ಕಡಬ, ನ 16 : ಮೈ ಮೇಲೆ ಬಿಸಿ ನೀರು ಬಿದ್ದು ವೃದ್ದ ಮಹಿಳೆಯೋರ್ವರು ಮೃತಪಟ್ಟ ಘಟನೆ ಕಡಬದ ಸವಣೂರಿನಲ್ಲಿ ನಡೆದಿದೆ. ಸವಣೂರು ಗ್ರಾಮದ ಮಾಂತೂರಿನ ಕುಂಞಾಲಿಮ್ಮ ( 60) ಮೃತ ದುರ್ದೈವಿ
ನ.15 ರ ಸಾಯಂಕಾಲ ಸ್ನಾನ ಮಾಡಲೆಂದು ಬಿಸಿ ನೀರು ಕಾಯಿಸಿದ್ದರು. ಆ ಬಿಸಿ ನೀರನ್ನು ಸ್ನಾನಗೃಹಕ್ಕೆ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಕೈ ಜಾರಿ ಕೆಳಗೆ ಬೀಳುವುದನ್ನು ತಪ್ಪಿಸಲು ಯತ್ನಿಸಿದ್ದರು . ಆಗ ಮೈಮೇಲೆ ಬಿಸಿನೀರು ಬಿದ್ದಿದೆ. ಅದರ ಪರಿಣಾಮ ಮೈಯೆಲ್ಲಾ ಬೆಂದಂತಾಗಿದೆ. ತಕ್ಷಣವೇ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆ ಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು.
ಗಾಯವು ಗಂಭೀರ ಸ್ವರೂಪದ್ದಾಗಿದ್ದುದರಿಂದ ಆಕೆ ವೈದ್ಯಕೀಯ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ಮೃತ ಮಹಿಳೆಯು ಇತ್ತೀಚಿನ ಕೆಲವು ದಿನಗಳಿಂದ ಮಾನಸಿಕ ಖಿನ್ನತೆಯಿಂದ ಕೂಡ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ.
