ಪುತ್ತೂರು: ಕಡಬ ತಾಲೂಕಿ ಶಾಂತಿಮೊಗರು ಸೇತುವೆ ಸಮೀಪ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಕಾರು ಡಿಕ್ಕಿಯಾದ ಘಟನೆ ನ.17ರಂದು ಮಧ್ಯಾಹ್ನ ನಡೆದಿದೆ.
ಆಲಂಕಾರು ಕಡೆಯಿಂದ ಬರುತ್ತಿದ್ದ ಹುಂಡೈ ಕ್ರೇಟಾ ಕಾರು ಹಾಗೂ ಪುತ್ತೂರಿನಿಂದ ಶಾಂತಿಮೊಗರು ಮೂಲಕ ಕಡಬಕ್ಕೆ ಹೋಗುವ ಬಸ್ ನಡುವೆ ಡಿಕ್ಕಿ ಸಂಭವಿಸಿದೆ.


ಸವಣೂರಿನ ಕೆಳೆಂಬಿರಿ ಅಬ್ಬಾಸ್ ಎಂಬವರ ಕ್ರೇಟಾ ಕಾರು ( kA 21 P 159) ವಿರುದ್ದ ದಿಕ್ಕಿನಿಂದ ಬರುತಿದ್ದ ಬಸ್ (KA 19 F 3160) ಗೆ ಡಿಕ್ಕಿಯಾಗಿದೆ ಎಂದು ಹೇಳಲಾಗುತ್ತಿದೆ. ಕ್ರೇಟಾ ಕಾರು ಚಾಲಕನ ಅಜಾಗರೂಕತೆಯಿಂದಲೇ ಡಿಕ್ಕಿ ಸಂಭವಿಸಿದೆ ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.
ಬಸ್ ಗೆ ಡಿಕ್ಕಿಯಾದ ಕಾರು ರಸ್ತೆಯ ಬದಿಯ ರಕ್ಷಣಾ ಕಂಬಕ್ಕೆ ಡಿಕ್ಕಿಯಾಗಿ ನಿಂತಿದೆ.
ಅಪಘಾತದಲ್ಲಿ ಯಾವುದೇ ಗಾಯಗಳಗಾದೇ ಎಲ್ಲರೂ ಸುರಕ್ಷಿತವಾಗಿ ಪಾರಾಗಿದ್ದಾರೆ.