ಸೌಂದರ್ಯ ಸ್ಪರ್ಧೆಯಲ್ಲಿ ದ.ಕ. ಜಿಲ್ಲೆಯ ಇಬ್ಬರು ಅತ್ಯುನ್ನತ ಸಾಧನೆ ಮೆರೆಯುವ ಮೂಲಕ ತುಳು ನಾಡಿಗೆ ಕೀರ್ತಿ ತಂದಿದ್ದಾರೆ.
ಅನನ್ಯಾ ಸಿಂಗ್ ಗ್ಲೋಬಲ್ ಮಿಸ್ ಇಂಟರ್ನ್ಯಾಷನಲ್ ಇಂಡಿಯಾ ಯೂನಿವರ್ಸ್ 2021 ರ ವಿಜಯಶಾಲಿಯಾಗಿದ್ದು, ನಹಶ್ ಶರಣ್ ಗ್ಲೋಬಲ್ ಮಿಸ್ಟರ್ ಇಂಟರ್ನ್ಯಾಷನಲ್ ಇಂಡಿಯಾ ಯೂನಿವರ್ಸ್ 2021 ರಲ್ಲಿ ಎರಡನೇ ರನ್ನರ್-ಅಪ್ ಅನ್ನು ಪಡೆಯುವ ಮೂಲಕ ತಾವು ಪ್ರತಿನಿಧಿಸಿದ ಕ್ಷೇತ್ರದಲ್ಲಿ ಉನ್ನತ ಸಾಧನೆಗೈದಿದ್ದಾರೆ.
ಅನನ್ಯಾ ಸಿಂಗ್ ಮಂಗಳೂರಿನಲ್ಲಿ ಜನಿಸಿದರೂ, ಅವರು ಬೆಳೆದದ್ದು ಡೆಹ್ರಾಡೂನ್ನಲ್ಲಿ. ಈಕೆ ರಾಜ್‌ಪಾಲ್ ಸಿಂಗ್ ಮತ್ತು ಪ್ರಮೀಳಾ ಬೆಳ್ತಂಗಡಿ ಶೇಷಗಿರಿ ದಂಪತಿಯ ಪುತ್ರಿ.

ಅವರು ದೆಹಲಿ ವಿಶ್ವವಿದ್ಯಾಲಯದಿಂದ ಪದವಿ ಶಿಕ್ಷಣ ಪಡೆದುಕೊಂಡಿದ್ದಾರೆ. ಸದ್ಯ ಅವರು ಸ್ಕೂಲ್ ಆಫ್ ಸೋಷಿಯಲ್ ವರ್ಕ್ ರೋಶಿನಿ ನಿಲಯ”ದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ
ನಹಶ್ ಶರಣ್ ಮಂಗಳೂರಿನ ಮಾರ್ನಮಿಕಟ್ಟೆಯವರು. ಅವರು ಜೈನ ವಿಶ್ವವಿದ್ಯಾನಿಲಯದಲ್ಲಿ ಬಿಬಿಎ ಕಲಿಯುತ್ತಿದ್ದಾರೆ. ನಹಶ್, ದಿಲೀಪ್ ಕುಮಾರ್ ಮತ್ತು ಸಂಜನಾ ಎನ್ ಎಮ್ ದಂಪತಿಗಳ ಪುತ್ರರಾಗಿದ್ದಾರೆ.

ಉನ್ನತ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗಿರುವುದು ಸಂಭ್ರಮ ತಂದಿದೆ. ಇನ್ನೂ ಖುಷಿ ಕೊಟ್ಟ ಸಂಗತಿಯೆಂದರೆ ನನ್ನ ಪ್ರೀತಿಪಾತ್ರರಿಗೆ ನನ್ನ ಈ ಸಾಧನೆ ಸಂತೋಷ ನೀಡಿದೆ. ವಿಜೇತಳಾಗುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ . ನನ್ನನ್ನೂ ನಾನು ಸಾಬೀತು ಪಡಿಸಲು ಬಯಸಿದೆ. ಮಾಡೆಲ್ ಆಗಿ ಇದು ನನ್ನ ಮೊದಲ ಅನುಭವವಾಗಿತ್ತು. ಆದರೇ ಭಾಗವಹಿಸಿದ ಮೊದಲು ವೇದಿಕೆಯಲ್ಲಿ ದೊಡ್ಡ ಗೌರವ ಪ್ರಾಪ್ತಿಯಾಯಿತು ಎಂದು ಅನನ್ಯ ಸಿಂಗ್ ಸಂತಸ ಹಂಚಿಕೊಂಡಿದ್ದಾರೆ .



ತಯಾರಿಗೆ ಹೆಚ್ಚು ಸಮಯವಿರಲಿಲ್ಲ .ಹಾಗಾಗಿ ಸಿದ್ದತೆಗೆ ನಾನು ಇಂಟರ್ ನೆಟ್ ಮೊರೆ ಹೋದೆ. ನನ್ನನ್ನೂ ನಾನು ಆತ್ಮವಿಶ್ವಾಸದಿಂದ ಪ್ರಸ್ತುತಪಡಿಸಲು ಸಾದ್ಯವಿರುವ ಎಲ್ಲವನ್ನೂ ಕಲಿತುಕೊಡೆ. ಶಿಕ್ಷಣ ಹಾಗೂ ಮಾಡೆಲಿಂಗ್ ಎರಡನ್ನೂ ಸಮತೋಲನ ಮಾಡಲು ಒಂದಷ್ಟು ಕಠಿನವಾಗಿತ್ತು . ಆದರೇ ಪ್ರಾಧ್ಯಾಪಕರುಗಳು ಅಗತ್ಯವಿರುವ ಇಲ್ಲ ಸಹಕಾರ ನೀಡಿದರು ಎಂದರು.
