್ಲೀಲ ವಿಡಿ ಯೋಗಳು ತಮ್ಮ ಬಳಿ ಇವೆ ಎಂದು ಹೇಳಿಕೆ ನೀಡಿದ್ದರು. ಆದರೆ, ಇದೀಗ ಈ ವಿಡಿಯೋಗಳನ್ನು ತಾವು ಬಹಿರಂಗ ಗೊಳಿಸಿಲ್ಲ ಎಂದು ಸ್ಪಷ್ಟನೆಯನ್ನೂ ನೀಡಿದ್ದಾರೆ.

Continue Reading

ಬಿಗ್ ನ್ಯೂಸ್

NOTAForSoujanyaCase : ಸೌಜನ್ಯ ಪ್ರಕರಣ : ಟ್ವಿಟರ್ ಟ್ರೆಂಡಿಂಗಲ್ಲಿ 3ನೇ ಸ್ಥಾನ ಪಡೆದ ನೋಟಾ ಅಭಿಯಾನ

Ad Widget

Ad Widget

Ad Widget

Ad Widget Ad Widget

ಮಂಗಳೂರು: 2012ರ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣ ಇದೀಗ ಬಾರಿ ಸದ್ದು ಮಾಡುತ್ತಿದೆ.

Ad Widget

Ad Widget

Ad Widget

Ad Widget

Ad Widget

ಸೌಜನ್ಯ ಪರ ಹೋರಾಟಗಾರರು ಎ.26ರಂದು ಜರಗುವ ಲೋಕಸಭಾ ಚುನಾವಣೆಯಲ್ಲಿ ನೋಟಾ ಮತದಾನದ ಅಭಿಯಾನ ಕೈಗೊಂಡಿದ್ದಾರೆ.

Ad Widget

Ad Widget

ಟ್ವಿಟರ್ (ಎಕ್ಸ್) ನಲ್ಲಿ #NOTAForSoujanyaCase ಎಂಬ ಟ್ರೆಂಡಿಂಗ್ 3ನೇ ಸ್ಥಾನ ಪಡೆದಿದೆ.

Ad Widget

Ad Widget

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಹಾಗೂ ಕೊಡಗಿನಲ್ಲಿ ನೋಟಾ ಅಭಿಯಾನದ ಪರ ಪ್ರಚಾರ ಕಾರ್ಯವನ್ನು ಹೋರಾಟಗಾರರು ನಡೆಸುತ್ತಿದ್ದಾರೆ.

Ad Widget

Ad Widget

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನೋಟಾ ಪರಿಣಾಮ ಯಾವಾ ರೀತಿ ಪಲಿತಾಂಶದ ಮೇಲೆ ಪರಿಣಾಮ ಬೀರಬಹುದೆಂಬ ಅಂಕಿಅಂಶ ಇನ್ನೂ ಕೂಡ ರಾಜಕೀಯ ಪಂಡಿತರಿಗೆ ಅಂದಾಜಿಸಲು ಸಾಧ್ಯವಾಗಿಲ್ಲ.

Continue Reading

ಬಿಗ್ ನ್ಯೂಸ್

ಪದ್ಮರಾಜ್ ಆರ್ ಪೂಜಾರಿ ಬಿಲ್ಲವನಲ್ಲ – ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ – ಜಿಲ್ಲಾ ಕಾಂಗ್ರೆಸ್ ನಿಂದ ಪೊಲೀಸ್ ಕಮೀಷನರ್ ಗೆ ದೂರು

Ad Widget

Ad Widget

Ad Widget

Ad Widget Ad Widget

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಯವರ ಜಾತಿಯನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಸುತ್ತಿದ್ದು ಇದರ ವಿರುದ್ದ , ಜಿಲ್ಲಾ ಕಾಂಗ್ರೆಸ್ ಮಂಗಳೂರು ಪೊಲೀಸ್ ಕಮೀಷನರ್ ಗೆ ದೂರು ನೀಡಿದೆ.

Ad Widget

Ad Widget

Ad Widget

Ad Widget

Ad Widget

ಗಣೇಶ್ ಶೆಟ್ಟಿ ಎಂಬವರು ಯುವನಾಯಕ ಬ್ರಿಜೇಶ್ ಚೌಟ ಫೇಸ್ ಬುಕ್ ಪೇಜಿನಲ್ಲಿ ಹಾಗು ಡಾಕ್ಟರ್ಸ್ ಲೀವ್ ಸ್ಟೇಸ್ಟಸ್ ಗ್ರೂಫಿನಲ್ಲಿ ಸಂತೋಷ್ ಕುಮಾರ್ ಎಂಬಾತ ಅಪಪ್ರಚಾರ ನಡೆಸಿದ್ದಾನೆಂದು ದೂರಿನಲ್ಲಿ ಆರೋಪಿಸಲಾಗಿದೆ.

Ad Widget

Ad Widget

ಪದ್ಮರಾಜ್ ಆರ್ ಪೂಜಾರಿಯವರು ಬಿಲ್ಲವ ಸಮುದಾಯಕ್ಕೆ ಸೇರಿದವರಲ್ಲ. ಅವರು ಹಿಂದೂ ಯುವಕನ ಕೊಲೆ ಕೇಸಿನಲ್ಲಿ ಕೊಲೆ ಆರೋಪಿ ಪಿ ಎಫ್ ಐ ಕಾರ್ಯಕರ್ತನ ಪರ ವಕಾಲತ್ತು ವಹಿಸಿದ್ದಾರೆ ಇತ್ಯಾದಿ ಸುಳ್ಳು ಸುದ್ದಿಗಳನ್ನು ಒಳಗೊಂಡ ಪೋಸ್ಟ್ ವೊಂದನ್ನು ವಿರೋದಿಗಳು ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಹಂಚುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ.

Ad Widget

Ad Widget

ಈ ಹಿಂದೆ ಜನಾರ್ಧನ ಪೂಜಾರಿಯನ್ನು ಅನುಸರಿಸಿದ ಅಪಪ್ರಚಾರದ ತಂತ್ರವನ್ನೆ ಅವರ ಶಿಷ್ಯ ಪದ್ಮರಾಜ್ ವಿರುದ್ದವು ಅನುಸರಿಸುತ್ತಿದ್ದು, ಮತದಾರರು ಇದನ್ನು ಸೂಕ್ಷ್ಮವಾಗಿ ಗಮನಿಸಿ ಮುಂಬರುವ ಚುನಾವಣೆಯಲ್ಲಿ ಮತದಾನ ಮಾಡಬೇಕೆಂದು ಅದು ವಿನಂತಿಸಿದೆ.

Ad Widget

Ad Widget
Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading