ಪುತ್ತೂರು: ಹಲವಾರು ಮನೆಗೆ ಸಂಪರ್ಕದ ಪಂಚಾಯತ್ ಅನುಮೋದಿತ ಕಾಲನಿ ರಸ್ತೆಗೆ ಬೇಲಿ ಹಾಕಿ ಮುಚ್ಚಿದ್ದು ಇಂದು ಪಂಚಾಯತ್ ಅಧ್ಯಕ್ಷರ ಸಮ್ಮುಖದಲ್ಲೇ ಬೇಲಿ ತೆರವುಗೊಳಿಸಲಾಗಿದೆ.
ಮುಂಡೂರು ಗ್ರಾಮದ ಮರ್ತಡ್ಕ-ನಾಡಾಜೆ-ನಡುಬೈಲು-ಕೊಡಿಬೈಲು ನಿವಾಸಿಗಳ ಕಾಲೋನಿಗೆ ಬರುವ ಗ್ರಾಮ ಪಂಚಾಯತ್ ಅನುಮೋದಿಸಿದ ರಸ್ತೆಯನ್ನು ಮುಚ್ಚಿದ್ದು, ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಮತ್ತು ಅಭಿವೃದ್ಧಿ ಅಧಿಕಾರಿಗೆ ದೂರು ಸಲ್ಲಿಸಿದ್ದರು.
ಪಂಚಾಯತ್ ಅನುದಾನದಿಂದ 2019ರಲ್ಲಿ ನಿರ್ಮಾಣವಾದ ಕಾಲೋನಿಗೆ ಬರುವ ರಸ್ತೆಯನ್ನು ನಳಿನಿ ಲೋಕಪ್ಪ ಗೌಡರ ಪತಿ ಲೋಕಪ್ಪ ಗೌಡರು ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಲೋಕಪ್ಪ ಗೌಡ ರ ಪತ್ನಿ ಮುಂಡೂರಿನ ನಳಿನಿ ಲೋಕಪ್ಪ ಎಂಬವರು ನ.13 ರಂದು ಮುಚ್ಚಿರುವ ಬಗ್ಗೆ ಪಂಚಾಯತ್ ಗೆ ದೂರು ನೀಡಲಾಗಿತ್ತು.

ಹಲವು ಸಾರ್ವಜನಿಕರಿಗೆ ಮತ್ತು ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಪಂಚಾಯತ್ ನಿಂದ ಸೂಕ್ತ ನಿರ್ದೇಶನ ನೀಡಿ ರಸ್ತೆಯನ್ನು ತೆರವುಗೊಳಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ನ.17ರಂದು ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾ ಪುರಂದರ ಗೌಡ ಅವರ ನೇತೃತ್ವದಲ್ಲಿ ಗ್ರಾಮ ಕರಣಿಕ ತುಳಸಿ, ಪಿಡಿಓ ಗೀತಾ, ಸದಸ್ಯ ಬಾಲಕೃಷ್ಣ ಪೂಜಾರಿ ಸಮ್ಮುಖದಲ್ಲಿ ಬೇಲಿ ತೆರವುಗೊಳಿಸಲಾಗಿತು. ಸಾರ್ವಜನಿಕ ರಸ್ತೆಗೆ ತೊಂದರೆ ಮಾಡದಂತೆ ಸೂಚನೆ ನೀಡಲಾಗಿದೆ.