ಕಡಬ : ನ 17 : ನಾಯಿಯೊಂದು ವಿದ್ಯಾರ್ಥಿಗೆ ಕಡಿದು ಗಾಯಗೊಳಿಸಿದ , ಇದರಿಂದ ಕ್ರೋದಿತರಾದ ಸಾರ್ವಜನಿಕರು ಆ ನಾಯಿಯನ್ನು ಹೊಡೆದು ಕೊಂದ ಘಟನೆ ಕಡಬ ಪೇಟೆಯಲ್ಲಿ ಬುಧವಾರದಂದು ಬೆಳಿಗ್ಗೆ ನಡೆದಿದೆ.
ಕಡಬ ನಿವಾಸಿ ಹಮೀದ್ ಎಂಬವರ ಪುತ್ರ ಅಫ್ನಾನ್ ನಾಯಿ ಕಡಿತದ ಗಾಯಾಳು.ಅಪ್ನಾನ್ ಎಂದಿನಂತೆ ಮದರಸ ಬಿಟ್ಟು ಮನೆಗೆ ತೆರಳುತ್ತಿದ್ದ ನಾಯಿಯೊಂದು ಎರಗಿ ಕೈಗೆ ಕಚ್ಚಿದೆ ಎಂದು ಹೇಳಲಾಗುತ್ತಿದೆ. ತಕ್ಷಣ ಬಾಲಕನಿಗೆ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಬಾಲಕನಿಗೆ ನಾಯಿ ಕಡಿದುದರಿಂದ ಉದ್ರೀಕ್ತಗೊಂಡ ಕೆಲವರು ಆ ನಾಯಿಯನ್ನು ಹೊಡೆದು ಕೊಂದಿದ್ದಾರೆ. ಬಳಿಕ ಈ ಮಾಹಿತಿಯನ್ನು ಸ್ಥಳೀಯ ಪಟ್ಟಣ ಪಂಚಾಯತ್ ಗೆ ಮಾಹಿತಿ ಒದಗಿಸಿದ್ದಾರೆ.

ಕಚ್ಚಿದ ನಾಯಿಯೂ ಹುಚ್ಚು ನಾಯಿ ಯೆಂದು ಕೆಲವರು ಆರೋಪಿಸಿದ್ದಾರೆ.ವಾರದ ಹಿಂದೆ ಕಡಬದ ಹಳೇಸ್ಟೇಷನ್ ಸಮೀಪ ಬಾಪೂಜಿ ನಗರದಲ್ಲಿ ಹುಚ್ಚುನಾಯಿ ಹಾವಳಿ ಕಂಡುಬಂದಿತ್ತು. ಹಾಗಾಗಿ ಆ ಪೈಕಿ ಒಂದು ನಾಯಿ ಇದು ಆಗಿರಬಹುದು ಎಂದು ಶಂಕಿಸಲಾಗಿದೆ