ಕಡಬ : ನ 17 : ಬಸ್ಸು ಹಾಗೂ ಕಾರಿನ ಮಧ್ಯೆ ನಡೆದ ಅಪಘಾತದಲ್ಲಿ ಕಾರಿನಲ್ಲಿದ್ದ ನವ ದಂಪತಿಗಳು ಯಾವುದೇ ಗಾಯಗಳು ಇಲ್ಲದೆ, ಪವಾಡ ಸದೃಶ್ಯವಾಗಿ ಪಾರಾದ ಘಟನೆ ಕಡಬದ ಕೋಡಿಂಬಾಳ ಎಂಬಲ್ಲಿ ನ .17 ರಂದು ಸಂಜೆ ನಡೆದಿದೆ.
ಕೆ.ಎಸ್‌ಅರ್ ಟಿಸಿ ಬಸ್ಸು ಹಾಗೂ ಸ್ವಿಪ್ಟ್ ಕಾರಿನ ಮಧ್ಯೆ ಕೋಡಿಂಬಾಳ ಎಂಬಲ್ಲಿ ಈ ಅಪಘಾತ ನಡೆದಿದೆ. ಅಪಘಾತದಲ್ಲಿ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಕಾರಿನಲ್ಲಿ 6-7 ತಿಂಗಳ ಹಿಂದೆ ವಿವಾಹವಾಗಿದ್ದ ನವ ದಂಪತಿಗಳು ಪ್ರಯಾಣಿಸುತ್ತಿದ್ದು ಇಬ್ಬರು ಸೀಟ್ ಬೆಲ್ಟ್ ಧರಿಸಿದ್ದರು. ನವ ದಂಪತಿಗಳು ಕಡಬದ ನಿವಾಸಿಗಳು ಎಂದು ತಿಳಿದು ಬಂದಿದೆ
ಅಪಘಾತದ ಸಂದರ್ಭ ಕಾರಿನ ಮುಂಭಾಗದ ಎರಡು ಏರ್ ಬ್ಯಾಗ್ ಒಪನ್ ಆಗಿದ್ದು, ಹೀಗಾಗಿ ದಂಪತಿಗಳು ಯಾವುದೇ ಗಾಯಗಳಿಲ್ಲದೇ ಪಾರಾಗಿದ್ದಾರೆ. ಕಾರನ್ನು ಪತಿ ಚಲಾಯಿಸುತ್ತಿದ್ದರು ಎನ್ನಲಾಗಿದು, ಇನ್ನೇನು ಕಾರು ಬಸ್ಸಿಗೆ ಡಿಕ್ಕಿ ಹೊಡೆಯುವ ಸಾಧ್ಯತೆಯಿದೆ ಎನ್ನುವಾಗ ಆತ ಕಾರಿನ ಸ್ಟೇರಿಂಗನ್ನು ತಿರುಗಿಸಿದ್ದು, ಅದೇ ವೇಳೆ ಪತ್ನಿ ಏಕಾಏಕಿ ಹ್ಯಾಂಡ್ ಬ್ರೇಕ್ ಎಳೆದ ಕಾರಣ ಕಾರು ಇದ್ದಕ್ಕಿದಂತೆ ತಿರುಗಿ ಬಸ್ಸಿಗೆ ಡಿಕ್ಕಿ ಹೊಡೆದಿದೆ ಎಂದು ಮೂಲಗಳು ತಿಳಿಸಿವೆ.

ದಂಪತಿಗಳು ಮಡಿಕೇರಿಯಿಂದ ತನ್ನ ಮನೆಗೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಯಾವುದೇ ಅಪಾಯ ಸಂಭವಿಸದ ಹಿನ್ಲೆಯಲ್ಲಿ ಕಾರು ಚಾಲಾಕ ಹಾಗೂ ಬಸ್ಸು ಚಾಲಕ ಯಾವುದೇ ಪ್ರಕರಣ ದಾಖಲಿಸದೇ ರಾಜಿ ಮಾತುಕತೆಯಲ್ಲಿ ಪ್ರಕರಣ ಮುಗಿಸಿದ್ದಾರೆ ಎಂದು ತಿಳಿದು ಬಂದಿದೆ.


